ಹುಬ್ಬಳ್ಳಿ; ಕೋವಿಡ್ ಸೋಂಕು ಸಾಕಷ್ಟು ಜನರಿಗೆ ತೊಂದರೆ ನೀಡಿದೆ. ಅಪಾರ ಪ್ರಮಾಣದ ಸಾವು ನೋವಲ್ಲದೆ ಜನರ ಜೀವನೋಪಾಯದ ಮೇಲೂ ಪರಿಣಾಮ ಬೀರಿದೆ. ಕೊರೊನದಿಂದ ತೊಂದರೆಗೊ ಳಗಾದ ಜನರಿಗೆ ಮಾಜಿ ಸಚಿವ ಹಾಗೂ ಕಲಘಟಗಿಯ ಮಾಜಿ ಶಾಸಕರಾದ ಸಂತೋಷ್ ಲಾಡ್ ಅವರು ಮುಂದೆ ಬಂದಿದ್ದಾರೆ. ಸೋಂಕಿನಿಂದ ಕಷ್ಟ ಎದುರಿಸುತ್ತಿರುವ ತಮ್ಮ ಕ್ಷೇತ್ರದ ಜನರಿಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಎರಡು ಬಾರಿ ಕ್ಷೇತ್ರದ ಜನರು ಅವರನ್ನು ಮತ ನೀಡಿ ಆಶೀರ್ವದಿಸಿದ್ದರು. ಇದಕ್ಕೆ ಪ್ರತಿಯಾಗಿ ಈಗ ಅದರಲ್ಲೂ ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗಿದ್ದಾರೆ.
ಸದ್ಯ ಸಂತೋಷ್ ಲಾಡ್ ಅವರು ಅಧಿಕಾರದಲ್ಲಿಲ್ಲ, ಚುನಾಯಿತ ಪ್ರತಿನಿಧಿಯೂ ಅಲ್ಲ. ಆದರೆ ಅವರು ತಮಗೆ ಬೆಂಬಲ ನೀಡಿದ ಜನರನ್ನು ಕೈಬಿಟ್ಟಿಲ್ಲ. ಕೋವಿಡ್ ಸೋಂಕು ಈಗ ಸಾಕಷ್ಟು ಉಲ್ಬಣವಾಗಿದೆ. ಆದರೆ ಸಂತೋಷ್ ಲಾಡ್ ಅವರು ಸಾಕಷ್ಟು ಹಿಂದೆಯೇ ಕಲಘಟಗಿಯ ಜನರಿಗಾಗಿ ಸಹಾಯವಾಣಿಯನ್ನು ಆರಂಭಿಸಿದ್ದಾರೆ. ಇದರ ಮೂಲಕ ತಜ್ಞ ವೈದ್ಯರಿಂದ ಸಲಹೆ ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತಲಿದ್ದಾರೆ. ಸೋಂಕಿನಿಂದ ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಕುರಿತು ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ತಿಳಿವಳಿಕೆ ನೀಡಿದ್ದಾರೆ.
ಕೊರೊನಾ ಸೋಂಕು ತಡೆಗೆ ಈಗ ಸದ್ಯ ಲಾಕ್‌ಡೌನ್ ಜಾರಿಯಲ್ಲಿದೆ. ಇದರಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಹೊಡೆತ ಬಿದ್ದಿದೆ. ಪರಿಣಾಮವಾಗಿ ಜನರು ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಕ್ಷೇತ್ರದ ಜನರ ಎಲ್ಲ ಮನೆಗಳಿಗೆ ರೂ. 1.5 ಕೋಟಿ ಮೌಲ್ಯದ ಆಹಾರದ ಕಿಟ್‌ಗಳನ್ನು ಸಂತೋಷ್ ಲಾಡ್ ಅವರು ವಿತರಿಸುತ್ತಿದ್ದಾರೆ.
ಇಂತಹ ಮಾನವೀಯ ನೆರವು ನೀಡುವ ಮೂಲಕ ರಾಜ್ಯದ ಯಾವುದೇ ಸಚಿವರೂ, ಜನಪ್ರತಿನಿಧಿಗಳು ಮಾಡದ ಅತ್ಯುತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಆಹಾರದ ಕಿಟ್ ನೀಡುವ ಕೆಲಸವನ್ನು ಈವರೆಗೆ ಯಾರೂ ಮಾಡಿಲ್ಲ ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.
ಕ್ಷೇತ್ರದ ಜನರ ಆರೋಗ್ಯ ಕಾಪಾಡಲು ಸಂತೋಷ್ ಲಾಡ್ ಅವರು ಕೈಗೊಂಡ ಕ್ರಮಗಳು ಹಾಗೂ ಈಗ ಆಹಾರದ ಕಿಟ್‌ಗಳನ್ನು ನೀಡುತ್ತಿರುವ ಕುರಿತು ಲಾಡ್ ಅವರ ಆಪ್ತರು ಹಾಗೂ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ನಿರ್ದೇಶಕರೂ ಆಗಿರುವ ಆನಂದ ಕಲಾಲ್ ತಿಳಿಸಿದ್ದಾರೆ.