ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ರಾಜ್ಯದ ವಿದ್ಯುತ್ ಸರಬರಾಜು ಕಂಪನಿ ಆದೇಶ
ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ ಗ್ರಾಹಕರಿಗೆ ವಿದ್ಯುಚ್ಛಕ್ತಿ ಪೂರೈಕೆ ದರ ಹೆಚ್ಚಳ ಮಾಡಿದೆ. 2021-22 ರಲ್ಕಿ ಪ್ರತಿ ಯೂನಿಟ್ ಗೆ ಸರಾಸರಿ 30 ಪೈಸೆಗಳಷ್ಟು ದರಹೆಚ್ಚಳ ಮಾಡಲು ಅನುಮೋದನೆ ನೀಡಿದೆ.
ಚಿಲ್ಲರೆ ವಿದ್ಯುಚ್ಛಕ್ತಿ ಸರಬರಾಜು ದರದಲ್ಲಿ ಸರಾಸರಿ ಶೇ 3.84ರಷ್ಟು ಹೆಚ್ಚಳವಾಗಿದ್ದು, ಈ ಹೊಸ ದರ ಏಪ್ರಿಲ್ ಒಂದರಿಂದ ಅಥವಾ ಅದರ ನಂತರದ ಮೊದಲ ಮೀಟರ್ ಓದುವ ದಿನಾಂಕದಿಂದ ಬಳಕೆ ಮಾಡುವ ವಿದ್ಯುತ್ ಅನ್ವಯವಾಗಲಿದೆ.ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯೂನಿಟ್ಗೆ 135 ಪೈಸೆ ಹೆಚ್ಚಳಕ್ಕೆ ಮನವಿ ಮಾಡಿದ್ದವು. ಇನ್ನು ಲಾಕ್ಡೌನ್ ಇರುವುದರಿಂದ ಏಪ್ರಿಲ್, ಮೇ ತಿಂಗಳ ದರ ಪರಿಷ್ಕರಣೆಯ ಬಾಕಿಯನ್ನು ಯಾವುದೇ ಬಡ್ಡಿ ಇಲ್ಲದೇ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ವಸೂಲಿ ಮಾಡಲು ಆದೇಶಿಸಿದೆ.ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಹಾಗೂ ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳ ಕಾರ್ಯಾಚರಣೆ ವೆಚ್ಚದಲ್ಲಿ ಹೆಚ್ಚಳವಾಗಿದ್ದು, ಆದಾಯದ ಕೊರತೆ ಇರುವುದರಿಂದ ಹಾಗೂ ಹೊಸ ಶಾಖೋತ್ಪನ್ನ ಕೇಂದ್ರಗಳಿಂದ, ನವೀಕರಿಸಬಹುದಾದ ಇಂಧನ ಮೂಲಗಳಮದ ವಿದ್ಯುತ್ ಖರೀದಿ ವೆಚ್ಚದಲ್ಲಿ ಹೆಚ್ಚಳವಾಗಿದೆ.ಜೊತೆಗೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಕೆಲಸ ಮತ್ತು ನಿರ್ವಹಣೆ ವೆಚ್ಚ, ಬಂಡವಾಳ ಕಾಮಗಾರಿಗಳ ವೆಚ್ಚಕ್ಕಾಗಿ ಪಡೆಯುವ ಸಾಲಗಳಿಂದಾಗಿ ರಾಜ್ಯದಲ್ಲಿ ವಿದ್ಯುತ್ ದರಗಳನ್ನು ಏರಿಕೆ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.ಆರ್ಥಿಕ ವರ್ಷ 2020 ರ ಆದಾಯ ಕೊರತೆ, ಹಾಗೂ ಆರ್ಥಿಕ ವರ್ಷ 2022 ಕ್ಕೆ ಮೌಲ್ಯಮಾಪನ ಮಾಡಲಾದ ಒಟ್ಟು ಆದಾಯದ ಅಂತರ ರೂ 1,819.38 ಕೋಟಿ ಆಗಿದೆ. ಈ ಆದಾಯ ಕೊರತೆಯನ್ನು 2021 ಏಪ್ರಿಲ್ 1 ರಿಂದ 2022 ಮಾರ್ಚ್ 31 ರ ವರೆಗೆ ದರ ಪರಿಷ್ಕರಣೆ ಮೂಲಕ ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಂದು
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ರಾಜ್ಯದ ವಿದ್ಯುತ್ ಸರಬರಾಜು ಕಂಪನಿ ಪ್ರಕಟಣೆ ಮೂಲಕ ತಿಳಿಸಿದೆ.