ಹುಬ್ಬಳ್ಳಿ : ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾ ಯಣಸ್ವಾಮಿ ಅವರ ಯೋಗ್ಯತೆ ಪ್ರಶ್ನಿಸಿರುವ ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮೂರು ಬಾರಿ ಶಾಸಕರಾದರೂ ಮಂತ್ರಿ ಯಾಗುವ ಯೋಗ್ಯತೆ ಇಲ್ಲ ಎಂದು ಬಿಜೆಪಿ ರಾಜ್ಯ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಟೀಕಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೌತಾಳ, ದಲಿತ ಸಮುದಾಯದ ಶಾಸಕರಾಗಿರುವ ಪ್ರಸಾದ ಅಬ್ಬಯ್ಯ ಅವರು ಯಾವುದೇ ದಲಿತ ಸಮುದಾಯವನ್ನು ಬೆಳೆಸುತ್ತಿಲ್ಲ. ಅಬ್ಬಯ್ಯ ಅವರ ಕುಟುಂಬ ಅಭಿವೃದ್ಧಿಗೊಳ್ಳುತ್ತಿದ್ದೆಯೇ ಹೊರತು, ದಲಿತ ಸಮುದಾಯ ಅಭಿಯಾಗುತ್ತಿಲ್ಲ.ಪೂರ್ವ ಕ್ಷೇತ್ರವೂ ಅಭಿವೃದ್ಧಿಗೊಳ್ಳುತತಿಲ್ಲ. ಅಬ್ಬಯ್ಯ ಅವರು ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಸಿದ್ಧಾರ್ಥ ವಿಹಾರ ಟ್ರಸ್ಟ್‌ನಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಯೋಗ್ಯತೆಯನ್ನು ಶಾಸಕ ಪ್ರಸಾದ ಅಬ್ಬಯ್ಯ ಪ್ರಶ್ನೆ ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಮೂರು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾದರು. ಆದರೆ, ಪ್ರಸಾದ ಅಬ್ಬಯ್ಯ ಮಂತ್ರಿಸ್ಥಾನಕ್ಕಾಗಿ ಖರ್ಗೆ ಕುಟುಂಬದ ಮನೆ ಕಾಯ್ದಿದ್ದೇ ಬಂತು. ಶಾಸಕರಾಗಿ ಮೂರು ವರ್ಷವಾದರೂ ಮಂತ್ರಿಯಾಗುವ ಯೋಗ್ಯತೆ ಪಡೆದುಕೊಳ್ಳಲಿಲ್ಲ ಎಂದು ಟೀಕಿಸಿದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರನ್ನು ಒಲೈಕೆ ಮಾಡುವುದಕ್ಕಾಗಿ ಪ್ರಸಾದ ಅಬ್ಬಯ್ಯ ಅವರು ಛಲವಾದಿ ನಾರಾಯಣಸ್ವಾಮಿಯವರನ್ನು ವಿರೋಧಿಸುತ್ತಿದ್ದಾರೆ ಎಂದು ದೂರಿದರು.
ಮುಖಂಡರಾದ ನಾಗರಾಜ ಟಗರಗುಂಟಿ, ಡಾ.ಕ್ರಾಂತಿ ಕಿರಣ, ಮಣಿಕಂಠ ಶ್ಯಾಗೋಟಿ, ಶಶಿಕಾಂತ ಬಿಜವಾಡ, ಪರಶುರಾಮ ಪೂಜಾರ ಇದ್ದರು.
Check Also
ಗ್ರಾಹಕರಲ್ಲಿ ಗುಣಮಟ್ಟದ ವಸ್ತುಗಳ ಜಾಗೃತಿಗಾಗಿ ಕ್ವಾಲಿಟಿ ವಾಕ್
Spread the loveಹುಬ್ಬಳ್ಳಿ: ಇಲ್ಲಿಯ ಬ್ಯೂರೋ ಆಫ್ ಇಂಡಿಯನ್ ಸ್ಟಶ್ಚಯಂಡರ್ಡ್ಸ್ (ಬಿಐಎಸ್) ಶಾಖೆ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಕ್ವಾಲಿಟಿ ವಾಕ್‌ಗೆ …