Breaking News

ರಾಮಮಂದಿರ ಉದ್ಘಾಟನೆಯಿಂದ ದೂರ ಉಳಿದ ಕಾಂಗ್ರೆಸ್‌ನರನ್ನ ಜನರು ಚುನಾವಣೆಯಲ್ಲಿ ದೂರ ತಳ್ಳಲಿದ್ದಾರೆ- ಜೋಶಿ

Spread the love

ರಾಮಮಂದಿರ ಉದ್ಘಾಟನೆಯಿಂದ ದೂರ ಉಳಿದ ಕಾಂಗ್ರೆಸ್‌ನರನ್ನ ಜನರು ಚುನಾವಣೆಯಲ್ಲಿ ದೂರ ತಳ್ಳಲಿದ್ದಾರೆ- ಜೋಶಿ

ಹುಬ್ಬಳ್ಳಿ; ಕಾಶ್ಮೀರ ಇವರಿಗೆ ದೇಶದ ಅವಿಭಾಜ್ಯ ಅಂಗ ಎಂದು ಅನಿಸುತ್ತಲೇ ಇಲ್ಲ. ಕುಶ್ಚಿತ ಮನೋಭಾವದಿಂದ ಮಾತನಾಡುತ್ತಾರೆ. ರಾಮಮಂದಿರ ಉದ್ಘಾಟನೆಯಿಂದ ದೂರ ಉಳಿದ ಕಾಂಗ್ರೆಸ್‌ನವರನ್ನು ದೇಶದ ಜನರು ಈ ಚುನಾವಣೆಯಲ್ಲಿ ಸಂಪೂರ್ಣ ದೂರ ತಳ್ಳಲಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಧಾರವಾಡ ಲೋಕಸಭಾ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದ ಖಾಸಗಿ ಹೊಟೇಲ್ ನಲ್ಲಿಂದು ಎಸ್ ಎಸ್ ಕೆ ಸಮಾಜ
ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ತಾವು
ಬಿಜೆಪಿ ಬೆಂಬಲಿಸುತ್ತಲೇ ಬಂದಿರುವ ಎಸ್‌ಎಸ್‌ ಸಮಾವೇಶದಲ್ಲಿ ಮತ ಕೇಳಲು ಬಂದಿಲ್ಲ. ಬದಲಾಗಿ, ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ಶೇ. 100ರಷ್ಟು ವೋಟಿಂಗ್ ದಾಖಲಿಸಿ ಎಂದು ಮನವಿ ಮಾಡಿದರು.
ಸೈನಿಕರ ಶವದ ಮೇಲೆ ರಾಜಕಾರಣ ಮಾಡಿದ ಕಾಂಗ್ರೆಸ್‌ನವರು ಮೋದಿ ಸರ್ಕಾರದ ಪ್ರತಿ ಹೆಜ್ಜೆಯಲ್ಲಿ ಹುಳುಕು ಹುಡುಕಲು ಹೋದರು. ಆರ್ಟಿಕಲ್ 370 ಕಾಶ್ಮೀರ ವಿಷಯವನ್ನು ಕರ್ನಾಟಕದಲ್ಲಿ ಏಕೆ ಪ್ರಸ್ತಾಪಿಸುತ್ತೀರಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಳುತ್ತಾರೆ. ವಯನಾಡಿನಲ್ಲಿ ನಾಮಪತ್ರ ಸಲ್ಲಿಸುವ ವೇಳೆ ರಾಹುಲ್ ಗಾಂಧಿ ಹಿಂದೆ ನಿಂತವರೆಲ್ಲ ಮುಸ್ಲಿಂ ಲೀಗ್ ಧ್ವಜ ಹಿಡಿದುಕೊಂಡಿದ್ದಾರೆ. ದೇಶ ಒಂದು ಎನ್ನುವ ಭಾವನೆ ಇವರಲ್ಲಿ ಬರುತ್ತಲೇ ಇಲ್ಲ. ಇವರ ಮನಸ್ಥಿತಿ ಯಾವ ಕಡೆ ಹೊರಟಿದೆ ಎಂದು ಪ್ರಶ್ನಿಸಿದರು

ಸಹಸ್ರಾರ್ಜುನ ಮಂದಿರ ನಿರ್ಮಾಣ ಸೇರಿ ಎಸ್ ಎಸ್‌ಕೆ ಸಮಾಜದ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿದ ಜೋಶಿ, ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈಡೇರಿಸುವ ಭರವಸೆ ನೀಡಿದರು.
ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಪಲ್ಲಾದ ಜೋಶಿ ಅವರಿಗೆ ಸುಮಾರು 75 ಸಾವಿರ ಮತಗಳ ಲೀಡ್ ನೀಡಬೇಕು. ಇದಕ್ಕಾಗಿ ಎಲ್ಲರೂ ಶ್ರಮ ವಹಿಸೋಣ ಎಂದು ಹೇಳಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಎಸ್ ಎಸ್‌ಕೆ ಸಮಾಜವು ಧರ್ಮ, ಆಚರಣೆ ಮುಂತಾದ ವಿಷಯದಲ್ಲಿ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಜೀವನ ನಡೆಸುತ್ತಿದೆ. ಸಮಾಜದ ಜನರು ಬಿಜೆಪಿಯ ಶಕ್ತಿಯಾಗಿ ನಿಂತಿದ್ದಾರೆ. ಹಿಂದುತ್ವಕ್ಕಾಗಿ ಸತತ ಹೋರಾಟ ಮಾಡುತ್ತ ಬಂದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ಅಶೋಕ ಕಾಟವೆ, ಜೋಶಿ ಅವರನ್ನು ಬೆಂಬಲಿಸುತ್ತ ಬಂದಿರುವ ಸಮಾಜದ ಜನರು ಈ ಬಾರಿ ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲ್ಲಿಸುವ ಪಣ ತೊಟ್ಟಿದ್ದಾರೆ ಎಂದರು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ಎಸ್‌ಎಸ್ ಕೆ ಮುಖಂಡರಾದ ನಾಗೇಶ ಕಲಬುರ್ಗಿ, ಭಾಸ್ಕರ ಜಿತೂರಿ. ಡಾ. ಶಶಿ ಮೆಹರವಾಡೆ, ಯಲ್ಲಪ್ಪ, ಲಕ್ಷ್ಮಣ ದಲಬಂಜನ, ನೀಲಕಂಠಸಾ ಜಡಿ, ಗೋಪಾಲ ಬಡ್ಡಿ, ರಾಜು ಜರತಾರಘರ, ವೆಂಕಟೇಶ ಕಾಟವೆ, ಸೀಮಾ ಲದ್ವಾ, ಪುಷ್ಪಾ ಪವಾರ, ಇತರರು ಪಾಲ್ಗೊಂಡಿದ್ದರು.
ಹುಡಾ ಮಾಜಿ ಅಧ್ಯಕ್ಷ ಬಾಳು ಮಗಜಿಕೊಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಮಾಜಿಸದಸ್ಯ ರಂಗಾ ಬದ್ದಿ ಸ್ವಾಗತಿಸಿದರು.


Spread the love

About Karnataka Junction

    Check Also

    ಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು

    Spread the loveಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು ಹುಬ್ಬಳ್ಳಿ: ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿರುವ …

    Leave a Reply

    error: Content is protected !!