Breaking News

ಪರಿಶಿಷ್ಟ ಪಂಗಡದ ಸಮಾವೇಶ ಏ. 13 ರ ಪೂರ್ವಭಾವಿ ಸಭೆ

Spread the love

ಪರಿಶಿಷ್ಟ ಪಂಗಡದ ಸಮಾವೇಶ ಏ. 13 ರ ಪೂರ್ವಭಾವಿ ಸಭೆ

ಸಮಾವೇಶದಲ್ಲಿ ಅಂದಾಜು 10 ಸಾವಿರ ಜನ ಸೇರುವ ನಿರೀಕ್ಷೆ

ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದ ಪರಿಶಿಷ್ಟ ಪಂಗಡದ ಸಮಾವೇಶವನ್ನು ಏ. 13 ರಂದು ನಗರದಲ್ಲಿ ಹಮ್ಮಿಕೊಳ್ಳಲಿರುವ ಹಿನ್ನೆಲೆಯಲ್ಲಿ ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿತ್ತು.
ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷ ಹನುಮಂತು ಬಂಗಾರು ಮಾತನಾಡಿ, ಸಮಾವೇಶದಲ್ಲಿ ಅಂದಾಜು 10 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬುವ ಕಾರ್ಯಕ್ರಮ ಇದಾಗಲಿದೆ ಎಂದು ಹೇಳಿದರು.
ಬಿಜೆಪಿ ಸಂವಿಧಾನದ ಆಶಯದಂತೆ ಆಡಳಿತ ನಡೆಸಿದ್ದು, ಮಹಾತ್ಮಾ ಗಾಂಧೀಜಿ ತೋರಿದ ಮಾರ್ಗದಲ್ಲಿ ದೇಶ ಕಟ್ಟುವ ಕೆಲಸ ಮಾಡಿದೆ ಎಂದರು.
ಸಮುದಾಯಗಳನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿವೆ. ಹೀಗಾಗಿ, ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. ಜನರ ಕ್ಷೇಮ ಕಾಪಾಡಲು ನಾವು ಇದ್ದೇವೆ ಎಂದು ಭರವಸೆ ನೀಡುವ ಉದ್ದೇಶದಿಂದ ಸಮಾವೇಶ ಹಮ್ಮಮಿ ಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮಾಂತರ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪುಂಡಲೀಕ ತಳವಾರ, ಲಕ್ಷ್ಮಣ ಮಾಗಿನಮನಿ, ಸಂತೋಷ ತಳವಾರ, ರವಿ ಬೆಂತೂರು, ಮಂಜುಳಾ ಅಕ್ಕೂರ, ಮಣಿಕಂಠ ಶ್ಯಾಗೋಟಿ, ಅಶೋಕ ವಾಲ್ಮೀಕಿ, ಅಶೋಕ ಸೂಲ್ಲಾರಗೊಪ್ಪ, ಚಿದಾನಂದ ದಂಡಪ್ಪನ್ನವರ, ಯಲ್ಲಪ್ಪ ದುಂದುರ ಹಾಗೂ ಇತರರು ಭಾಗವಹಿಸಿದ್ದರು.


Spread the love

About Karnataka Junction

[ajax_load_more]

Check Also

ವೀರಶೈವ ಲಿಂಗಾಯತ ಧಾರವಾಡ ಮಹಾಸಭಾ ಜಿಲ್ಲಾ ಘಟದ ಅಧ್ಯಕ್ಷರಿಗೆ ಸನ್ಮಾನ

Spread the loveಹುಬ್ಬಳ್ಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಧಾರವಾಡ ಮಹಾಸಭಾ ಜಿಲ್ಲಾ ಘಟಕ ಲಿಂಗಾಯತ ಭವನದಲ್ಲಿ ಅಖಿಲ ಭಾರತ …

Leave a Reply

error: Content is protected !!