ಜನ ಸಾಮಾನ್ಯರ ಹೊರೆ ಇಳಿಸಿದ ‘ಭಗವಂತ’

Spread the love

ಪಂಜಾಬ್ : ಪಂಜಾಬ್ ರಾಜ್ಯದಲ್ಲಿ ಶಿಕ್ಷಣ ಕ್ರಾಂತಿ ಜೋರಾಗಿದೆ. ಆಪ್ ಪಕ್ಷ ಅಧಿಕಾರ ವಹಿಸಿಕೊಂಡ ಮೇಲೆ ಜನ ಸಾಮಾನ್ಯರಿಗೆ ಅನುಕೂಲ ಆಗುವ ಬದಲಾವಣೆಗಳನ್ನು ಮಾಡುತ್ತಿದ್ದು ಕ್ರಾಂತಿ ಕಾರಿ ಹೆಜ್ಜೆಗಳನ್ನು ಇಡುತ್ತಿದೆ. ಈಗ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮಾಡುವ ಮೂಲಕ ಜನ ಸಾಮಾನ್ಯರ ಹೊರೆಯನ್ನು ಕಡಿಮೆ ಮಾಡುತ್ತಿದೆ. ಶಾಲೆಗೆ ಸಂಬಂಧಿಸಿದಂತೆ ಪುಸ್ತಕ ಮತ್ತು ಬಟ್ಟೆಗಳನ್ನು ಖರೀದಿಸಲು ಯಾವುದೇ ಶಾಲೆಯು ಯಾವುದೇ ನಿರ್ದಿಷ್ಟ ಅಂಗಡಿಗಳಿಗೆ ಹೋಗುವಂತೆ ಒತ್ತಡ ಹೇರಬಾರದು ಅಂತ ಪಂಜಾಬ್ ಸಿಎಂ ಭಗವಂತ ಮಾನ್ ಆದೇಶ ಹೊರಡಿಸಿದ್ದಾರೆ. ಪಾಲಕರು ತಮ್ಮ ಅನುಕೂಲಕ್ಕೆ
ಅನುಗುಣವಾಗಿ ಯಾವುದೇ ಅಂಗಡಿಯಿಂದ ತಮ್ಮ ಮಗುವಿಗೆ ಪುಸ್ತಕ-ಉಡುಪುಗಳನ್ನು ಖರೀದಿಸಬಹುದು ಎಂದು ಹೇಳಿದ್ದಾರೆ.
ಈಗಾಗಲೇ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಖಾಸಗಿ ಶಾಲೆಗಳು ಶಾಲಾ ಶುಲ್ಕವನ್ನು ಹೆಚ್ಚಿಸುವುದನ್ನು ನಿಷೇಧಿಸಿದ್ದಾರೆ. ಪಂಜಾಬ್ ಸರ್ಕಾರವು ಒಂದು ನೀತಿಯನ್ನು ತರುತ್ತದೆ, ಅದನ್ನು ಪೋಷಕರ ಒಪ್ಪಿಗೆಯೊಂದಿಗೆ ಸಿದ್ಧಪಡಿಸಲಾಗುತ್ತದೆ. ಶಿಫಾರಸು ಮಾಡಿದ ಪುಸ್ತಕದಂಗಡಿಯಿಂದ ಪುಸ್ತಕಗಳು ಮತ್ತು ಇತರ ವಸ್ತುಗಳನ್ನು ಖರೀದಿಸಲು ಪೋಷಕರನ್ನು ಒತ್ತಾಯಿಸಲು ಖಾಸಗಿ ಶಾಲೆಗಳಿಗೆ ಸಹ ಅನುಮತಿಸಲಾಗುವುದಿಲ್ಲ. ಪಾಲಕರು ತಮ್ಮ ಆಯ್ಕೆಯ ಅಂಗಡಿಗಳಿಂದ ಪಠ್ಯ ಪುಸ್ತಕಗಳು ಮತ್ತು ಇತರ ಲೇಖನ ಸಾಮಗ್ರಿಗಳನ್ನು ಖರೀದಿಸಲು ಮುಕ್ತರಾಗಿರುತ್ತಾರೆ ಎಂದು ಆದೇಶ ಹೊರಡಿಸಿದ್ದಾರೆ.


Spread the love

About gcsteam

    Check Also

    ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟ ಕಾಂಗ್ರೆಸ್ ಗೆ ಮುಖಭಂಗ- ಬಿಜೆಪಿ ವಕ್ತಾರ ರವಿ ನಾಯಕ

    Spread the loveಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿ ಅಧಿಕಾರವನ್ನು …

    Leave a Reply