ನಮ್ಮ ಮಠದಲ್ಲಿ ಗೂಂಡಾಗಿರಿ ಶುರು ಮಾಡಿದ್ದಾರೆ
ಯಾರ ವಿರುದ್ಧ ಮಾತನಾಡುತ್ತಿದ್ದೇನೋ ಅವರು ತೊಂದರೆ ಕೊಡುತ್ತಿದ್ದಾರೆ- ದಿಂಗಾಲೇಶ್ವರ ಸ್ವಾಮೀಜಿ
ಧಾರವಾಡ: ನಾನು ಯಾರ ವಿರುದ್ಧ ಮಾತನಾಡುತ್ತಿದ್ದೇನೋ ಅವರು ತೊಂದರೆ ಕೊಡುತ್ತಿದ್ದಾರೆ ಎಂದು ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು, ಈಗಾಗಲೇ
ನೂರಾರು ವಿಘ್ನಗಳು ಬಂದಿವೆ
ಬಸವಾದಿ ಪರಂಪರೆ ನಾಡಿನಲ್ಲಿ ನಾಶವಾಗುತ್ತಿವೆ ಭಸ್ಮ ಮತ್ತು ಭಂಡಾರ ಮಾಯವಾಗಿ ಬೇರೆ ಶಬ್ದಗಳು ಆಕ್ರಮಿಸಿಕೊಳ್ಳುತ್ತಿವೆ
ನಮ್ಮ ನಾಡಿಗೆ ತನ್ನದೇಯಾದ ಸಂಸ್ಕೃತಿ ಇದೆನಮ್ಮ ಕನ್ನಡ ನಾಡಿನ ಇತಿಹಾಸ ಪರಂಪರೆ ತಿರಸ್ಕಾರ ಮಾಡುವವರ ವಿರುದ್ಧ ಸಿಡಿದಿದ್ದೇವೆ
ನಾಲ್ಕು ಸಲ ಪಾರ್ಲಿಮೆಂಟ್ ಭವನ ಪ್ರವೇಶ ಮಾಡಿದವರು ಇದಾರೆ
ಅವರು ಬಸವಣ್ಣ, ಅಂಬೇಡ್ಕರ ಭಾವಚಿತ್ರ ತಮ್ಮ ಕಚೇರಿಯಿಂದ ತೆಗದು ಹಾಕಿದ್ದಾರೆಮಹರ್ಷಿ ವಾಲ್ಮೀಕಿಗಳ ಭಾವಚಿತ್ರ ಸಹ ತೆಗೆದು ಹಾಕಿದ್ದಾರೆನಾಡಿನ ದಾರ್ಶನಿಕರು, ರೈತರು, ಮಹಾತ್ಮರನ್ನು, ಸಾಧು-ಸಂತರ, ಸರ್ವರ ಹಿತ ಬಯಸಬೇಕಿತ್ತುಅಧಿಕಾರ, ಹಣದ ಮದದಲ್ಲಿ ಎಲ್ಲರನ್ನೂ ನೋಡುತ್ತೇವೆಂಬ ದಾರ್ಷ್ಯ ತೋರಿಸುತ್ತಿದ್ದಾರೆ
ಈ ಚುನಾವಣೆಯನ್ನು ನಾವು ಧರ್ಮಯುದ್ಧ ಎಂದು ಭಾವಿಸಿದ್ದೇವೆ ಕ್ಷೇತ್ರ ಅಭಿವೃದ್ಧಿ ಬಿಟ್ಟು ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ
ನಾಡಿಗೆ ಆದರ್ಶವಾಗುವ ಬದಲಿಗೆ ಮಾಡಿಗೆ ಮಾರಕವಾಗಿದ್ದಾರೆ ಎಂದ ಅವರು ನಮ್ಮ ಯಾವ ಪ್ರಶ್ನೆಗೂ ಅವರಿಗೆ ಉತ್ತರ ಕೊಡುವ ಮನಸ್ಥಿತಿ ಇಲ್ಲ ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ
ಇವರು ನಾಡಿಗೆ ಕಂಟಕವಾಗಿದ್ದಾರೆ
ಇವರ ಬದಲಾವಣೆಯೇ ನಮ್ಮ ಮೂಲ ಉದ್ದೇಶ ಎಂದರು.
*ಜನ ಹಣ ಭಯಕ್ಕೆ ಮತ ಚಲಾಯಿಸದೇ ಸ್ವಾಭಿಮಾನಕ್ಕಾಗಿ ಮತ ಚಲಾಯಿಸಬೇಕು* ಮತದಾರರು ಯಾವುದೇ ಆಮಿಷಕ್ಕೆ ಒಳಗಾಗಬಾರದುನಮ್ಮ ಬಲ ಕ್ಷೀಣಿಸಿಲ್ಲ
ಯಾವ ಮಠಾಧೀಶರು ಬರಬೇಡಿ ಎಂದಿದ್ದೇನೆನಾನೇ ಬರೋದು ಬೇಡ ಎಂದಿದ್ದೇನೆಮಠಾಧೀಶರನ್ನು ನಾನು ಚುನಾವಣೆಗೆ ಬಳಸಿಕೊಳ್ಳುವುದಿಲ್ಲ
ಕೇವಲ ಸಲಹೆ ಪಡೆಯಲು ಮಾತ್ರ ಮಠಾಧೀಶರ ಸಾಥ್ ತೆಗೆದುಕೊಂಡಿದ್ದೇವೆಮಠ ಬಿಡಿಸುವಷ್ಟು ತೊಂದರೆ ಕೊಡುತ್ತಿದ್ದಾರೆ ನಮ್ಮ ಜೊತೆ ಇದ್ದ ಮಠಾಧೀಶರನ್ನು ದೂರ ಮಾಡುತ್ತಿದ್ದಾರೆ ಇನ್ನು ಸಹ ಬ್ರಿಟಿಷರ ಕಾಲದ ವ್ಯವಸ್ಥೆ ಧಾರವಾಡದಲ್ಲಿ ನಡೆಯುತ್ತಿದೆ ರಾಜ್ಯದ ಸಿಎಂ ಆಗಿದ್ದವರು ಎಂಎಲ್‌ಎ ಟಿಕೆಟ್ ಗಾಗಿ ಹೋರಾಡಬೇಕಿತ್ತು
ಅವರಿಗೆ ತೊಂದರೆ ಕೊಟ್ಟು ನಾಮಿನೇಷನ್ ಗೆ ಆಹ್ವಾನ ಕೊಟ್ಟಿದ್ದಾರೆ ಮಾಜಿ ಸಿಎಂ ಯಡಿಯೂರಪ್ಪ ಸಹ ಕರೆಯಿಸಿಕೊಂಡಿದ್ದರು ಎಂದರು.
*ಜೋಶಿ ಹೆಸರು ಹೇಳದೇ ಆರೋಪ ವಿಚಾರ*
ಈ ಕುರಿತು ಸಹ ಮಾತನಾಡಿದ ಅವರು ನನ್ನ ಬಾಯಲ್ಲಿ ಅವರ ಹೆಸರು ಪದೇ ಪದೇ ಬರುವುದು ಬೇಡ ಅವರು ನಮ್ಮ ಮಠದಲ್ಲಿ ಗೂಂಡಾಗಿರಿ ಶುರು ಮಾಡಿದ್ದಾರೆ
ನಿನ್ನೆ ರಾತ್ರಿ 20 ಜನ ಹೋಗಿ ನಮ್ಮ ಹಿರಿಯ ಗುರುಗಳಿಗೆ ಮಾನಸಿಕ ತೊಂದರೆ ಕೊಟ್ಟಿದ್ದಾರೆಕೊನೆಗೆ ಅಲ್ಲಿನ ಭಕ್ತರು ಅವರನ್ನು ಹೊರಗೆ ಕಳುಹಿಸಿದ್ದಾರೆರಾತ್ರಿ ಹೋಗಿ ಹಿರಿಯರಿಗೆ ತೊಂದರೆ ಕೊಡುತ್ತಿದ್ದಾರೆ
ನೀವು ಯಾವುದೇ ಪ್ರಯತ್ನ ಮಾಡಿದರೂ ಚುನಾವಣೆ ಕಣದಿಂದ ಹಿಂದೆ ಸರಿಯಲ್ಲ ಕರ್ನಾಟಕದ ಬಹುತೇಕ ಎಲ್ಲ ಸ್ವಾಮೀಜಿ ನಮ್ಮ ವಿಚಾರ ಬೆಂಬಲಿಸಿದ್ದಾರೆ ಎಂದರು.
*ಜೈನ್ ಮುನಿ ಹೇಳಿಕೆ ವಿಚಾರ* ವರೂರು ಜೈನ್ ಮುನಿ ಅವರನ್ನ ನೇರವಾಗಿ ಫೋನ್ ನಲ್ಲಿ ಸಂಪರ್ಕಿಸಿದ್ದೆನಾನು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ
ವಿರೋಧಿಗಳು ತಮಗೆ ಬೇಕಾದ ಮಾಧ್ಯಮಗಳ ಮೂಲಕ ಆ ಹೇಳಿಕೆ ತಿರುಚಿದ್ದಾರೆ ಚುನಾವಣೆ ನಿಲ್ಲುವಾಗ ಅವರನ್ನು ಸೋಲಿಸುವ ವಿಚಾರದಲ್ಲಿದ್ದ ಈಗ ಗೆಲ್ಲಬೇಕು ಅನಿಸುತ್ತಿದೆ ಎಂದರು. ಇನ್ನು
ಶಿರಹಟ್ಟಿ ಪೀಠದ ಗುರುಪರಂಪರೆಯ ವಿಜಯಪುರ ದರ್ಗಾದ ಗುರುಗಳು
ಸವಣೂರ ದೊಡ್ಡಹುಣಸೆ ಮಠದಸ್ವಾಮೀಜಿ ಜೊತೆಗೆ
ರಾಜ್ಯ ರೈತ ಸಂಘದ ಅಧ್ಯಕ್ಷ ವಾಸುದೇವ ಮೇಟಿ
ವಕೀಲ ಬಳ್ಳೊಳ್ಳಿ ಧರ್ಮ ಸಮನ್ವಯ ಸಾರುವ ಉದ್ದೇಶದೊಂದಿವೆ ನಾಮಪತ್ರ ಸಲ್ಲಿಸಿದ್ದೇವೆ
ಖಾಜಾ ಅಮಿನುದ್ದೀನ ದರ್ಗಾದ ಪೂಜ್ಯರು ಬಂದಿದ್ದಾರೆ
ಈ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾಧ್ಯಮಗಳ ಮೂಲಕ ಹೇಳಿದ್ದೇನೆ ಎಂದರು.