Breaking News

ಉಕ್ರೇನ್ ದಲ್ಲಿ ತುಂಬಾ ಕಷ್ಟಕರ ವಾತಾವರಣವಿದೆ- ಚೈತ್ರಾ ಸಂಶಿ

Spread the love

 1. ಹುಬ್ಬಳ್ಳಿ: ಉಕ್ರೇನ್ ದಲ್ಲಿ ಅತ್ಯಂತ ಕೆಟ್ಟ ‌ಪರಿಸ್ಥಿತಿ‌ ಇದ್ದು, ಇಂತಹ ವಿಷಮ ಪರಿಸ್ಥಿತಿಯಲ್ಲೂ ಭಾರತೀಯರನ್ನು ರಕ್ಷಿಸಲು ಭಾರತ ಸರಕಾರ ಸಾಕಷ್ಟು ಶ್ರಮಿಸುತ್ತಿದೆ ಎಂದು ಖಾರ್ಕಿವ್ ನಲ್ಲಿ ಎಂಬಿಬಿಎಸ್ ಓದುತ್ತಿರುವ ಕುಂದಗೋಳ ತಾಲೂಕ ಯರಗುಪ್ಪಿ ಗ್ರಾಮದ ಚೈತ್ರಾ ಗಂಗಾಧರ ಸಂಶಿ ತಿಳಿಸಿದರು.
  ಬೆಂಗಳೂರಿನಿಂದ ವಿಮಾನದಲ್ಲಿ ನಗರಕ್ಕೆ ಆಗಮಿಸಿದ ಅವರು, ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಉಕ್ರೇನ್ ನಲ್ಲಿ ಊಟಕ್ಕೆ ಬಹಳ ಪರದಾಡ ಬೇಕಾಯಿತು. ದಿನಕ್ಕೆ ಒಂದು ಹೊತ್ತು ಊಟ ಸಿಕ್ಕರೆ ಅದೇ ಹೆಚ್ಚು ಎನ್ನುವಂತಾಯಿತು. ಯುದ್ದ ಆರಂಭವಾದ ಮೂರ್ನಾಲ್ಕು ದಿನಗಳಲ್ಲಿ ನೀರು ಸಿಗುವುದು ಕೂಡ ಕಷ್ಟವಾಯಿತು ಎಂದರು.
  ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಿಂದ ನಾವು ಕೆಲವರು ಹೊರಬರಲು ಯೋಚಿಸಿದ್ದೇವು. ಆದರೆ ನವೀನ ಮೃತಪಟ್ಟ ಸುದ್ದಿ ತಿಳಿದು ಯೋಜನೆ ಕೈ ಬಿಟ್ಟೆವು ಎಂದರು.
  ಬೇರೆ ದೇಶಗಳಿಗೆ ಹೋಲಿಸಿದರೆ ಭಾರತೀಯರನ್ನೇ ಹೆಚ್ಚು ರಕ್ಷಣೆ ಮಾಡಲಾಗುತ್ತಿದೆ. ಉಕ್ರೇನ್ ದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಯಾರೂ ಒತ್ತೆಯಾಳುಗಳಾಗಿ ಇಟ್ಟುಕೊಂಡಿರಲಿಲ್ಲ. ನಮಗಂತೂ ಆ ಅನುಭವ ಆಗಲಿಲ್ಲ ಎಂದರು.

Spread the love

About Karnataka Junction

  Check Also

  ನೇಹಾ ಹತ್ಯೆ ಕೇಸ್‌ – ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ಸಿದ್ಧತೆ

  Spread the loveನೇಹಾ ಹತ್ಯೆ ಕೇಸ್‌ – ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ಸಿದ್ಧತೆ ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜಿನಲ್ಲಿ …

  Leave a Reply

  error: Content is protected !!