ನಮ್ಮ ಗೆಲುವಿನ ಹಾದಿಯತ್ತ ಹೋಗುತ್ತಿದ್ದೇವೆ ; ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀ
ಹುಬ್ಬಳ್ಳಿ: ನಮ್ಮ ಗೆಲುವಿನ ಹಾದಿಯತ್ತ ಹೋಗುತ್ತಿದ್ದೇವೆ ಎಂದು
ಹುಬ್ಬಳ್ಳಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಗದಗ ಜಿಲ್ಲೆಯ ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಭರವಸೆ ವ್ಯಕ್ತಪಡಿಸಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ
ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಡಾ. ಬಿ. ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು. ಡಾ ಬಾಬಾ ಸಾಹೇಬ್ಅಂಬೇಡ್ಕರ್ ಆದರ್ಶ ಸೂರ್ಯ ಚಂದ್ರ ಇರುವವರೆಗೂ ಇರುತ್ತವೆ ಡಾ ಬಾಬಾ ಸಾಹೇಬ್
ಅಂಬೇಡ್ಕರ್ ತತ್ವ ಸಿದ್ದಾಂತಗಳ ಬದಲಾವಣೆ ಮಾಡುವ ಹುಚ್ಚು ಸಾಹಸ ಕೆಲವರು ಮಾಡುತ್ತಿದ್ದಾರೆ
ಆದರೆ ಅವರ ಬದಲಾವಣೆ ಕಾಲ ಸಮೀಪದಲ್ಲಿದೆಇಂದು ಕೆಲವರು ಅಂಬೇಡ್ಕರ್ ರನ್ನು ಹೊಗಳಿ ಗುಣಗಾನ ಮಾಡುತ್ತಿದ್ದಾರೆ
ಆದರೆ ಅವರ ಮನಸ್ಸಿನಲ್ಲೊಂದು ಹೊರಗೊಂದು ಇದೆ
ಯಾರು ಅಂಬೇಡ್ಕರ್,ವಾಲ್ಮೀಕಿ ಅವರನ್ನು ತುಳಿದು ಹಾಕುವ ಪ್ರಯತ್ನ ಮಾಡಿದ್ದಾರೆ ಅವರನ್ನು ಬರುವ ದಿನಗಳಲ್ಲಿ ಜನ ತೆಗೆದು ಹಾಕತ್ತಾರೆಎಂದು ಆರೋಪ ಮಾಡಿದರು. ಇನ್ನು
ಮತದಾರರನ್ನು ಜಾಗೃತಿ ಮಾಡುವ ಕೆಲಸ ಮಾಡುತ್ತಿದ್ದೇವೆ
ಹೀಗಾಗಿ ಶಿಗ್ಗಾವಿ, ಸವಣೂರಿನಲ್ಲಿ ಸಭೆ ಕರೆದಿದ್ದೇವೆ
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಎಲ್ಲಾ ಜನಾಂಗದವರನ್ನು ಜಾಗೃತಿ ಮಾಡುತ್ತಿದ್ದೇವೆ ಎಂದರು