ರಾಜಕೀಯದಿಂದ ಇನ್ನಷ್ಟು ಜನಸೇವೆ ಮಾಡಬಹುದು: ಶಿವರಾಜಕುಮಾ‌ರ್

Spread the love

ರಾಜಕೀಯದಿಂದ ಇನ್ನಷ್ಟು ಜನಸೇವೆ ಮಾಡಬಹುದು:
ಶಿವರಾಜಕುಮಾ‌ರ್

ಹುಬ್ಬಳ್ಳಿ: ‘ಕರಟಕ ದಮನಕ’ ಹೆಸರೇ ಪ್ರೇಕ್ಷಕರ ಕುತೂಹಲ ಕೆರಳಿಸುವಂತಿದೆ. ಇದೊಂದು ಕುಟುಂಬ ಸಮೇತರಾಗಿ ಎಲ್ಲರೂ ನೋಡುವಂತಹ ಸಿನಿಮಾ ಆಗಿದೆ. ಮಕ್ಕಳು ಕೂಡ ತಮ್ಮ ಪರೀಕ್ಷೆ ಮುಗಿದ ನಂತರ ಥೇಟರ್ನಲ್ಲಿ ಚಿತ್ರ ನೋಡಬೇಕು ಎಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಹೇಳಿದರು.
ಚಿತ್ರದ ಪ್ರಮೋಷನ್ ಗಾಗಿ ನಗರಕ್ಕೆ ಮಂಗಳವಾರ ಆಗಮಿಸಿದ್ದ ಅವರು ಇಲ್ಲಿಯ ರೂಪಂ ಥೇಟರ್ನಲ್ಲಿ ಅಭಿಮಾನಿಗಳು, ಪ್ರೇಕ್ಷಕರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಾತ್ರದ ಹೆಸರನ್ನೇ ಚಿತ್ರಕ್ಕೆ ಇಡಲಾಗಿದೆ. ಉತ್ತರ ಕರ್ನಾಟಕದ ಭಾಷೆ ಮಾತನಾಡಲು ನನಗೆ ಯಾವುದೇ ತೊಂದರೆ ಇಲ್ಲ. ಬಹಳಷ್ಟು ಸಿನಿಮಾಗಳನ್ನು ಈ ಭಾಗದಲ್ಲಿ ಮಾಡಿದ್ದೇವೆ. ಈ ಸಿನಿಮಾಕ್ಕೂ ಎಲ್ಲ ಕಡೆ ಉತ್ತಮ ಸ್ಪಂದನೆ ಸಿಗುತ್ತಿದೆ. ಶೀರ್ಷಿಕೆ ಅರ್ಥಪೂ್ರಣವಾಗಿದೆ ಎಂದರು.
ಪ್ರಾಮಾಣಿಕವಾಗಿ ಸಿನಿಮಾ ಮಾಡಿದ್ದೇವೆ. ಇದೇ ರೀತಿ ಪ್ರಾಮಾಣಿಕವಾಗಿ ಚಿತ್ರ ನಿರ್ಮಾಣ ಮಾಡುವವರು ಚಿತ್ರರಂಗಕ್ಕೆ ಬರಬೇಕು. ಇನ್ನಷ್ಟು ಬೆಳೆಸಬೇಕು ಎಂದು ಹೇಳಿದರು.
ತವರೂರಲ್ಲಿ ಸ್ಪರ್ಧೆ: ಪತ್ನಿ ಗೀತಾ ಶಿವರಾಜಕುಮಾರ್ ಅವರ ತವರು
ಶಿವಮೊಗ್ಗ. ಆಗಾಗ ಅಲ್ಲಿಗೆ ಹೋಗುತ್ತಿರುತ್ತಾರೆ. ಹಾಗಾಗಿಯೇ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ನಾನೂ ಶಿವಮೊಗ್ಗಕ್ಕೆ ಹೋಗ್ತಾ ಇರ್ತೇನೆ. ಚುನಾವಣೆಯಲ್ಲಿ ಗೀತಾ ಅವರನ್ನು ಗೆಲ್ಲಿಸಿಕೊಂಡು ಬರಲು ಎಲ್ಲ ಪ್ರಯತ್ನ ಮಾಡುತ್ತೇವೆ. ಪ್ರಚಾರ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ನಟ ಶಿವರಾಜಕುಮಾರ ತಿಳಿಸಿದರು.
ಈಗಾಗಲೇ ನಾವು ಜನಸೇವೆಯಲ್ಲಿ ತೊಡಗಿಕೊಂಡವರು. ರಾಜಕೀಯಕ್ಕೆ
ಒಂದು ಅಧಿಕಾರ ಸಿಗುತ್ತದೆ. ಅದರಿಂದ ಇನ್ನಷ್ಟು ಹೆಚ್ಚು ಜನಸೇವೆ ಮಾಡಬಹುದು. ಈ ಕಾರಣಕ್ಕಾಗಿ ಅವರು ರಾಜಕೀಯಕ್ಕೆ ಬಂದಿದ್ದಾರೆ ಎಂದು ಉತ್ತರಿಸಿದರು.

ಕಾಂಗ್ರೆಸ್ ನಾಯಕರು ರಾಜ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ಕರೆದರೆ ಸಮಯ ನೋಡಿಕೊಂಡು ಹೋಗುತ್ತೇನೆ. ನಾನೂ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತೇನೆ ಎಂದರು.
ನಿರ್ದೇಶಕ ಯೋಗರಾಜ ಭಟ್ ಮಾತನಾಡಿ, ಹುಬ್ಬಳ್ಳಿಗೆ ಬಂದಾಗೊಮ್ಮೆ ತವರಿಗೆ ಬಂದಂತಹ ಅನುಭವವಾಗುತ್ತದೆ. ಇಲ್ಲಿನ ಜನರ ಪ್ರೀತಿ ಬಹಳ ದೊಡ್ಡದು. ಕರಟಕ ದಮನಕ ಜೈ ಎಂಬ ಘೋಷಣೆಗಳು ಉತ್ತರ ಕರ್ನಾಟಕ ಭಾಗದ ಎಲ್ಲ ಕಡೆ ಕೇಳುತ್ತಿದ್ದೇವೆ ಎಂದರು.


Spread the love

Leave a Reply

error: Content is protected !!