ಭೈರಿದೇವರಕೊಪ್ಪ ರೇಶನ್‌ ಸಮಸ್ಯೆ, ಪರಿಹಾರ ಒದಗಿಸದಿದ್ದರೆ ಹೋರಾಟ

Spread the love

ಭೈರಿದೇವರಕೊಪ್ಪ ಪಡಿತರ ಸಮಸ್ಯೆ ಬಗೆಹರಿಸಲು ತಾಕೀತು

ಹುಬ್ಬಳ್ಳಿ: ನಗರದ ಭೈರಿದೇವರಕೊಪ್ಪ ಶ್ರೀ ಗಣೇಶ ಯುವಕ ಮಂಡಳದ ಕಟ್ಟಡದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾಗಿ ಪಡಿತರ ಸಿಗದೇ ನಾಗರಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಡಿತರ ಗ್ರಾಹಕರು ರೇಶನ್ ಕೊಡುವುದು ಆರಂಭವಾದ ಕೂಡಲೇ ಬೆಳಗಿನ ಜಾವ ಬಂದು ಸರದಿಯಲ್ಲಿ ನಿಲ್ಲುತ್ತಾರೆ. ಇದರಿಂದಾಗಿ ಜನರಿಗೆ ತೊಂದರೆ ಆಗಿದ್ದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ರೇಶನ್ ಅಂಗಡಿಯವರು ಮಧ್ಯಾಹ್ನ 12ಕ್ಕೆ ಬಾಗಿಲು ಮುಚ್ಚುವುದರಿಂದ ಆ ನಂತರವೂ ಸಂಜೆಯವರೆಗೆ ಅನೇಕ ಜನರು ಕಾಯುತ್ತ ಕುಳಿತುಕೊಳ್ಳುತ್ತಾರೆ.ಸಂಜೆ 4ಕ್ಕೆ ಮಳಿಗೆ ಆರಂಭವಾದರೆ ಆಗಲೂ ಗೌಜು ಗದ್ದಲ ಇರುತ್ತದೆ. ಈ ಪರದಾಟದ ಮಧ್ಯೆ ವಯಸ್ಸಾದವರು, ಮಹಿಳೆಯರು ಪಡಿತರ ಮನೆಗೆ ಒಯ್ಯುವುದು ದುಸ್ತರವಾಗಿದೆ. ಈ ಬಗ್ಗೆ ಪಡಿತರ ಇಲಾಖೆಯವರಿಗೆ ಮನವರಿಕೆ ಮಾಡಿ ಪರಿಹಾರ ಮಾಡಲು ಸ್ಥಳಕ್ಕೆ ಬರಲು ಹೇಳಿದರೆ ಅಧಿಕಾರಿಗಳು ಬರುತ್ತಿಲ್ಲ ಎಂದು ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರು ದೂರಿದರು.
ಈ ಒಂದೇ ಪಡಿತರ ಅಂಗಡಿಗೆ 2500 ಪಡಿತರ ಚೀಟಿಗಳಿವೆ. ರೇಶನ್ ಕೊಡಲು ಆರಂಭಿಸಿದ ಕೂಡಲೇ ಗ್ರಾಹಕರು ಎಲ್ಲ ಕೆಲಸ ಬಿಟ್ಟು ಸರದಿಯಲ್ಲಿ ನಿಲ್ಲುತ್ತಾರೆ. ಇದರಿಂದ ಗೊಂದಲ ಉಂಟಾಗುತ್ತದೆ.
ಜನರು ಇಷ್ಟೊಂದು ತೊಂದರೆ ಅನುಭವಿಸುತ್ತಿದ್ದರೂ ಜಗದೀಶ್ ಇಲಾಖೆಗೆ ಗಮನಕ್ಕೆ ಇಲ್ಲ. ಕೂಡಲೇ ಈ ಸಮಸ್ಯೆ ಬಗೆ ಹರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಗುಂಡೂರು ಎಚ್ಚರಿಕೆ ನೀಡಿದ್ದಾರೆ.


Spread the love

Leave a Reply

error: Content is protected !!