ಬೆಂಗಳೂರು: ಡೆಲಿವರಿ ಬಾಯ್ ಸೋಗಿನಲ್ಲಿ ರಾತ್ರಿ ವೇಳೆ ಬೈಕ್ನಲ್ಲಿ ಓಡಾಡಿ, ಮಹಿಳೆಯರ ಹಿಂಭಾಗ ಕೈಯಿಂದ ಸ್ಪರ್ಶಿಸಿ ವಿಕೃತ ಆನಂದ ಪಡೆಯುತ್ತಿದ್ದ ಸೈಕೋನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಈ ಸೈಕೋ ಅರುಣಕುಮಾರ ಅಂತಾ ಕೆಜಿಎಫ್ನ ರಾರ್ಬಟ್ಸನ್ ಪೇಟೆಯ ನಿವಾಸಿಯಾಗಿದ್ದು, ಕಳೆದ ಮೂರು ತಿಂಗಳ ಹಿಂದೆ ಕೋರಮಂಗಲದ ಮೇಸ್ತ್ರಿ ಪಾಳ್ಯದಲ್ಲಿ ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದ. ಈತನ ಸಹೋದರ ಕೆವಿನ್ ಡೊಂಜೊ ಕಂಪೆನಿಯಲ್ಲಿ ಡೆಲಿವರಿ ಬಾಯ್ ಆಗಿದ್ದ. ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಡರ್ಗಳು ಹೆಚ್ಚಾಗಿದ್ದರಿಂದ ಬೆಳಗ್ಗೆ ಸಮಯದಲ್ಲಿ ಕೆವಿನ್ ಡೆಲಿವರಿ ಮಾಡಿದರೆ, ಮಧ್ಯಾಹ್ನ ನಂತರ ತಮ್ಮ ಅರುಣ್ ಕೆಲಸ ಮಾಡುತ್ತಿದ್ದ. ಒಂದೇ ಐಡಿ ಕಾರ್ಡ್ ನಲ್ಲಿ ಇಬ್ಬರು ಪುಡ್ ಡೆಲಿವರಿ ಮಾಡುತ್ತಿದ್ದರು.ಕಳೆದ ಮೇ 31ರ ರಾತ್ರಿ ಕೋರಮಂಗಲ 4ನೇ ಹಂತದಲ್ಲಿ ಡೆಲಿವರಿಗೆ ಎಂದು ಹೋಗಿದ್ದಾಗ, ಇದೇ ವೇಳೆ ನಡೆದುಕೊಂಡು ಹೋಗುತ್ತಿದ್ದ ಉತ್ತರ ಭಾರತ ಮೂಲದ ಯುವತಿಯನ್ನು ಗುರಿಯಾಗಿಸಿಕೊಂಡು ಆಕೆಯ ಹಿಂಭಾಗಕ್ಕೆ ಹೊಡೆದು ಪರಾರಿಯಾಗಿದ್ದ. ನಂತರ ಯುವತಿ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಿದ್ದಳು. ಕೃತ್ಯ ನಡೆದ ಸ್ಥಳ ಆಧರಿಸಿ ಕೋರಮಂಗಲ ಪೊಲೀಸ್ ಠಾಣೆಗೆ ದೂರು ಹಸ್ತಾಂತರವಾಗಿತ್ತು.ವಿಕೃತಕಾಮಿ ಬಂಧನದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದುಕೊಂಡು ನೋಡಿದಾಗ ಅಸಭ್ಯ ವರ್ತನೆ ತೋರಿರುವುದು ಸ್ಪಷ್ಟವಾಗಿತ್ತು. ಮಡಿವಾಳ ಎಸಿಪಿ ಸುಧೀರ್ ಹೆಗ್ಡೆ ನೀಡಿದ ಸೂಚನೆ ಮೇರೆಗೆ ಪಿಎಸ್ಐ ಪುಟ್ಟಸ್ವಾಮಿ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದೆ.
ಆರೋಪಿ ಪತ್ತೆಗಾಗಿ ಸುಮಾರು 40ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲಿಸಿದಾಗ, ಆರೋಪಿ ಡೋಂಜ್ ಕಂಪೆನಿಯ ಡೆಲಿವರಿ ಬಾಯ್ ಎಂದು ತಿಳಿದು ಬಂದಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಬೈಕ್ ಹಾಗೂ ಆತನ ಮುಖ ಚಹರೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ತಾಂತ್ರಿಕ ತನಿಖೆ ನಡೆಸಿದಾಗ ಆರೋಪಿ ಬಳಸುತ್ತಿದ್ದದ್ದು, ಹೋಂಡಾ ಡಿಯೊ ಬೈಕ್ ಎಂದು ಪತ್ತೆ ಹಚ್ಚಿದ್ದರು. ಇನ್ನೊಂದೆಡೆ ಘಟನೆ ನಡೆದ ಆಸುಪಾಸಿನಲ್ಲಿ ಡೆಲಿವರಿಗೆ ಓಡಾಡಿದ ಬೈಕ್ ಗಳ ಮಾಹಿತಿಯನ್ನು ಡೋಂಜ್ ಕಂಪೆನಿಯಿಂದ ಪಡೆದಿದ್ದರು.80 ಬೈಕ್ ಗಳು ಕೃತ್ಯ ನಡೆದ ದಿನದ ರಾತ್ರಿ ಓಡಾಡಿವೆ ಎಂದು ಮಾಹಿತಿ ನೀಡಿತ್ತು. ಪೂರ್ಣವಾಗಿ ಪರಿಶೀಲಿಸಿದಾಗ ಆರೋಪಿಯ ಅಣ್ಣನ್ನು ಬಳಸುತ್ತಿದ್ದ ಬೈಕ್ ಪತ್ತೆ ಹಚ್ಚಿದ್ದಾರೆ. ಬೈಕ್ ಮಾಲೀಕ ಕೆವಿನ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿ ವಿಡಿಯೋ ತೋರಿಸಿದಾಗ ಸಹೋದರ ಕೃತ್ಯ ಎಸಗಿದ್ದಾನೆ ಎಂದು
Check Also
ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.
Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …