Breaking News

ಜೆಡಿಎಸ್ ಪಕ್ಷದ ಸಂಘಟನಾ ಸಭೆ

Spread the love

ಜೆಡಿಎಸ್ ಪಕ್ಷದ ಸಂಘಟನಾ ಸಭೆ

ಹುಬ್ಬಳ್ಳಿ: ಜಿಲ್ಲೆಯ ದಾಟನಾಳ,ಶೆಲವಡಿ, ಗ್ರಾಮಗಳಲ್ಲಿ ಜೆಡಿಎಸ್ ಪಕ್ಷದ ಸಂಘಟನಾ ಸಭೆ ನಡೆಸಲಾಯಿತು. ಸಭೆಯಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದ ಜೆಡಿಸ್ ಪಕ್ಷದ ನಿಯೋಜಿತ ಅಭ್ಯರ್ಥಿ ಪ್ರಕಾಶ ಅಂಗಡಿ ವಕೀಲರು ಮಾತನಾಡಿ ಈ‌ ಭಾಗದ ಶಾಸಕರು ಕೇವಲ ಭರವಸೆ ನೀಡುತ್ತಾ ಮೂಗಿಗೆ ತುಪ್ಪ ವರೆಸುವ ಕೆಲಸ ಮಾಡುತ್ತಾರೆ. ಕ್ಷೇತ್ರದ ಒಂದು ಊರಿನ ರಸ್ತೆ ಸರಿ ಇಲ್ಲಾ ,ಹಿಟ್ಲರ್ ನ ಆಡಳಿತ ಇವರದ್ದಾಗಿದೆ.ನಾವೆಲ್ಲರೂ ಸೇರಿ ಜನತಾ ಜನಾಂದೋಲನ ಮಾಡಬೇಕಾಗಿದೆ.ಕಾಂಗ್ರೆಸ್ ನವರು ಕ್ಷೇತ್ರದ ಕೆಲಸ ಮಾಡಲು ವಿಫಲರಾಗಿದ್ದಾರೆ. ಹಾಗಾಗಿ ರಾಜ್ಯದ ಹಿತ ಕಾಪಾಡಲು ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷದ ಸರ್ಕಾರ ಅವಶ್ಯಕತೆ ಇದೆ.ರೈತರ ,ಕೂಲಿ ಕಾರ್ಮಿಕರ ,ರಾಜ್ಯದ ಹಿತ ಜೆಡಿಎಸ್ ಪಕ್ಷ ಬೇಕಾಗಿದೆ. ನಾನು ಕೂಡಾ ಅಣ್ಣಿಗೇರಿ ಎ ಪಿ ಎಮ್ ಸಿ ಅಧ್ಯಕ್ಷನಾಗಿ ಅನೇಕ ಕೆಲಸಗಳನ್ನು ಮಾಡಿದೆ ,ರಾಜ್ಯ ಬೋರ್ಡ್ ಸದಸ್ಯನಾಗಿ ಕೋಟ್ಯಾಂತರ ರೂಪಾಯಿಗಳನ್ನು ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಬರಗಾಲ ಬಿದ್ದಾಗ ರೈತರಿಗೆ ಉಚಿತವಾಗಿ ಮೇವನ್ನು ಗ್ರಾಮ ಗ್ರಾಮಕ್ಕೆ ತೆರಳಿ ವಿತರಿಸಿದ್ದೇನೆ .ಈ ಬಾರಿ ನಾನು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದು ನನಗೆ ಅವಕಾಶ ಮಾಡಿಕೊಡಿ ನವಲಗುಂದ ಕ್ಷೇತ್ರದಲ್ಲಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೆನೆ.ಈ ಸಂದರ್ಭದಲ್ಲಿ ನೂರಾರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!