ನೇಹಾ ಕೊಲೆ ಆರೋಪಿ ಫಯಾಜ್ ಕುಟುಂಬಸ್ಥರಿಗೆ ಭಾರೀ ಪೊಲೀಸ್ ಭದ್ರತೆ
ಆರೋಪಿಯ ತಂದೆ, ತಾಯಿ, ಸಹೋದರಿ ಪೊಲೀಸ್ ಸುಪರ್ದಿಯಲ್ಲಿ
ಬೆಳಗಾವಿ: ಹುಬ್ಬಳ್ಳಿಯ ಬಿವಿಬಿ ಕಾಲೇಜು ವಿದ್ಯಾರ್ಥಿನಿ ಹಾಗೂ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಪುತ್ರಿ
ನೇಹಾ ನಿರಂಜನ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ಮನೆಗೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಆರೋಪಿ ಕುಟುಂಬಸ್ಥರಿಗೆ ಬೆಳಗಾವಿ ಪೊಲೀಸರು ಭಾರೀ ಭದ್ರತೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯಆರೋಪಿ ಫಯಾಜ್ ಮನೆಗೆ ಬಿಗಿ ಭದ್ರತೆ ಕೊಟ್ಟಿದ್ದುಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಉದ್ದೇಶದಿಂದ ಆರೋಪಿ ಮನೆಗೆ ಪೊಲೀಸರು ಸರ್ಪ ಗಾವಲು ಹಾಕಿದ್ದಾರೆ.
ಆರೋಪಿಯ ತಂದೆ, ತಾಯಿ ಹಾಗೂ ಸಹೋದರಿ ಪೊಲೀಸ್ ಸುಪರ್ದಿಯಲ್ಲಿದ್ದಾರೆ. ಬೆಳಗಾವಿ ಎಸ್‌ಪಿ ಡಾ. ಭೀಮಾಶಂಕರ್ ಗುಳೇದರಿಂದ ಆರೋಪಿ ಕುಟುಂಬಸ್ಥರು ಸೆಕ್ಯೂರ್ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿ ಮುನವಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆರೋಪಿ ಮನೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.