Breaking News

ಸಚಿವ ಸ್ಥಾನ ನೀಡದಿದ್ದರೆ ವಿಧಾನಸಭಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ -ಆನಂದ ಮಾಮನಿ

Spread the love

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್​ ರಚನೆ ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಈ ನಡುವೆಯೇ ಸಚಿವ ಸ್ಥಾನ ಆಕಾಂಕ್ಷಿಗಳ ಒತ್ತಡವೂ ಹೆಚ್ಚಾಗಿದ್ದು, ಬಿಜೆಪಿ ಶಾಸಕ ಆನಂದ ಮಾಮನಿ ಅವರು ವಿಧಾನಸಭೆ ಉಪ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಘೋಷಣೆ ಮಾಡಿದ್ದಾರೆ.
ನ್ಯೂಸ್​ಫಸ್ಟ್​​ನೊಂದಿಗೆ ಮಾತನಾಡಿದ ಆನಂದ ಮಾಮನಿ ಅವರು, ನನಗೆ ಸಚಿವ ಸ್ಥಾನ ನೀಡುವ ಭರವಸೆ ಇದೆ, ನೀಡದಿದ್ದರೆ ಇಂದೇ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವ ಸ್ಥಾನ ಸಿಕ್ಕದಿದ್ದರೆ ಆನಂದ ಮಾಮನಿ ರಾಜೀನಾಮೆ ನೀಡುವ ಕುರಿತು ಮೊದಲು ಸಹ ಹೇಳಿದ್ದರು. ಈಗ ಕ್ಯಾಬಿನೆಟ್​ ರಚನೆ ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬಂದರೂ ಇನ್ನೂ ಫೋನ್ ಕರೆ ಬಾರದ ಹಿನ್ನೆಲೆಯಲ್ಲಿ ರಾಜೀನಾಮೆ ಘೋಷಣೆ ಮಾಡೋದಾಗಿ ಮಾಮನಿ ಹೇಳಿದ್ದಾರೆ.
ಇನ್ನೂ ಸಚಿವರ ಪಟ್ಟಿಗೆ ಅಂಕಿತ ಪಡೆಯಲು ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಹೈಕಮಾಂಡ್​ ನಾಯಕರ ಪ್ರದಕ್ಷಿಣೆ ಹಾಕುತ್ತಿದ್ದ ಬೊಮ್ಮಾಯಿ ಅವರು ಇಂದು ಬೆಳಗ್ಗೆ ಬೆಂಗಳೂರಿನತ್ತ ಪ್ರಯಾಣ ಆರಂಭ ಮಾಡಿದ್ದಾರೆ. ಸದ್ಯ, ಮಂತ್ರಿಗಿರಿ ಪಟ್ಟಿಗೆ ಬಿಜೆಪಿ ಹೈಕಮಾಂಡ್​ ನಾಯಕರ ಮುದ್ರೆ ಬಿದ್ದಿದೆ ಎನ್ನಲಾಗ್ತಿದೆ.


Spread the love

About gcsteam

    Check Also

    ಅಭಿವೃದ್ಧಿ ಎಲ್ಲಿ ಆಗಿದೆ ಸಚಿವರೇ ಈ ಆರು ಪ್ರಶ್ನೆಗಳಿಗೆ ಉತ್ತರ ಕೊಡಿ- ರಾಜು ಸಾ ನಾಯಕವಾಡಿ

    Spread the love ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ಸೇರಿದಂತೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆಗಿದೆ ಎನ್ನುವ ಕೇಂದ್ರ …

    Leave a Reply