Breaking News

ನವಲಗುಂದ ಅಂಗನವಾಡಿ ಕೇಂದ್ರದಲ್ಲಿ ಕಳಪೆ ಆಹಾರ ಪೂರೈಕೆ ಆರೋಪ

Spread the love

ಹುಬ್ಬಳ್ಳಿ: ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಬೇರೋರಿದೆ ಎಂದರೆ ಮಕ್ಕಳು ತಿನ್ನುವ ಆಹಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಲಾಗುತ್ತದೆ ಎಂಬ ಗಂಭೀರವಾದ ಆರೋಪ ಈಗ ಕೇಳಿ ಬಂದಿದೆ.
ಇತ್ತೀಚಿಗೆ ದಿನಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳು ಮಾರಾ ಟವಾಗುವುದು ಸರ್ವೆ ಸಾಮಾನ್ಯವಾಗಿತ್ತು. ಆದರೆ ಇನ್ನೊಂದು ದೊಡ್ಡ ದುರಂತ ಎಂದರೆ ಇದೇ ಆಹಾರವನ್ನ ಚಿಕ್ಕ ಮಕ್ಕಳಿಗೆ ನೀಡುತ್ತಿರುವುದು ದುರಾದೃಷ್ಟಕರ ಸಂಗತಿ.‌ಇದು ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ 12ನೇ ಅಂಗನವಾಡಿ ಕೇಂದ್ರದಲ್ಲಿ ಕಳಪೆ ಆಹಾರ ಪೂರೈಕೆ ಮಾಡಿರೋದಕ್ಕೆ ಈಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು…. ಕಳೆದ ಎರಡು ವರ್ಷಗಳಿಂದ ಮಕ್ಕಳಿಗೆ ನೀಡುತ್ತಿದ್ದ ಶೇಂಗಾ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದೆ. ಅದನ್ನೇ ಮಕ್ಕಳಿಗೆ ನೀಡಲಾಗುತ್ತಿದೆ. ಈ ಕುರಿತು ಹಲವು ಬಾರಿ ದೂರು ನೀಡಿದರೂ ಪ್ರಯೋ ಜನವಾಗಿಲ್ಲ. ಅಲ್ಲದೇ ಈಗ ಬೆಲ್ಲ ಸಹ ಕೂಡಾ ಅತ್ಯಂತ ಕಳಪೆ ಗುಣಮಟ್ಟದನ್ನ ನೀಡಲಾಗಿದೆ ಎಂಬ ಆರೋಪ ದಟ್ಟವಾಗಿದೆ.
ಘಟನೆಯ ಹಿನ್ನೆಲೆ ಸ್ಥಳಕ್ಕೆ ಸಿಡಿಪಿಒ ವಿಜಯಲಕ್ಷ್ಮಿ ಪಾಟೀಲ ಹಾಗೂ ಅಧಿಕಾರಿಗಳು ಭೇಟಿ ನೀಡಿ, ಮಾಹಿತಿ ಪಡೆದರು. ಈಗಾಗಲೇ ಈ ಕುರಿತು ಹಲವಾರು ಬಾರಿ ಇದಕ್ಕೆ ಸಂಭಂದಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿದ ನಂತರ ಹಲವು ಸಾಮಗ್ರಿ ಸರಿಯಾದ ರೀತಿಯಲ್ಲಿ ಪೂರೈಕೆ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಬೆಲ್ಲದ ಪ್ಯಾಕೆಟ್ ವಿಂಗಡಿಸಿ, ಪೂರೈಸುಂತೆ ತಾಕೀತು ಮಾಡಲಾಗುವುದು ಎಂದು ಸಿಡಿಪಿಓ ವಿಜಯಲಕ್ಷ್ಮಿ ಪಾಟೀಲ‌ ಅವರ ಮಾಹಿತಿ ನೀಡಿದ್ದಾರೆ.
ಇಷ್ಟೊಂದು ಬಹಿರಂಗವಾಗಿಯೇ ಮಕ್ಕಳು ತಿನ್ನುವ ಆಹಾರದಲ್ಲಿ ಕಳಪೆ ಗುಣಮಟ್ಟದ್ದು ಆಗಿದೆ ಅಂತಾ ಜಗಿಜ್ಜಾಯಿರಿವಾಗಿದೆ. ಆದರೆ ಇದರಲ್ಲಿ ಕಾಣದ ಕೈಗಳ ಕೈವಾಡ ಜೊತೆಗೆ ಪ್ರಭಾವಿಗಳು ಸಹ ಹಸ್ತಕ್ಷೇಪ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಮಕ್ಕಳನ್ನ ದೇವರಿಗೆ ಹೋಲಿಕೆ ಮಾಡುತ್ತಾರೆ ಆದ್ದರಿಂದ ಮಕ್ಕಳಿಗೆ ಮೋಸ ಮಾಡಿದರೆ ದೇವರಿಗೆ ಮೋಸ ಮಾಡಿದ ಹಾಗೇ. ಯಾರು ಈ ರೀತಿಯಾದ ಕಳಪೆ ಆಹಾರವನ್ನು ಅಂಗನವಾಡಿಗಳಿಗೆ ಸರಬರಾಜು ಮಾಡುತ್ತಾರೆ ಅಥವಾ ಯಾರು ಅಂಗನವಾಡಿಗಳಿಗೆ ಆಹಾರ ಸರಬರಾಜು ಮಾಡುವ ಟೆಂಡರ್ ಅಂದರೆ ಅದರ ಹೊಣೆ ತೆಗೆದುಕೊಂಡಿದ್ದಾರೆ ಅವರ ಪಾತ್ರ ಏನು ಇದೇ ಅಂತಾ ತನಿಖೆ ಮಾಡಬೇಕು. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದರೆ ಮಾತ್ರ ಇದಕ್ಕೆ ಕಡಿವಾಣ ಹಾಕಬಹುದು. ಇನ್ನು ಜನಪ್ರತಿ‌ಧಿಗಳೇ ಪರೋಕ್ಷವಾಗಿ ಇದಕ್ಕೆ ಬೆಂಬಲಕ್ಕೆ ನಿಂತಿದ್ದಾರಾ ಎಂಬ ಬಗ್ಗೆ ಅನುಮಾನ ಆರೋಪ ಕೇಳಿ ಬಂದಿವೆ. ಇದೆಕ್ಕೆಲ್ಲಾ ಒಂದು ತಾರ್ಕಿಕ ಅಂತ್ಯ ಕಾಣಬೇಕಾದರೆ ನಿಷ್ಪಕ್ಷಪಾತ, ‌ಪಾರದರ್ಶಕ ತನಿಖೆ ನಡೆಯಬೇಕು ಅಷ್ಟೇ.


Spread the love

About Karnataka Junction

[ajax_load_more]

Check Also

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು

Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …

Leave a Reply

error: Content is protected !!