Breaking News

ಮಹದಾಯಿ ಹೋರಾಟಗಾರರ ಸಂಘಟನೆ ಧಾರವಾಡ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ- ಸೊಬರದಮಠ

Spread the love

*ಮಹದಾಯಿ ಹೋರಾಟಗಾರರ ಸಂಘಟನೆ ಧಾರವಾಡ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ- ಸೊಬರದಮಠ

ಧಾರವಾಡ:
ಮಹದಾಯಿ ಹೋರಾಟಗಾರರ ಸಂಘಟನೆ ಧಾರವಾಡ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡಲಾಗಿದೆ ಎಂದು ಕರ್ನಾಟಕ ಸಮತಾ‌ ಪಕ್ಷದ ಅಧ್ಯಕ್ಷ ಹಾಗೂ ಮಹದಾಯಿ ಹೋರಾಟಗಾರವಿರೇಶ ಸೊಬರದಮಠ ಹೇಳಿದರು.
ನಗರದಲ್ಲಿಂದು ಸಭೆ ನಂತರ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದರು,೯ ವರ್ಷಗಳಿಂದ ಕುಡಿಯುವ ನೀರಿನ ಬಗ್ಗೆ ಹೋರಾಟ ಮಾಡುತ್ತ ಬಂದಿದ್ದೆವೆನಾವು‌ ಪ್ರಮಾಣಿಕ ಹೋರಾಟ ಮಾಡಿದರೂ ಕೂಡಾ ಕೇಂದ್ರದ ಬಿಜೆಪಿ ಸರ್ಕಾರ ಈ ಯೋಜೆನೆಗೆ ವಿಳಂಬ ಮಾಡಿದೆ
ಇದು‌ ನೋವಿನ ಸಂಗತಿ, ಈ ಭಾಗದ ನಾಲ್ಕು ಸಂಸದರು ಕಿರುಕುಳ ಕೊಡುವುದರಲ್ಲಿ‌ ಮೇಧಾವಿಗಳು
ಪ್ರಬುದ್ಧ ಹೊಂದಿದ ಪ್ರಹ್ಲಾದ ಜೋಶಿ‌ ಅವರು ಮೋಸ ಮಾಡಿದ್ಧಾರೆ, ಆಗುವ ಯೋಜನೆಗೆ ಅಡ್ಡಿ‌ ಮಾಡಿದ್ದಾರೆಈ‌ ಬಗ್ಗೆ ನಮ್ಮ ಬಳಿ ದಾಖಲೆ ಇವೆ, ಸುಳ್ಳು ಹೇಳಿದರೆ ನಿಮ್ಮ ಮನೆ ಮುಂದೆ ಬಂದು ರೈತರು ಕುಳಿತುಕೊಳ್ತಾರೆ. ನೀತಿ‌ ಸಂಹಿತೆ ಇದ್ರೂ ಕೂಡಾ ಹೆದರಲ್ಲ, ನಮ್ಮ ಪ್ರಾಣ ಹೋಗಲಿನಾವು ನೊಂದಿದ್ದೆವೆ, ನಿಮಗೆ ನಮ್ಮ‌ಜನ ಮತ ಹಾಕಿ ಗೆಲ್ಲಿಸಿದರೂ ನೀವು ನೀರು ತರಲಿಲ್ಲ
ನೀವು‌ ಸಂಸದರಾಗಲು ಲಾಯಕ್ಕಿಲ್ಲ
ಮೊದಲು ನೀವು ಬದಲಾಗಬೇಕು, ನಾಲ್ಕು ಜಿಲ್ಲೆಗಳಾದ ಹಾವೇರಿ, ಬಾಗಲಕೋಟ, ಧಾರವಾಡ ಬೆಳಗಾವಿಯಲ್ಲಿ ಎಲ್ಲರೂ ಹಗಲು ರಾತ್ರಿ ದುಡಿತೆವೆಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಬೇಡಿಕೆ ಇಡದೇ ಬೆಂಬಲ‌ ಕೊಟ್ಟಿದ್ದೇವೆ ಕಾಂಗ್ರೆಸ್ ನವರು ಗಂಟು ಕೊಟ್ಟಿದಾರೆಂದು ಬಿಜೆಪಿಯವರು ಹೇಳಬೇಡಿ
ರಾಮನ ಪಾದದ ಮೇಲೆ ನಾನು ಪ್ರಮಾಣ ಮಾಡಿ ಹೇಳುವೆ
ಕಾಂಗ್ರೆಸ್ ಪಕ್ಷದಿಂದ ನಯಾಪೈಸೆ ಪಡೆಯದೇ ಬಿಜೆಪಿ ಸೋಲಿಸುತ್ತೇವೆಬಸವರಾಜ್ ಬೊಮ್ಮಾಯಿ ಪಾದಯಾತ್ರೆ ಮಾಡಿದ್ದರುಆದರೆ ಮಹದಾಯಿಗಾಗಿ ಏನು ಮಾಡಿದ್ರಿ? ಸಚಿವಪ್ರಹ್ಲಾದ ಜೋಶಿ ನೀವು ಬಾರಕೋಲ ಹಾಕಿಕೊಂಡು ಹೋರಾಟ ಮಾಡಿದ್ರಿ
ಆದರೆ ಮಹದಾಯಿಗೆ ಕೊಡಿಸಲು ಆಗಿಲ್ಲ ಅನುಮತಿ ಕೊಡಿಸಲಾಗದ ನೀವ್ಯಾಕೆ ಸಂಸದರಾಗಿರಬೇಕು
ನೀವ್ಯಾಕೆ ಸಚಿವರಾಗಿರಬೇಕು ಎಂದರು.


Spread the love

About Karnataka Junction

    Check Also

    ಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು

    Spread the loveಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು ಹುಬ್ಬಳ್ಳಿ: ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿರುವ …

    Leave a Reply

    error: Content is protected !!