Breaking News

ಬೆಂಗೇರಿ ಖಾದಿ ಕೇಂದ್ರಕ್ಕೆ ರಾಹುಲ್‌ ಗಾಂಧಿ ಭೇಟಿ

Spread the love

ಹುಬ್ಬಳ್ಳಿ; ನಗರದ ಬೇಂಗೇರಿಯಲ್ಲಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಅಖಿಲ್ ಭಾರತೀಯ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬೇಟಿ‌ ನೀಡಿದರು.
ರಾಷ್ಟ್ರಧ್ವಜವನ್ನು ಪಾಲಿಸ್ಟರ್‌ನಲ್ಲಿ ರೂಪಿಸಲು ನೀಡಿದ ಅವಕಾಶವನ್ನು ತಕ್ಷಣ ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು
ಕಾಂಗ್ರೆಸ್ ಹೋರಾಟ ಮಾಡಿತ್ತು ಈ ಹಿನ್ನೆಲೆಯಲ್ಲಿ
ಅಖಿಲ್ ಭಾರತೀಯ ಕಾಂಗ್ರೆಸ್ ಸಮಿತಿ ವರಿಷ್ಠ ರಾಹುಲ್ ಗಾಂಧಿ ಅವರು ಹುಬ್ಬಳ್ಳಿಯ ಬೆಂಗೇರಿಯಲ್ಲಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ರಾಷ್ಟ್ರ ಧ್ವಜ ತಯಾರಿಕೆ ಕುರಿತು ಮಾಹಿತಿ ಪಡೆದುಕೊಂಡರು.
ಧ್ವಜ ತಯಾರಿಸುವ ಮಹಿಳಾ ಸಿಬ್ಬಂದಿ, ಕೇಂದ್ರದ ಕಾರ್ಯದರ್ಶಿಗಳಿಂದ ಧ್ವಜಕ್ಕೆ ಈ ಬಾರಿ ಬಂದಿರುವ ಬೇಡಿಕೆ,‌ಸಮಸ್ಯೆ ಹಾಗೂ ರಾಷ್ಟ್ರ ಧ್ವಜ 2022 ರಕ್ಕೆ ತಿದ್ದುಪಡಿ ಪಡೆ ಕುರಿತು ಹೋರಾಟ ಯಾವ ರೀತಿ ಹೋರಾಟ ಮಾಡಬೇಕು, ಕಾಂಗ್ರೆಸ್ ಖಾದಿ ಚಳುವಳಿಗೆ ಮಾಡಿದ ತ್ಯಾಗ ಬಲಿದಾನ ಕುರಿತು ತಿಳುವಳಿಕೆ, ಖಾದಿ ಬಟ್ಟೆ ನಿರ್ಲಕ್ಷ್ಯ ಯಾಕೆ ಭಾರತೀಯ ಜನತಾ ಪಕ್ಷ ನಿರ್ಲಕ್ಷ್ಯ ಮಾಡಲಾಗುತ್ತಿದೆ, ಸ್ವಾತಂತ್ರ್ಯ ಹೋರಾಟದಲ್ಲಿ ಖಾದಿ ಮಹತ್ವ ಕುರಿತು ಚರ್ಚೆ ಮಾಡಿದರು.
ಇದರ ಜೊತೆಗೆ ಖಾದಿ ಕಾರ್ಮಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಉದ್ಯೋಗ ಭದ್ರತೆಯನ್ನು ಕೇಂದ್ರ ಸರ್ಕಾರ ನೀಡಬೇಕಾಗಿದೆ. ಕಾರಣ ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದು ಯಶಸ್ವಿಯಾಗಲು ತಾವು ತಮ್ಮ ಭರವಸೆ ನೀಡಿದರು.
ಇಡಿ ದೇಶಕ್ಕೆ ಇಲ್ಲಿಂದ ರಾಷ್ಟ್ರಧ್ವಜ ಹೋಗುತ್ತದೆ. ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಪಾಲಿಸ್ಟರ್‌, ಸಿಂಥೆಟಿಕ್‌ನಲ್ಲಿ ಧ್ವಜ ರೂಪಿಸಲು ಅವಕಾಶ ನೀಡಲಾದ ಹಿನ್ನೆಲೆಯಲ್ಲಿ ಇಲ್ಲಿನ ಪರಿಸ್ಥಿತಿ ಕುರಿತು ಕಳವಳ ಸಹ ವ್ಯಕ್ತಪಡಿಸಿದರು. ಕಾನೂನು ಬದಲಾವಣೆ ಮಾಡಿ ಪಾಲಿಸ್ಟರ್‌ ರಾಷ್ಟ್ರಧ್ವಜ ಹಾರಿಸಲು ಮುಂದಾಗಿರುವುದು ಸರಿಯಲ್ಲ. ಸರ್ಕಾರ ಮಾಡಿರುವ ಆದೇಶವನ್ನು ಹಿಂಪಡೆಯಬೇಕು. ಮನೆ-ಮನೆಗೆ ಖಾದಿ ಧ್ವಜ ಹಾರಿಸುವಂತಾಗಬೇಕು. ಮೇಕ್‌ ಇನ್‌ ಇಂಡಿಯಾ ಎನ್ನುವ ಪ್ರಧಾನಿ ನರೇಂದ್ರ ಮೋದಿ ಚೀನಾ, ಇತರೆ ದೇಶಗಳಿಂದ ಬರುವ ಸಿಂಥೆಟಿಕ್‌, ಪಾಲಿಸ್ಟರ್‌ ಬಟ್ಟೆಯಲ್ಲಿ ಸೂರತ್‌ನಲ್ಲಿ ಧ್ವಜವನ್ನು ಮಷಿನ್‌ ಮೂಲಕ ಮಾಡಿಸುವ ವ್ಯವಸ್ಥೆ ಕುರಿತು ವರದಿಯಲ್ಲಿ ಪ್ರಸ್ತಾಪ ಮಾಡಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಂತಾದವರಿದ್ದರು ‌
ಸನ್ಮಾನ; ಇದೇ ವೇಳೇ ಖಾದಿ ಗ್ರಾಮೋದ್ಯೋಗ ಕೇಂದ್ರದ ವತಿಯಿಂದ ರಾಹುಲ್ ಗಾಂಧಿ ಅವರನ್ನು ಸನ್ಮಾನ ಮಾಡಲಾಯಿತು ‌


Spread the love

About Karnataka Junction

    Check Also

    ಜೂನ್ 16 ರಂದು ಬೃಹತ್ ಪ್ರಮಾಣದ ಚಕ್ಕಡಿ ಓಡಿಸುವ ಸ್ಪರ್ಧೆ

    Spread the loveಜೂನ್ 16 ರಂದು ಬೃಹತ್ ಪ್ರಮಾಣದ ಚಕ್ಕಡಿ ಓಡಿಸುವ ಸ್ಪರ್ಧೆ ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಉಣಕಲ್ ಗ್ರಾಮದ …

    Leave a Reply

    error: Content is protected !!