Breaking News

*ನಾಲ್ಕು ವರ್ಷದ ಬಳಿಕ ಧಾರವಾಡಕ್ಕೆ ಬಂದು ಮತದಾನ ಮಾಡಿ ಹೋದ ವಿನಯ್ ಕುಲಕರ್ಣಿ*

Spread the love

*ನಾಲ್ಕು ವರ್ಷದ ಬಳಿಕ ಧಾರವಾಡಕ್ಕೆ ಬಂದು ಮತದಾನ ಮಾಡಿ ಹೋದ ವಿನಯ್ ಕುಲಕರ್ಣಿ*

ಧಾರವಾಡ: ಕ್ಷೇತ್ರದ ಹೊರಗಿದ್ದುಕೊಂಡೇ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಶಾಸಕ ವಿನಯ್ ಕುಲಕರ್ಣಿ ನಾಲ್ಕು ವರ್ಷದ ಬಳಿಕ ಧಾರವಾಡಕ್ಕೆ ಕಾಲಿಟ್ಟಿದ್ದಾರೆ. ಅದೂ ಸಹ ಕೊಂಚ ಸಮಯದವರೆಗೆ ಮಾತ್ರ.

ಹೌದು! ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸ ಅನುಭವಿಸಿ, ಜಾಮೀನಿನ ಮೇಲೆ ಹೊರಗಿರುವ ವಿನಯ್ ಕುಲಕರ್ಣಿ ಅವರು ಯಾವುದೇ ಕಾರಣಕ್ಕೂ ಧಾರವಾಡ ಜಿಲ್ಲಾ ಪ್ರವೇಶ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ. ಹೀಗಿದ್ದರೂ ವಿನಯ್ ಕುಲಕರ್ಣಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಅದಾದ ಬಳಿಕ ಹಲವು ಬಾರಿ ತಮಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಅವರು ಅರ್ಜಿ ಸಲ್ಲಿಸುತ್ತಲೇ ಬಂದಿದ್ದರೂ ನ್ಯಾಯಾಲಯ ಮಾತ್ರ ಅವರ ಅರ್ಜಿಯನ್ನು ತಿರಸ್ಕರಿಸುತ್ತಲೇ ಬಂದಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡುವ ಸಲುವಾಗಿ ಧಾರವಾಡಕ್ಕೆ ಹೋಗಲು ಅವಕಾಶ ನೀಡಬೇಕು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಿನಯ್ ಅರ್ಜಿ ಸಲ್ಲಿಸಿದ್ದರು. ಈ ನ್ಯಾಯಾಲಯ ಕೂಡ ಅವರ ಅರ್ಜಿ ತಿರಸ್ಕರಿಸಿದ ಹಿನ್ನೆಲೆ ಅವರು ಬೆಂಗಳೂರಿನ ಹೈಕೋರ್ಟ್ ಮೊರೆ ಹೋಗಿದ್ದರು.

ಹೈಕೋರ್ಟ್, ವಿನಯ್ ಅವರು ಮತದಾನ ಮಾಡಿ ಬರಬಹುದು. ಮತಗಟ್ಟೆಗೆ ತೆರಳಿ ಮತದಾನ ಮಾಡಿದ ಕೂಡಲೇ ಧಾರವಾಡ ಬಿಟ್ಟು ಮತ್ತೆ ಹೊರಡಬೇಕು ಎಂದು ಆದೇಶಿಸಿದ ಹಿನ್ನೆಲೆ ಇಂದು ಧಾರವಾಡ ಸಪ್ತಾಪುರದಲ್ಲಿರುವ ಶಾರದಾ ಸ್ಕೂಲ್‌ಗೆ ಬಂದ ವಿನಯ್ ಅವರು ಅಲ್ಲಿ ತಮ್ಮ ಹಕ್ಕು ಚಲಾಯಿಸಿ ಮತ್ತೆ ಅಲ್ಲಿಂದ ಧಾರವಾಡ ಬಿಟ್ಟು ತೆರಳಿದ್ದಾರೆ. ಅವರು ಧಾರವಾಡಕ್ಕೆ ಬರುತ್ತಿದ್ದಂತೆ ಅಲ್ಲಿ ಸೇರಿದ್ದ ವಿನಯ್ ಅವರ ಬೆಂಬಲಿಗರು ಅವರ ಪರ ಘೋಷಣೆಗಳನ್ನು ಕೂಗಿದರು. ಅವರ ಕೈ ಕುಲುಕಿ ಖುಷಿಪಟ್ಟರು. ವಿನಯ್ ಅವರು ಆಗಮಿಸುತ್ತಿದ್ದಂತೆ ಅವರ ಪತ್ನಿ ಶಿವಲೀಲಾ ಹಾಗೂ ಪುತ್ರಿ ವೈಶಾಲಿ ಕೂಡ ಹರ್ಷ ವ್ಯಕ್ತಪಡಿಸಿ ಅವರನ್ನು ಭೇಟಿಯಾದರು. ಅಲ್ಲದೇ ಕಾರ್ಯಕರ್ತರು ವಿನಯ್ ಅವರ ಕಾರಿನ ಮೇಲೆ ಪುಷ್ಪ ವೃಷ್ಟಿ ಸುರಿಸಿದರು.

ವಿನಯ್ ಅವರಿಗೆ ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಸಾಥ್ ನೀಡಿದರು.


Spread the love

About Karnataka Junction

    Check Also

    ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ

    Spread the loveಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಆಹಾರ ಹಾಗೂ ಗ್ರಾಹಕ …

    Leave a Reply

    error: Content is protected !!