Breaking News

ದೇಶಕ್ಕೆ ಮೋದಿ, ಧಾರವಾಡಕ್ಕೆ ಜೋಶಿ ಬೆಂಬಲಿಸಿ*

Spread the love

*ದೇಶಕ್ಕೆ ಮೋದಿ, ಧಾರವಾಡಕ್ಕೆ ಜೋಶಿ ಬೆಂಬಲಿಸಿ*

*-ಚಿತ್ರನಟಿ, ಬಿಜೆಪಿ ನಾಯಕಿ ತಾರಾ ಕರೆ*

*-ಪ್ರಹ್ಲಾದ ಜೋಶಿ ಸಂಸದರು ಅಷ್ಟೇ ಅಲ್ಲ, ಮತ್ತೆ ಮಂತ್ರಿ ಆಗ್ತಾರೆ*

ಹುಬ್ಬಳ್ಳಿ: ದೇಶಕ್ಕಾಗಿ ನರೇಂದ್ರ ಮೋದಿ, ಧಾರವಾಡಕ್ಕಾಗಿ ಪ್ರಹ್ಲಾದ ಜೋಶಿ ನಿಮ್ಮ ಆಯ್ಕೆಯಾಗಿರಲಿ ಎಂದು ಬಿಜೆಪಿ ನಾಯಕಿ, ಚಿತ್ರನಟಿ ತಾರಾ ಕರೆ ನೀಡಿದರು.

ಹುಬ್ಬಳ್ಳಿಯಲ್ಲಿ ಇಂದು ರಾತ್ರಿ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಪರ ಮತಯಾಚಿಸಿ ಮಾತನಾಡಿದರು.

ಪ್ರಹ್ಲಾದ ಜೋಶಿ ಅವರು ಕೇಂದ್ರ ಸಚಿವರಾಗಿ ರಾಜ್ಯದ ದೊಡ್ಡ ಕೊಂಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಕೂಡ ಸಂಸದ ಮಾತ್ರವಲ್ಲ ಕೇಂದ್ರದಲ್ಲಿ ಮಂತ್ರಿಯಾಗಿ ಹುಬ್ಬಳ್ಳಿ- ಧಾರವಾಡದ ಅಭಿವೃದ್ಧಿಗೆ ಶ್ರಮಿಸುತ್ತಾರೆ. ಈ ಬಾರಿಯೂ ಇವರನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.

*RCB ಯಂತೆ ನಮ್ಮವರೇ ಎಂಬ ವಿಶ್ವಾಸವಿಡಿ:* IPL ನಲ್ಲಿ RCB ಕಪ್ ನಮ್ಮದೇ ಎಂಬ ನಂಬಿಕೆಯಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಪ್ರಹ್ಲಾದ ಜೋಶಿ ಅವರನ್ನು ಸಹ ನಮ್ಮವರೇ ಎಂಬ ಭಾವನೆಯಲ್ಲಿ ಬೆಂಬಲಿಸಿ ಎಂದು ಕೋರಿದರು.

ಧಾರವಾಡದ ಜನತೆ ಪ್ರಹ್ಲಾದ ಜೋಶಿ ಅವರನ್ನು ಎಂದೂ ಕೈ ಬಿಟ್ಟಿಲ್ಲ. ಈಗ 5ನೇ ಬಾರಿ ಕಣಕ್ಕಿಳಿದ ಒಬ್ಬ ನಿಷ್ಠಾವಂತ, ಪ್ರಾಮಾಣಿಕ ವ್ಯಕ್ತಿಯನ್ನು ಮತ್ತೆ ಒಂದು ಶಕ್ತಿಯನ್ನಾಗಿ ಆರಿಸಿ ಕಳಿಸಿ ಎಂದು ನಟಿ ತಾರಾ ಕರೆ ನೀಡಿದರು.

ಯಾವುದೇ ಜಾತಿ, ಧರ್ಮ, ಮತ-ಪಂಥ, ಹಿಂದುಳಿದ ವರ್ಗ ಎನ್ನದೇ ಇಡೀ ಭಾರತದ ನಿವಾಸಿಗಳನ್ನು ಪ್ರಧಾನಿ ಮೋದಿ ತಮ್ಮ ಪರಿವಾರ ಎಂದೇ ಕರೆದಿದ್ದಾರೆ. ಹಾಗಾಗಿ ದೇಶ ಎಂದು ಬಂದಾಗ ಮೋದಿ ಅವರ ಕೈ ಬಲಪಡಿಸಿ ಎಂದರು.

*ರಾಮನವಮಿ ಸಂಭ್ರಮ ಇರಲಿ:* 500 ವರ್ಷಗಳಿಂದ ರಾಮ ಮಂದಿರ ಜಪವನ್ನು ಯಾರೂ ಕೇಳಿಸಿಕೊಳ್ಳಲಿಲ್ಲ. ಆದರೆ, ಮೋದಿ ಅವರ ಸಂಕಲ್ಪದಿಂದಾಗಿ ರಾಮ ಮಂದಿರ ಇಂದು ಕಂಗೊಳಿಸುತ್ತಿದೆ. ರಾಮನವಮಿ ಸಂಭ್ರಮ, ನಾಡ ಹಬ್ಬದಂತೆ ಮೇ 7ರಂದು ಮತದಾನ ಮಾಡಿ ಸಂಭ್ರಮಿಸಬೇಕು ಎಂದು ಕರೆ ನೀಡಿದರು.

*ಹುಬ್ಬಳ್ಳಿ ಹೆಬ್ಬುಲಿ ಜೋಶಿ:* ರಾಜ್ಯದಲ್ಲಿ ಈವರೆಗೆ ರಾಜಾಹುಲಿಯನ್ನು ಮಾತ್ರ ನೋಡಿದ್ದೆ. ಆದರಿಗ ಇಲ್ಲಿನವರೇ ಹೇಳುವಂತೆ ಹುಬ್ಬಳ್ಳಿ ಹೆಬ್ಬುಲಿಯನ್ನಾಗಿ ಪ್ರಹ್ಲಾದ ಜೋಶಿ ಅವರನ್ನು ನೋಡುತ್ತಿದ್ದೇನೆ. ಅವರ ಅಭಿವೃದ್ಧಿ ಕಾರ್ಯಗಳೇ ಈ ಬಿರುದು ಬರಲ ಕಾರಣ ಎಂದು ತಾರಾ ಅಭಿಪ್ರಾಯಿಸಿದರು.

ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಹುಬ್ಬಳ್ಳಿ-ಧಾರವಾಡವನ್ನು ಬೆಂಗಳೂರಿನಂತೆ ದೊಡ್ಡ ಇಂಡಸ್ಟ್ರಿತಿಯಲ್ ಏರಿಯಾ ಮಾಡಲು ಪ್ರಧಾನಿ ಮೋದಿ ಸಲಹೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಈಗ ಮಹಿಳೆಯರಿಗೆ 1 ಲಕ್ಷ ಕೊಡುತ್ತೇವೆ. ಉಚಿತ ಅಕ್ಕಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ, 60 ವರ್ಷ ದೇಶವಾಳಿ ಏನೂ ಅಭಿವೃದ್ಧಿ ಮಾಡಲಾಗಿಲ್ಲ. ಬಡತನ ನಿರ್ಮೂಲನೆ ಮಾಡಲಗಲಿಲ್ಲ ಎಂದು ಜೋಶಿ ಟೀಕಿಸಿದರು.


Spread the love

About Karnataka Junction

    Check Also

    ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ

    Spread the loveಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಆಹಾರ ಹಾಗೂ ಗ್ರಾಹಕ …

    Leave a Reply

    error: Content is protected !!