ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರ ಬಗ್ಗೆ ಅಪಾರ ಗೌರವ ಇದೆ-ಲಾಡ್
ಹುಬ್ಬಳ್ಳಿ : ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಕಾಂಗ್ರೆಸ್ ಟಿಕೆಟ್ ಕೊಡುವ ವಿಚಾರವಾಗಿ ನನಗೆ ಏನು ಗೊತ್ತು ಇಲ್ಲ ಎಂದು
ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಧ್ಯಮ ವಕ್ತಾರ ಸಂತೋಷ ಲಾಡ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ನಾನು ಕಳೆದ ಐದೇನದು ದಿನಗಳಿಂದ ಇಲ್ಲೇ ಇದ್ದೇನೆ ಯಾವುದೇ ರೀತಿಯ ಮಾಹಿತಿ ಇಲ್ಲ ಹೈಕಮಾಂಡ್ ನಲ್ಲಿ ಏನು ಚರ್ಚೆ ಆಗಿದೆ ಎಂಬ ಮಾಹಿತಿ ಸಹ ಇಲ್ಲ ಈ ಬಗ್ಗೆ ನಾನು ಏನು ಹೇಳಲಾರೆ. ಆದರೆ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರ ಬಗ್ಗೆ ಅಪಾರ ಗೌರವ ಇದೆ ಎಂದರು.
ಅವರೊಬ್ಬ ಮಹಾನ್ ವ್ಯಕ್ತಿ ಭಾವೈಕ್ಯತೆ ಸ್ವಾಮೀಜಿ ಆಗಿದ್ದು ಅವರಿಗೆ ಶಕ್ತಿ ಇದೆ ದೊಡ್ಡ ಪ್ರಮಾಣದಲ್ಲಿ ಲಕ್ಷಾಂತರ ಭಕ್ತರು ಹಿಂಬಾಲಕರು ಇದ್ದಾರೆ. ಧಾರವಾಡ ಜಿಲ್ಲೆ ಅಷ್ಟೇ ಎಲ್ಲಾ ರಾಜ್ಯದ ಎಲ್ಲ ಕಡೆ ಇದ್ದಾರೆ. ಅವರು ರಾಜಕೀಯಕ್ಕೆ ಬರುವುದರಿಂದ ಏನಾಗುತ್ತದೆ ಅಂತಾ ಹೇಳಲು ನನಗೆ ಆಗಲ್ಲ. ಅವರ ಆದರೆ ಆರ್ಶೀವಾದಿಂದ ನಾವು ಸಹ ಚುನಾವಣೆಗೆ ಹೋಗತಾ ಇದ್ದೇವೆ.ಅವರ ಮಠ ಭಾವೈಕ್ಯತೆ ಕ್ಕೆ ಹೆಸರು ಅವರೊಬ್ಬ ಸಾಮಾಜಿಕ ಸಾಮರಸ್ಯ ಒಳ್ಳೆಯ ಹೆಸರು ಇದ್ದರು ರಾಜಕೀಯ ಬಗ್ಗೆ ಚರ್ಚೆ ಸಮಯ ಇದಲ್ಲಾ ಎಂದರು.
ಮಾಜಿ ಸಚಿವ ಹಾಗೂ ಶಾಸಕ ವಿನಯ ಕುಲಕರ್ಣಿ ಅವರಿಗೆ ಅವರ ಕುಟುಂಬಕ್ಕೆ ಆದ ಅನ್ಯಾಯ ಕುರಿತು ತೊಡಗಿಕೊಂಡಿದ್ದಾರೆ ಎಂದರು.