ಹುಬ್ಬಳ್ಳಿ; ಪೊಲೀಸ್ ಇಲಾಲೆಖೆಗೆ ಸಂಬಂಧಿಸಿದಂತೆ ನೇಮಕ ಮಾಡಲಾಗಿದ್ದ ಔರಾಧಕರ್ ವರದಿ ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ ಗೋಕುಲ ರಸ್ತೆ ವಿಮಾನ ನಿಲ್ದಾಣ ಬಳಿ ಸುದ್ದಿಗಾರರ ಜೊತೆಗೆ. ಮಾತನಾಡಿದರು.
ಪೊಲೀಸರ ವೇತನ ತಾರತಮ್ಯದ ಬಗ್ಗೆ ಸರ್ಕಾರಕ್ಕೆ ಸಲ್ಲಿಸಿದ ರಾಘವೇಂದ್ರ ಔರಾದ್ಕರ್ ವರದಿ ಸಂಪೂರ್ಣವಾಗಿ ಜಾರಿಯಾಗಿದೆ ಎಂದರು.
ಹಿರಿಯ ಅಧಿಕಾರಿ ರಾಘವೇಂದ್ರ ಔರಾದ್ಕರ್ ಅವರು, ಸರ್ಕಾರಕ್ಕೆ ಪೊಲೀಸರ ವೇತನ ತಾರತಮ್ಯದ ಬಗ್ಗೆ ಸ್ಟಡಿ ಮಾಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು ಅದು ಜಾರಿಯಾಗಿದೆ ಎಂದರು
ಸಿಇಟಿ ಗೊಂದಲ ಶೀಘ್ರವಾಗಿ ನಿವಾರಣೆ- ಇನ್ನು ಸಿಇಟಿ ಕುರಿತು ಸಾಕಷ್ಟು ಗೊಂದಲ ಉಂಟಾಗಿದ್ದು ಶೀಘ್ರವೇ ಮುಖ್ಯ ಕಾರ್ಯದರ್ಶಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಾತನಾರಾಯಣ ಜೊತೆಗೆ ಮಾತನಾಡಿ ಬಗೆಹರಿಸಲಾಗುವುದು ಎಂದರು.
ಇಂದು ಎಲ್ಲಾ ಪೊಲೀಸ್ ಠಾಣೆ ಉದ್ಘಾಟನೆ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ವೇಳೆ ಮಾತನಾಡಿ, ಇಂದು ನೇಕಾರನಗರ ಬಾಣತಿಕಟ್ಟೆ ಸರ್ಕಲ್ ಬಳಿ ಕಸಬಾಪೇಟ ಪೊಲೀಸ್ ಠಾಣೆಯ ನೂತನ ಕಟ್ಟಡ, ಗಂಗಾಧರ ನಗರ ಕೆಇಬಿ ಕಛೇರಿ ಹತ್ತಿರ ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ನೂತನ ಕಟ್ಟಡ, ಗೋಕುಲ ರಸ್ತೆ,ವಿದ್ಯಾನಗರ ಹಾಗೂ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗಳ ನೂತನ ಕಟ್ಟಡ ಶಂಕುಸ್ಥಾಪನೆ ನಡೆಯಲಿದೆ ಎಂದರು. ಸಾಕಷ್ಟು ಹುಬ್ಬಳ್ಳಿ ಧಾರವಾಡ ಅವಳಿನಗರ ಅಭಿವೃದ್ಧಿ ಆಗುತ್ತಿದೆ ಎಂದರು. ನಂತರ ತಡರಾತ್ರಿ ಸಹ ಹುಬ್ಬಳ್ಳಿ ಧಾರವಾಡ ಅವಳಿನಗರ ಕುಡಿಯುವ ನೀರಿನ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.
.