ಬಿಜೆಪಿ ಕಾರ್ಯಾಲಯ ಉದ್ಘಾಟನೆ

Spread the love

ಬಿಜೆಪಿ ಕಾರ್ಯಾಲಯ ಉದ್ಘಾಟನೆ

ಕಲಘಟಗಿ (ಧಾರವಾಡ): ತಾಲೂಕಿನ ನೂತನ ಭಾರತೀಯ ಜನತಾ ಪಾರ್ಟಿ ಉದ್ಘಾಟನಾ ಸಮಾರಂಭ ನಾಳೆ ನಡೆಯಲಿದೆ ಎಂದು ಭಾರತೀಯ ಜನತಾ ಪಕ್ಷದ ನಾಯಕ ನಾಗರಾಜ ಛಬ್ಬಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳವಾರದಂದು ಪಟ್ಟಣದ ಹುಬ್ಬಳ್ಳಿ ಕಾರು ರಸ್ತೆ ಕೆನರಾ ಬ್ಯಾಂಕ್ ಎದುರಿಗೆ ಬಿಜೆಪಿ ನೂತನ ಕಾರ್ಯಾಲಯ ಉದ್ಘಾಟನಾ ಸಮಾರಂಭ ನಡೆಯಲಿದ್ದು ಸಂಸದರು ಹಾಗೂ ಕೇಂದ್ರ ಮಂತ್ರಿಗಳಾದ ಪ್ರಹ್ಲಾದ್ ಜೋಶಿ, ಮೂರು ಸಾವಿರ ಮಠದ ಶ್ರೀ ಗುರು ಸಿದ್ದರಾಜಯೋಗೇಂದ್ರ ಮಹಾಸ್ವಾಮಿಗಳು ಹಾಗೂ ಬಾಲ ತಪಸ್ವಿ ಹನ್ನೆರಡು ಮಠದ ಶ್ರೀ ರೇವಣಸಿದ್ದ ಶಿವಾಚಾರ್ಯರು ಆಗಮಿಸುವರು ಎಂದರು.
ಈ ಸಂದರ್ಭದಲ್ಲಿ ನಾಗರಾಜ್ ಚಬ್ಬಿ ಅವರು ಶಾಸಕರು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ವಾಗ್ದಾಳಿ ನಡೆಸಿದರು ತಾಲೂಕಿನಾದ್ಯಂತ ಮಿತಿಮೀರಿದ ಭ್ರಷ್ಟಾಚಾರ ತಾಲೂಕಿನ ಪ್ರತಿ ಇಲಾಖೆಯಲ್ಲಿ ಹಣ ಇಲ್ಲದೆ ಯಾವುದೇ ಕೆಲಸವು ನಡೆಯೋದಿಲ್ಲ ಸಾರ್ವಜನಿಕರಿಗೆ ಬಹಳ ಸಮಸ್ಯೆಯಾಗಿದೆ. ಇದೇ ರೀತಿ ಮುಂದುವರೆದರೆ ಸರ್ಕಾರಿ ಕಚೇರಿ ಮುಂದೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ತಾಲೂಕಿನಲ್ಲಿ ಒಂದು ವರ್ಷದಿಂದ ಅಭಿವೃದ್ಧಿ ಕಾಣದೆ ಅದೋಗತಿಗೆ ಸಾಗಿದೆ. ತಾಲೂಕಿನ ರೈತರಿಗಾಗಿ ಎಷ್ಟು ಸಭೆಯನ್ನು ಕರೆದಿದ್ದೀರಿ ತಾವುಗಳು ರೈತರ ಹಿತ ಕಾಪಾಡಬೇಕಾದ ನೀವು ಮೋದಿಜಿ ಅವರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಸರ್ಕಾರದ ಯೋಜನೆಗಳು ಇಲ್ಲಿಯವರೆಗೆ ಎಷ್ಟು ಫಲಾನುಭವಿಗಳಿಗೆ ಮುಟ್ಟಿದೆ ತಾಲೂಕಿನಲ್ಲಿ ಅದಕ್ಕೆ ಮೊದಲು ಉತ್ತರವನ್ನು ನೀಡಿ ಎಂದರು. ಈ ಕಾರ್ಯಾಲಯ ಚುನಾವಣೆ ಸಲುವಾಗಿ ಅಲ್ಲ ತಾಲೂಕಿನ ಜನರ ಸಮಸ್ಯೆಗೆ ಅವಕಾಶ ಕಲ್ಪಿಸಲು ಈ ಕಾರ್ಯಾಲಯ ಜನರ ಕುಂದು ಕೊರತೆ ನೀಗಿಸಲು ಸಾರ್ವಜನಿಕರಿಗೆ ನಿರಂತರ ಜನರ ಸೇವೆಗೆ ಕಾರ್ಯಾಲಯ ಉದ್ಘಾಟನೆಗೊಳ್ಳಲಿದೆ ಎಂದರು. ಚಬ್ಬಿ ತಾಲೂಕು ಅಧ್ಯಕ್ಷರಾದ ಬಸವರಾಜ್ ಶೆರೆವಾಡ, ಶಶಿಧರ್ ಹುಲಿಕಟ್ಟಿ ,ಐಸಿ ಗೋಕುಲ್, ಫಕ್ಕಿರೇಶ್ ನೇಸರಿಕರ, ಗೀತಾ ಮರ್ಲಿಂಗಣ್ಣವರ, ಮಂಜುಳಾ ನಾಯಕ, ಪುಟ್ಟಪ್ಪನವರ ನೀಲಕಂಠಗೌಡ, ಬಸವರಾಜ ಮಾದರ, ಬಸವರಾಜ ಹೊನ್ನಳ್ಳಿ, ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

Leave a Reply

error: Content is protected !!