Breaking News

ಸದೃಡ ರಾಷ್ಟ್ರ ನಿರ್ಮಾಣಕ್ಕೆ ಒಗ್ಗಟ್ಟು; ಜೋಶಿ

Spread the love

ಸದೃಡ ರಾಷ್ಟ್ರ ನಿರ್ಮಾಣಕ್ಕೆ ಒಗ್ಗಟ್ಟು; ಜೋಶಿ

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಯನ್ನು ಈ ಬಾರಿ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿಯಾಗಿ ಎದುರಿಸುತ್ತಿದೆ. ಎರಡೂ ಪಕ್ಷದವರು ಒಂದೆಡೆ ಸೇರಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಅದೇ ರೀತಿಯಾಗಿ ಬಿಜೆಪಿ ಮತ್ತು ಜೆಡಿಎಸ್ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದು, ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದರು.
ನಗರದಲ್ಲಿಂದು ನಡೆದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕೂಡ ಬಿಜೆಪಿ ಮತ್ತು ಜೆಡಿಎಸ್​ ಸಮನ್ವಯ ಸಭೆ ಅವರು ಮಾತನಾಡಿದರು,
ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸುವ ಸಲುವಾಗಿ ಜಾತ್ಯಾತೀತ ಜನತಾದಳ ಪಕ್ಷವು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಿದ್ದು, ಇಂದು‌, ಜೆಡಿಎಸ್ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು.
ಮಾಜಿ ಪ್ರಧಾನಮಂತ್ರಿ ಎಚ್​ಡಿ ದೇವೇಗೌಡ ಅವರ ಮಾರ್ಗದರ್ಶನದಲ್ಲಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರೆಲ್ಲರೂ ಬಿಜೆಪಿಯನ್ನು ಬೆಂಬಲಿಸಿ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವ ಭರವಸೆ ನೀಡಿದರು ಎಂದಿದ್ದಾರೆ.
ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಗುರುರಾಜ ಹುಣಸಿಮರದ, ಮಾಜಿ ಸಚಿವರಾದ ಕೆ.ಎನ್.ರೆಡ್ಡಿ, ಜೆಡಿಎಸ್ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಬಿ ಬಿ ಗಂಗಾಧರಮಠ, ವೀರಭದ್ರಪ್ಪ ಹಾಲಹರವಿ, ಅಹ್ಮದ್ ಸಿ ಅರಸಿಕೇರಿ, ನವೀನ್ ಮಡಿವಾಳರ,
ಬಿಜೆಪಿ ಪ್ರಮುಖರಾದ ಪ್ರಭು ನವಲಗುಂದಮಠ ಹಾಗೂ ಪ್ರಮುಖರು ಉಪಸ್ಥಿತರಿದ್ದರು.


Spread the love

About Karnataka Junction

    Check Also

    ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ

    Spread the loveಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಆಹಾರ ಹಾಗೂ ಗ್ರಾಹಕ …

    Leave a Reply

    error: Content is protected !!