Breaking News

ಧಾರವಾಡ ಜಿಲ್ಲೆಯಲ್ಲಿ ಗುಡುಗು ಸಿಡಲು ಭಾರೀ ಮಳೆ, ಹೊತ್ತಿ ಉರಿದ ತೆಂಗಿನ ಮರ, ಆಲಿಕಲ್ಲು

Spread the love

ಧಾರವಾಡ ಜಿಲ್ಲೆಯಲ್ಲಿ ಗುಡುಗು ಸಿಡಲು ಭಾರೀ ಮಳೆ, ಹೊತ್ತಿ ಉರಿದ ತೆಂಗಿನ ಮರ, ಆಲಿಕಲ್ಲು

ಧಾರವಾಡ: ನಗರದಲ್ಲಿ ಮಧ್ಯಾಹ್ನ ಆಲಿಕಲ್ಲು ಸಹಿತ ಮಳೆ ಸುರಿಯಿತು. ಕಲಘಟಗಿ ತಾಲ್ಲೂಕಿನ ದ್ಯಾವನಕೊಂಡ ಗ್ರಾಮ ಮನೆಯೊಂದರ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಸುಳಿಗೆ ಬೆಂಕಿ ಹೊತ್ತಿ ಉರಿಯಿತು.

ಧಾರವಾಡ ಸಂಗೊಳ್ಳಿ ರಾಯಣ್ಣ ನಗರದ ಸಹಿತ ವಿವಿಧೆಡೆ ಆಲಿಕಲ್ಲುಗಳು ಉದುರಿದವು. ಸುಮಾರು ಅರ್ಧ ಗಂಟೆ ಮಳೆ ಸುರಿಯಿತು. ಇಳೆಗೆ ತಂಪೆರೆಯಿತು.

ಕಲಘಟಗಿ ಮತ್ತು ಸುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಕುಂದಗೋಳ ಪಟ್ಟಣ ಹಾಗೂ ತಾಲ್ಲೂಕಿನ ಅಲ್ಲಾಪುರ,ತರ್ಲಘಟ್ಟ, ಕಮಡೊಳ್ಳಿ, ಯರಿನಾರಾಯಣಪುರ, ಚಾಕಲಬ್ಬಿ, ಶಿರೂರು, ದೇವನೂರು, ಗ್ರಾಮಗಳಲ್ಲಿ ಸಾಧಾರಣ ಮಳೆಯಾಯಿತು. ಚಿಕ್ಕನರ್ತಿ, ಹಿರೇನರ್ತಿ, ಯರಗುಪ್ಪಿ, ಗುಡೇಣಕಟ್ಟಿ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ
*ನವಲಗುಂದಲ್ಲಿಯೂ ಭಾರೀ ಮಳೆ* ಧಾರವಾಡ ಜಿಲ್ಲೆಯ
ನವಲಗುಂದ ಹಾಗೂ ತಾಲ್ಲೂಕಿನ ಸುತ್ತಲಿನ ಪ್ರದೇಶಗಳಲ್ಲಿ ಗುರುವಾರ ಮಳೆರಾಯ ತಂಪೆರೆದಿದೆ. ಕಳೆದ ಒಂದು ತಿಂಗಳಿಂದ ಗರಿಷ್ಠ ತಾಪಮಾನ ಹೊಂದಿದ ನವಲಗುಂದ ತಾಲೂಕು ಗುಡುಗು ಮಿಂಚು ಸಹಿತ ಮಳೆ ಸುರಿದು ಪಟ್ಟಣ ತಂಪಾಗಿಸಿದೆ.

ಮಧ್ಯಾಹ್ನ 4 ಘಂಟೆ ಸುಮಾರಿಗೆ ಪ್ರಾರಂಭವಾದ ಮಳೆ ಸಂಜೆ 7 ಗಂಟೆಗೆ ರಭಸವನ್ನು ಪಡೆಯಿತು. ಸುಮಾರು 3 ಗಂಟೆ ಸುರಿದ ಮಳೆ ನಿಂತು ನಿಂತು ಬಂದಿತು.

ಮಳೆಯ ನಿರೀಕ್ಷೆಯಲ್ಲಿದ್ದ ತಾಲ್ಲೂಕಿನ ಜನತೆ ಹಾಗು ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.


Spread the love

About Karnataka Junction

    Check Also

    ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ

    Spread the loveಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಆಹಾರ ಹಾಗೂ ಗ್ರಾಹಕ …

    Leave a Reply

    error: Content is protected !!