ಸಚಿವರ ಕಾರು ನಡು ರಸ್ತೆಯಲ್ಲಿಯೇ ಕಾಮಗಾರಿ ಆರಂಭಕ್ಕೆ ಪಟ್ಟು

Spread the love

ಸಚಿವರ ಕಾರು ನಡು ರಸ್ತೆಯಲ್ಲಿಯೇ
ಕಾಮಗಾರಿ ಆರಂಭಕ್ಕೆ ಪಟ್ಟು

ಕಸಿವಿಸಿಗೊಂಡ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ಕಾರ್ಯಾಲಯವನ್ನು ಕೇಂದ್ರ ಸಚಿವರಾದ ಪ್ರಲ್ಲಾದ ಜೋಶಿ ಅವರಿಗೆ ಸ್ಥಳೀಯ ಮಹಾದಾಯಿ ಕಳಸಾ ಬಂಡೂರಿ ಹೋರಾಟಗಾರರು ಪ್ರವಾಸಿ ಮಂದಿರದ ರಸ್ತೆಯಲ್ಲಿ ವಾಹನ ನಿಲ್ಲಿಸಿ ಕಳಸಾ ಬಂಡೂರಿ ಯೋಜನೆಯ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಪಟ್ಟು ಹಿಡಿದರು. ಕೇಂದ್ರ ಸರಕಾರದವರು ಅರಣ್ಯ ಇಲಾಖೆ ಪರವಾನಗೆ ಸೇರಿದಂತೆ ಸಮಸ್ಯೆಗಳನ್ನು ಸರಿಪಡಿಸಿ ಯೋಜನೆ ಕಾರ್ಯರೂಪಕ್ಕೆ ತರಬೇಕೆಂದು ಸಂಸದರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪಕ್ಷಾತೀತ ಹೋರಾಟ ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಬಾಯಿ, ಮಲ್ಲೇಶ ಉಪ್ಪಾರ, ರವಿ ತೋಟದ, ಉಮೇಶ ಪಲ್ಲೇದ ಇತರರು ಇದ್ದರು.


Spread the love

Leave a Reply

error: Content is protected !!