Breaking News

ಹುಬ್ಬಳ್ಳಿ:ಜಗತ್ತಿನ ಐದನೆಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ- ಜೋಶಿ

Spread the love

ಹುಬ್ಬಳ್ಳಿ:ಜಗತ್ತಿನ ಐದನೆಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ- ಜೋಶಿ

ಹುಬ್ಬಳ್ಳಿ:ಜಗತ್ತಿನ ಐದನೆಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಇದು ಪ್ರಧಾನಿ ನರೇಂದ್ರ ಮೋದಿ ಅವರ ಶ್ರಮ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಧಾರವಾಡ ಜಿಲ್ಲಾ ಲೋಕಸಭಾ ಚುನಾವಣೆಯ ಭಾರತೀಯ ಜನತಾ ಪಕ್ಷದ ಪ್ರಚಾರ ಕಚೇರಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು,
ನಮ್ಮ ಆಡಳಿತ ಮೊದಲು ಭಾರತದ ಆರ್ಥಿಕ ಪರಿಸ್ಥಿತಿ ಹೇಗೆ ಇತ್ತು ಎಲ್ಲರಿಗೂ ಗೊತ್ತಿದ್ದ ವಿಷಯ ಆದರೆ ನಮ್ಮ ಭಾರತದಲ್ಲಿ ಭ್ರಷ್ಟಾಚಾರ ಮೀರಿ ಇತ್ತು. ಇಂದು ನರೇಂದ್ರ ಮೋದಿಜಿ ಅವರ ಸರ್ಕಾರದಲ್ಲಿ ಭ್ರಷ್ಟಾಚಾರದ ಆರೋಪ ಒಂದು ಇಲ್ಲ. ಮೊದಲು ನಮ್ಮ ದೇಶದಲ್ಲಿ ಅಶಾಂತಿ ವಾತಾವರಣ ದೇಶದ್ರೋಹದ ಕೆಲಸಗಳು ನಿರ್ಮಾಣವಾಗಿತ್ತು. ಈಗ ಭಾರತಕ್ಕೂ ತಾಕತ್ತಿದೆ ಅಂತ ಸಾಬೀತುಪಡಿಸಿದೆ. ಮೊದಲು ಬಡತನ ನಿರುದ್ಯೋಗ ಸಮಸ್ಯೆ ಬಹಳ ಇತ್ತು.ಬಡವರನ್ನು ಬಡತನ ರೇಖೆಗಿಂತ ಕಡಿಮೆ ಇದ್ದವರನ್ನು ಸ ಶಕ್ತಿ ಮಾಡಲು ಮುಂದಿನ 10 ವರ್ಷಗಳಲ್ಲಿ ಬಡತನನ್ನು ನಿರ್ಮೂಲನೆ ಮಾಡುತ್ತೇವೆ ಎಂದರು ಬೇರೆ ರಾಷ್ಟ್ರಗಳು ಇಂದು ನಮ್ಮ ಭಾರತಕ್ಕೆ ಹೂಡಿಕೆ ಮಾಡಲು ಆರ್ಥಿಕತೆಯನ್ನು ಹೆಚ್ಚಿಸಲು ಮುಂದಾಗುತ್ತಿದ್ದಾರೆ. ಇದರಿಂದ ನಿರುದ್ಯೋಗ ಸಮಸ್ಯೆ ದೂರವಾಗುತ್ತದೆ‌ ಎಂದರು.
ಲೋಕಸಭಾ ಚುನಾವಣೆ ಎದುರಿಸಲು ನಮ್ಮ ಕಾರ್ಯಕರ್ತರು ಸಿದ್ದರಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಡಾ. ಗುರುಸಿದ್ಧ ರಾಜ ಯೋಗೇಂದ್ರ ಮಹಾಸ್ವಾಮಿಗಳು ಧಾರವಾಡ ಮುರುಗಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಕಲಘಟಗಿ ಮಠದ ಬಾಲ ತಪಸ್ವಿ ಶ್ರೀರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ವಿವಿಧ ಜಿಲ್ಲೆಯ ಮಠಾಧೀಶರು ಭಾಗಿಯಾಗಿದ್ದರು, ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ ತಾಲೂಕು ಅಧ್ಯಕ್ಷರಾದ ಬಸವರಾಜ ಶರವಾಡ. ಶಶಿಧರ್ ಹುಲಿಕಟ್ಟಿ. ಶಶಿಧರ್ ನಿಂಬಣ್ಣವರ್. ಕಿರಣ್ ಪಾಟೀಲ್ ಕುಲಕರ್ಣಿ. ಅಣ್ಣಪ್ಪ ಓಲೆಕಾರ್. ಗುರು ದಾನೆನವರ್. ಸಿ ಎಫ್ ಪಾಟೀಲ್. ಐ ಸಿ ಗೋಕುಲ್. ಬಸವರಾಜ್ ಹೊನ್ನೇಹಳ್ಳಿ. ಪರಶುರಾಮ್ ಹುಲಿಹೊಂಡ. ಬಸವರಾಜ್ ಮಾದರ್. ಮದನ್ ಕುಲಕರ್ಣಿ. ಫಕ್ಕಿರೇಶ್ ನೇಸರಿಕರ್. ಮಾಂತೇಶ್ ತಹಶೀಲ್ದಾರ್. ಶ್ರೀಧರ್ ದ್ಯಾಮಪುರ್. ತಾಲೂಕಿನ ಹಿರಿಯರು ಮಹಿಳೆಯರು ಉದ್ಘಾಟನಾ ಸಮಾರಂಭ ದಲ್ಲಿ ಪಾಲ್ಗೊಂಡಿದ್ದರು.


Spread the love

About Karnataka Junction

[ajax_load_more]

Check Also

*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ‌ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ

Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …

Leave a Reply

error: Content is protected !!