ಹುಬ್ಬಳ್ಳಿ : ಸರ್ವ ಧರ್ಮಗಳ ಸಮನ್ವಯದ ಮಠ ಶ್ರೀ ಸಿದ್ಧಾರೂಢರ ಮಠದ ಆವರಣದಲ್ಲಿ ಎರಡನೇ ಭಾರೀಗೆ
ಹಾಲು ಕರೆಯುವ ಸ್ಪರ್ಧೆ ನಡೆಸಲಾಯಿತು.
ಸದ್ಗುರು ಸಿದ್ಧಾರೂಢರ ಜಾತ್ರೆ ಅಂದ್ರೆ ಸಾಕು, ಎಲ್ಲರಿಗೂ ಅಚ್ಚುಮೆಚ್ಚು. ವಾಣಿಜ್ಯ ನಗರಿ ಹುಬ್ಬಳ್ಳಿ ಜನರು ಮಾತ್ರವಲ್ಲದೆ ನಾಡಿನ ವಿವಿಧ ಮೂಲೆಗಳಿಂದ ಜನರು ಆಗಮಿಸುತ್ತಾರೆ. ಒಂದು ವಾರ ನಡೆಯುವ ಈ ಜಾತ್ರೆಯಲ್ಲಿ ಪಶು ಸಂಗೋಪನಾ ಇಲಾಖೆ
ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಿದ್ದು, ಕೃಷಿ ಹಾಗೂ ಹಾಲು ಉತ್ಪಾದನೆ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕಾರ್ಯ ಮಾಡಲಾಗಿತ್ತು.
ಜಾನುವಾರುಗಳ ಹೆಚ್ಚು ಹಾಲು ಉತ್ಪಾದನೆ ಮತ್ತು ಸಾಕಣಿಕೆ ಕುರಿತಂತೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಈ ಒಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ಹೈನುಗಾರಿಕೆ ಹಾಗೂ ಕೃಷಿಯೇತರ ಚಟುವಟಿಕೆಗಳ ಉತ್ತೇಜನಕ್ಕೆ ಈ ಸ್ಪರ್ಧೆ ಸಾಕ್ಷಿಯಾಗಿದೆ.
ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ಕೆಎಂಎಫ್ ವತಿಯಿಂದ ಸ್ಪರ್ಧೆಯೊಂದನ್ನು ಆಯೋಜಿಸಲಾಗಿದ್ದು, ಸ್ಪರ್ಧೆಗೆ ಜಿಲ್ಲೆಯ ವಿವಿಧ ಕಡೆಗಳಿಂದ ಹೈನುಗಾರಿಕೆಯಲ್ಲಿ ತೊಡಗಿದ ಕೃಷಿಕರು ಆಗಮಿಸಿದ್ದರು. ಇಲ್ಲಿ ತಮ್ಮ ಜಾನುವಾರುಗಳ ಹಾಲು ಕರೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಸ್ಪರ್ಧೆಯಲ್ಲಿ ಪಾಲ್ಗೊಂಡ ಯುವಕರು ಹಾಗೂ ಮಹಿಳೆಯರು ಸಿದ್ಧಾರೂಢರ ಜಾತ್ರೆ ಮೆರಗನ್ನು ಹೆಚ್ಚಿಸಿದರು.
ಒಟ್ಟಿನಲ್ಲಿ ನಗರೀಕರಣದ ಭರಾಟೆಯ ನಡುವೆಯೂ ಕೂಡಾ, ಹಾಲು ಕರೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ. ಅಲ್ಲದೆ ಜಾನುವಾರು ಸಾಕಣಿಕೆ ಮತ್ತು ಹಾಲು ಕುರಿತಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಶ್ರೀ ಸಿದ್ಧಾರೂಢ ಮಠದ ಸಮಿತಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಡರ್,
ಧರ್ಮದರ್ಶಿಗಳಾ ಶಾಮಾನಂದ ಪೂಜಾರಿ, ವಿನಾಯಕ ಪಡಕೆ,
ಧಾರವಾಡ ಜಿಲ್ಲಾ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ಧೇಶಕರಾದ ಡಾ. ರವಿ ಸಾಲಿಗೌಡರ, ಸಹಾಯಕ ನಿರ್ದೇಶಕ ಡಾ. ಅರ್, ವೈ.ಹೊಸಮನಿ, ಡಾ. ಎಚ್ ವೈ ಹೊನ್ನಿನಾಯಕರ, ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ, ಸ್ವಾಗತ, ನಿರೂಪಣೆ ಶಿಲ್ಪಾ ಬೆನ್ನೂರು, ವಂದನಾರ್ಪಣೆ ಶಂಕರ ಪಾಟೀಲ ಮುಂತಾದವರು ಇದ್ದರು.
ನಂತರ ವಿಜೇತ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
Check Also
ಹಿಂದೂ ಹಬ್ಬಗಳು ಬಂದಾಗ ಮಾತ್ರ ಕಾಂಗ್ರೆಸ್ಸಿಗೆ ಕಾನೂನು ನೆನಪಾಗುತ್ತೆ: ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್
Spread the loveಬೆಂಗಳೂರು: ಕಾಂಗ್ರೆಸ್‌ನವರಿಗೆ ಹಿಂದೂ ಹಬ್ಬ ಬಂದಾಗ ಮಾತ್ರ ನೀತಿ, ನಿಯಮ, ಕಟ್ಟಳೆಗಳು ನೆನಪಿಗೆ ಬಂದುಬಿಡುತ್ತವೆ! ತಮ್ಮ ಬಾಂಧವರು …