ಮಕ್ಕಳು ಮತ್ತು ಶಿಕ್ಷಕರೊಂದಿಗೆ ಚೆಲ್ಲಾಟವಾಡಬೇಡಿ – ಅಶೋಕ.ಎಮ್.ಸಜ್ಜನ ಕಿಡಿ

Spread the love

ಹುಬ್ಬಳ್ಳಿ: ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ 5,8,9 ನೇ ತರಗತಿಗಳ ವಿದ್ಯಾರರ್ಥಿಗಳ ಬೋರ್ಡ ಪರೀಕ್ಷೆಗಳನ್ನು ನಡೆಸುವ ಕುರಿತಂತೆ ಸರ್ವೋಚ್ಛ ಹಾಗೂ ಉಚ್ಛ ನ್ಯಾಯಾಲಗಳು ನೀಡಿರುವ ಆದೇಶ -ತೀರ್ಪು -ಆಜ್ಞೆಗಳನ್ನು ನಾವುಗಳು ಗೌರವಿಸುತ್ತೇವೆ.
ಆದರೆ ಶಾಲಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರೊಂದಿಗೆ ರುಪ್ಸಾ ಹಾಗೂ ಸರ್ಕಾರ ಮತ್ತು ಇಲಾಖೆ ಚೆಲ್ಲಾಟವಾಡುತ್ತಿರುವುದು ಪ್ರಸ್ತುತ ವಿದ್ಯಮಾನಗಳಲ್ಲಿ ಈ ರೀತಿ ತಮ್ಮ ತಮ್ಮ ಸ್ವಪ್ರತಿಷ್ಥೆಗಾಗಿ ಮಕ್ಕಳ ಹಾಗೂ ಶಿಕ್ಷಕರ ಮನಸ್ಸಿಗೆ ಅಡ್ಡ ಪರಿಣಾಮ ಬೀರಬೇಡಿ ಮತ್ತು ಶೈಕ್ಷಣಿಕ ವ್ಯವಸ್ಥೆಯ ದಿಢೀರ ಕುಸಿತಕ್ಕೆ ಕಾರಣವಾಗಬೇಡಿ ಉನ್ನತ ಹಂತದಲ್ಲಿ ತಜ್ಞರ ಸಭೆ ನಡೆಸಿ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಈ ರೀತಿ ಹೀಗೇ ಮುಂದುವರೆದಲ್ಲಿ ಶಾಲಾ ಮಕ್ಕಳ ಪಾಲಕರೊಂದಿಗೆ ಎಸ್.ಡಿ.ಎಮ್.ಸಿ.ಯವರೊಡಗೂಡಿ ಬೀದಿಗಿಳಿದು ಹೋರಾಟ ಬೇಕಾದೀತೆಂದು ಕರ್ನಾಟಕ ರಾಜ್ಯ ಸರ್ಕಾರಿ ಶಾಲೆಗಳ ಶಾಲೆಗಳ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಸಜ್ಜನ ಹೇಳಿಕೆ ನೀಡಿದ್ದಾರೆ


Spread the love

Leave a Reply

error: Content is protected !!