ಉಚಿತ ಬ್ಯೂಟಿಷನ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ

Spread the love

ಹುಬ್ಬಳ್ಳಿ; ಖ್ಯಾತ ಬ್ಯೂಟಿಷನ್ ಸಂಗೀತಾ ದೇವದಾಸ್ ಅವರ ಉಚಿತವಾಗಿ ನೀಡಿದ ಉಚಿತ ಬ್ಯೂಟಿಷನ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ
ನಗರದ ವೀರ ಸೋಮವಂಶ ಆರ್ಯ ಕ್ಷತ್ರಿಯ ಚಿತ್ರಗಾರ ಸಮಾಜದ ಶ್ರೀ ನಿಮಿಷಾಂಭದೇವಿ ಮಹಿಳಾ ಮಂಡಳದ ಮುಂದಾಳತ್ವದಲ್ಲಿಂದು ದುರ್ಗದ ಬೈಲ್ ನ ಶ್ರೀ ನಿಮಿಷಾಂಭ ದೇವಸ್ಥಾನದಲ್ಲಿಂದು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ಬ್ಯೂಟಿಷನ್ ಸಚಿತ್ರಾ ನಾಯಕ ಆಗಮಿಸಿ ಮಾತನಾಡಿದರು.
ನಿಮಿಷಾಂಭದೇವಿ ಮಹಿಳಾ ಮಂಡಳದ ಅಧ್ಯಕ್ಷೆ ರಾಖಿ ಪೂರ್ಣಾಕರ ಮಾತನಾಡಿ, ಸಂಗೀತಾ ದೇವದಾಸ್ ಉಚಿತವಾಗಿ ನೀಡುತ್ತಿರುವ ಬ್ಯೂಟಿಷನ್ ತರಬೇತಿ
ಬಡ ಹೆಣ್ಣುಮಕ್ಕಳ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಲಿದೆ ಎಂದರು. ಮುಖಂಡರಾದ
ದೀಪಾ ಲೋಕರೆ ಮುಂತಾದವರು ಭಾಗವಹಿಸಿದ್ದರು.
ಇದೇ ಮಾರ್ಚ್ 8 ರಂದು ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಪ್ರಮಾಣಪತ್ರ ವಿತರಣೆ ಮಾಡಲಾಗುವುದು ಎಂದು ಸಂಗೀತಾ ದೇವದಾಸ್ ಹೇಳಿದರು.


Spread the love

Leave a Reply

error: Content is protected !!