ಬೆಂಗಳೂರು : ಕಳೆದ ಏಪ್ರಿಲ್ನಲ್ಲಿ ರಾಜಧಾನಿಯ 10ಕ್ಕೂ ಹೆಚ್ಚು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಕರೆ ಪ್ರಕರಣಕ್ಕೆ ತಿರುವು ದೊರೆತಿದೆ. ಹುಸಿ ಬಾಂಬ್ ಇ-ಮೇಲ್ ಕಳಿಸುವುದಕ್ಕೆ ಮೂಲ 17 ವರ್ಷದ ಬಾಲಕ ಎಂದು ತಿಳಿದು ಬಂದಿದೆ.
ತಮಿಳುನಾಡು ಮೂಲದ 17 ವರ್ಷದ ಬಾಲಕನೇ ಇ-ಮೇಲ್‌ಗಳ ಮಾಸ್ಟರ್ ಮೈಂಡ್ ಆಗಿದ್ದಾನೆ ಎಂದು ಹೇಳಲಾಗ್ತಿದೆ. ಹುಸಿ ಬಾಂಬ್ ಕರೆಯ ಕೆಲದಿನಗಳ ಹಿಂದೆ ಭೂಪಾಲ್ನ ಕೆಲ ಶಾಲೆಗಳಿಗೂ ದುಷ್ಕರ್ಮಿಗಳು ಇಮೇಲ್ ಮಾಡಿ ಬಾಂಬ್ ಇಟ್ಟಿರುವುದಾಗಿ ಹುಸಿ ಸಂದೇಶ ಕಳುಹಿಸಿದ್ದರು.ಈ ಸಂಬಂಧ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ನಡುವೆ ಬೆಂಗಳೂರಿನ ಕೆಲ ಶಾಲೆಗಳಿಗೂ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಮಾಹಿತಿ ಹಂಚಿಕೊಂಡ ಎರಡು ರಾಜ್ಯಗಳ ಪೊಲೀಸರು ಬೆದರಿಕೆ ಬಂದಿದ್ದ ಎರಡು ಇಮೇಲ್‌ಗಳ ಐಪಿ ಅಡ್ರೆಸ್ ಪತ್ತೆ ಮಾಡಿದ್ದಾರೆ.
ಮೂಲತಃ ತಮಿಳುನಾಡಿನ ಮೂಲದವನಾಗಿರುವ 17 ವರ್ಷದ ಬಾಲಕ ಸಾಫ್ಟ್‌ವೇರ್ ಕಂಪನಿ ಮಾಡುವ ಆಶಯ ಹೊಂದಿದ್ದಾನಂತೆ. ಮಲ್ಟಿಪಲ್ ಮೇಲ್ ಕಳಿಸುವ ಬೋಟ್ ಸಾಫ್ಟ್‌ವೇರ್ ಫ್ರೋಗಾಂ ಸಿದ್ಧಪಡಿಸಿದ್ದ. ಬಳಿಕ ವಿದೇಶಿಯರಿಗೆ ಕಂಪ್ಯೂಟರ್ ಪ್ರೊಗ್ರಾಮ್ ಮಾರಾಟ ಮಾಡಿದ್ದನಂತೆ.ದುಷ್ಕರ್ಮಿಗಳು ಇದೇ ಸಾಫ್ಟ್‌ವೇರ್‌ನಿಂದ ಬೆಂಗಳೂರು ಹಾಗೂ ಭೂಪಾಲ್ ಶಾಲೆಗಳಿಗೆ ಬೆದರಿಕೆ ಇಮೇಲ್ ಕಳಿಸಿದ್ದರು ಎಂದು ತಿಳಿದು ಬಂದಿದೆ. 17 ವರ್ಷದ ಬಾಲಕನ ಮುಖಾಂತರ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ರರಾಗಿದ್ದಾರೆ.
Check Also
ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.
Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …