ಹುಬ್ಬಳ್ಳಿ: ನಗರದಲ್ಲಿನ ದೇಶಪಾಂಡೆ ನಗರದಲ್ಲಿರುವ ಭಾರತೀಯ ಜನತಾ ಪಕ್ಷದ ವಕ್ತಾರ ರವಿ ನಾಯಕ ಅವರ ನಿವಾಸದಲ್ಲಿ
ತುಳಸಿ ಪೂಜಾ (ವಿವಾಹ) ಶನಿವಾರ ಸಂಜೆ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ತುಳಸಿ ಕಟ್ಟೆ ಶುಚಿಗೊಳಿಸಿ, ಬಣ್ಣ ಹಚ್ಚಲಾಯಿತು. ಕಬ್ಬು, ಮಾವಿನ ತಳಿರು- ತೋರಣ ಹಾಗೂ ಹೂ ದಂಡೆ, ಮಾಲೆಗಳೊಂದಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು.
ಮೇಣದ ಬತ್ತಿ, ಹಣತೆಯ ದೀಪಗಳಿಂದ ಆವರಣ ಬೆಳಗಿಸಲಾಗಿತ್ತು. ವಿವಿಧ ರಂಗು-ರಂಗಾದ ರಂಗವಲ್ಲಿ ಎಲ್ಲರ ಮನೆ ಮುಂದೆ ರಾರಾಜಿಸುತ್ತಿದ್ದವು. ಗಣೇಶ ಪೂಜೆ ಬಳಿಕ ಶ್ರೀಕಷ್ಣನ ಮೂರ್ತಿಗೆ ಅಭಿಷೇಕ ಪೂಜೆ ನೆರವೇರಿಸಿ, ತುಳಸಿ ಮಾತೆಗೆ ಪೂಜಿಸಲಾಯಿತು.
ದೀಪ-ಧೂಪ, ತುಪ್ಪದಾರುತಿ ಬೆಳಗಿ, ರಾಧಾ- ಕೃಷ್ಣ ಭಕ್ತಿ ಗೀತೆಗಳೊಂದಿಗೆ ಆರತಿ ಮಾಡಲಾಯಿತು. ಕಾಲೋನಿಯಲ್ಲಿನ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.
Check Also
ನಿರ್ಗತಿಕರಿಗೆ ಕರ್ನಾಟಕ ನವನಿರ್ಮಾಣ ವೇದಿಕೆ ವತಿಯಿಂದ ಬಟ್ಟೆ, ಆಹಾರ ಧಾನ್ಯ ವಿತರಣೆ
Spread the loveಹುಬ್ಬಳ್ಳಿ: ನವನಗರದ ಆರ್ ಟಿ ಓ ಕಚೇರಿ ಮುಂಭಾಗದಲ್ಲಿ ಅಲೆಮಾರಿ ಜನಾಂಗಕ್ಕೆ ಕರ್ನಾಟಕ ನವನಿರ್ಮಾಣ ವೇದಿಕೆ ವತಿಯಿಂದ …