ನೇಹಾ ಕೊಲೆ ಪ್ರಕರಣ ಸಿಬಿಐಗೆ ಕೊಡಿ- ರಂಭಾಪುರಿ ಶ್ರೀ
ಹುಬ್ಬಳ್ಳಿ ; ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಪುತ್ರಿ ಹಾಗೂ ವಿದ್ಯಾನಗರದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್ ವಿಧ್ಯಾರ್ಥಿನಿ ನೇಹಾ ನಿರಂಜನ ಹಿರೇಮಠ ಕೊಲೆ ಪ್ರಕರಣವನ್ನ
ಸಿಐಡಿಗೆ ಕೊಟ್ಟಿರುವುದು ನಮಗೆ ಸಮಂಜಸವಾಗಿಲ್ಲಯಾಕೆಂದರೆ ಸಿಐಡಿ ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ ಎಂದು ನೇಹಾಳ ನಿವಾಸದಲ್ಲಿ ರಂಭಾಪುರಿ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.
ನೇಹಾ ನಿರಂಜನ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು ಏಪ್ರಿಲ್
18 ನೇ ತಾರೀಖಿನಂದು ನಡೆದ ಈ ಘಟನೆ ಖಂಡನೀಯ ಆಗಿದ್ದು
ಇಂತಹ ಕೃತ್ಯ ಮಾಡಿದವನಿಗೆ ತಕ್ಕ ಶಿಕ್ಷೆಯನ್ನ ನೀಡಬೇಕುಆದಾಗ್ಯೂ
ಇಂತಹ ಘಟನೆಯನ್ನ ಎಲ್ಲರೂ ಖಂಡಿಸಬೇಕು
ಆ ದುಷ್ಟ ವ್ಯಕ್ತಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಈ ನೋವನ್ನ ಮರೆಯುವಂತದ್ದು ನಿರಂಜನ ಕುಟುಂಬಕ್ಕೆ ಆಗುತ್ತಿಲ್ಲ ಈ ಸರ್ಕಾರ ಈಗಾಗಲೇ ಸಿಐಡಿಗೆ ಈ ಕೇಸ್ ಕೊಡಲಾಗಿದೆ
ಹಾಗಾಗಿ ಈ ಕೇಸ್ ನ್ನ ಸಿಬಿಐ ಗೆ ವಹಿಸಬೇಕು ಎಂದು ಒತ್ತಾಯ ಮಾಡ್ತಿವಿಯಾವುದೋ ಒಂದು ಸಮುದಾಯವನ್ನ ತುಷ್ಟಿಕರಣ ಮಾಡಬಾರದು ಇದರಿಂದಾಗಿ
ಎಲ್ಲ ರಾಜಕಾರಣಿಗಳು ಈ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು
ಈ ಕೇಸ್ ನ್ನ ಆದಷ್ಟು ಬೇಗನೆ ಮುಗಿಸಿ ನ್ಯಾಯ ಕೊಡಿಸುವ ಕೆಲಸ ಆಗಬೇಕು
ಒಂದು ವೇಳೆ ನ್ಯಾಯ ಸಿಗದಿದ್ದರೆ ಎಲ್ಲಾ ಸಂಘಟನೆಗಳು ಒಂದಾಗಿ ಹೋರಾಟ ಮಾಡುತ್ತವೆ ಇದರಲ್ಲಿ ಯಾವುದೇ ಲೋಪದೋಷವಾಗದ ರೀತಿ ಕೇಸ್ ನ ಬೇಗನ ಮುಗಿಸಿ ನ್ಯಾಯ ಕೊಡಿಸುವ ಕೆಲಸ ಆಗಬೇಕುಈಗಾಗಲೇ ಸಿಎಂ ಸೇರಿದಂತೆ ಹಲವು ರಾಜಕೀಯ ನಾಯಕರು ಬಂದು ಸಾಂತ್ವನ ಹೇಳಿದ್ದಾರೆ ಇರಂಜನ ಕೂಡ ರಾಜಕೀಯವಾಗಿ ಸಾಮಾಜಿಕವಾಗಿ ಇರುವವರು ಈಗಾಗಲೇ ಅವರು ಕಾರ್ಪೊರೇಟರ್ ಕೂಡ ಇದ್ದಾರೆಹಾಗಾಗಿ ಇದರಲ್ಲಿ ಯಾರು ರಾಜಕೀಯ ಮಾಡದೇ ಯಾವ ಜಾತಿಭೇದ ಮಾಡದೇ ನೇಹಾ ಹತ್ಯೆಗೆ ಶಾಶ್ವತ ಪರಿಹಾರ ದೊರಕಿಸಿ ಕೊಡಬೇಕು ಎಂದರು