Breaking News

ಮಹಿಳೆಯರ ಬಗ್ಗೆ ಕಾಂಗ್ರೆಸ್ ನಾಯಕರ ಅವಮಾನ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೈತ್ರಾ ಶಿರೂರ ಆಕ್ರೋಶ ಮಹಾನಗರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಮಾಜಿ ಉಪಮೇಯರ್ ಮೇನಕಾ ಹುರಳಿ, ಸೀಮಾ ಉಪಸ್ಥಿತಿ ಹುಬ್ಬಳ್ಳಿ: ಚುನಾವಣಾ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಮುಂದು ವರಿಸಿದ್ದು ಖಂಡನೀಯ ಎಂದು ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೈತ್ರಾ ಶಿರೂರ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನದು ಮಹಿಳಾ ವಿರೋಧಿ ನೀತಿಯಾಗಿದೆ. ಇದಕ್ಕೆ ನಾಡಿನ ಮಹಿಳೆಯರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.ಕಾಂಗ್ರೆಸ್‌ ನಾಯಕರು ಅನೇಕರು ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅಲ್ಪಸಂಖ್ಯಾತರ ತುಷ್ಟಿಕರಣಕ್ಕೆ ಇಳಿದಿರುವ ಕಾಂಗ್ರೆಸ್ ಸರ್ಕಾರ ಪರೀಕ್ಷೆ ಬರೆಯಲು ಹೋದ ಮಹಿಳೆಯರ ಕಾಲುಂಗರ, ತಾಳಿ ತೆಗೆದಿಡಲು ಹೇಳಿತ್ತು. ಹಿಜಾಬ್ ಧರಿಸಲು ಅವಕಾಶ ಕೊಡುವ ಇವರು, ಹಿಂದು ಮಹಿಳೆಯರಿಗೆ ಮಾತ್ರ ಇಲ್ಲದ ನಿಯಮ ರೂಪಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದು ಸಂಸ್ಕೃತಿಗೆ ಕಾಂಗ್ರೆಸ್ ನವರು ಮಹತ್ವ ನೀಡುವುದಿಲ್ಲ. ಮಹಿಳೆಯರನ್ನು ಅವಮಾನ ಮಾಡುವುದೇ ಅವರ ಕೆಲಸವಾಗಿದೆ. ಇದೆಲ್ಲಕ್ಕೂ ಮಹಿಳೆಯರು ಸೂಕ್ತ ಉತ್ತರ ನೀಡಲಿದ್ದಾರೆ ಎಂದರು. ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿರ್ ಪ್ರಲ್ಲಾದ ಜೋಶಿ ಅವರು ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರು ಲಿಂಗಾಯತ ಮುಖಂಡರನ್ನು ತುಳಿದಿಲ್ಲ ಎಂದ ಚೈತ್ರಾ ಶಿರೂರ ಅವರು, ಶ್ರೀಫಕೀರ ದಿಂಗಾಲೇಶ್ವರ ಸ್ವಾಮೀಜಿಗಳ ಹೇಳಿಕೆಗೆ ಪ್ರತಿಕ್ರಿಯಿಸುವಷ್ಟು ದೊಡ್ಡವರು ನಾವಲ್ಲ. ಆದರೆ, ಜೋಶಿ ಅವರಿಗೆ ಎಂದಿನಂತೆ ಶ್ರೀಗಳು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡುವೆ ಎಂದು ಉತ್ತರಿಸಿದರು. ಮಹಾನಗರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಮಾಜಿ ಉಪಮೇಯರ್ ಮೇನಕಾ ಹುರಳಿ, ಸೀಮಾ ಲದ್ವಾ ಗೋಷ್ಠಿಯಲ್ಲಿದ್ದರು.

Spread the love

ಮಹಿಳೆಯರ ಬಗ್ಗೆ ಕಾಂಗ್ರೆಸ್ ನಾಯಕರ ಅವಮಾನ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೈತ್ರಾ ಶಿರೂರ ಆಕ್ರೋಶ

ಮಹಾನಗರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಮಾಜಿ ಉಪಮೇಯರ್ ಮೇನಕಾ ಹುರಳಿ, ಸೀಮಾ ಉಪಸ್ಥಿತಿ

ಹುಬ್ಬಳ್ಳಿ: ಚುನಾವಣಾ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಮುಂದು ವರಿಸಿದ್ದು ಖಂಡನೀಯ ಎಂದು ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚೈತ್ರಾ ಶಿರೂರ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನದು ಮಹಿಳಾ ವಿರೋಧಿ ನೀತಿಯಾಗಿದೆ. ಇದಕ್ಕೆ ನಾಡಿನ ಮಹಿಳೆಯರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.ಕಾಂಗ್ರೆಸ್‌ ನಾಯಕರು ಅನೇಕರು ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಮೂಲಕ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಅಲ್ಪಸಂಖ್ಯಾತರ ತುಷ್ಟಿಕರಣಕ್ಕೆ ಇಳಿದಿರುವ ಕಾಂಗ್ರೆಸ್ ಸರ್ಕಾರ ಪರೀಕ್ಷೆ ಬರೆಯಲು ಹೋದ ಮಹಿಳೆಯರ ಕಾಲುಂಗರ, ತಾಳಿ ತೆಗೆದಿಡಲು ಹೇಳಿತ್ತು. ಹಿಜಾಬ್ ಧರಿಸಲು ಅವಕಾಶ ಕೊಡುವ ಇವರು, ಹಿಂದು ಮಹಿಳೆಯರಿಗೆ ಮಾತ್ರ ಇಲ್ಲದ ನಿಯಮ ರೂಪಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದು ಸಂಸ್ಕೃತಿಗೆ ಕಾಂಗ್ರೆಸ್ ನವರು ಮಹತ್ವ ನೀಡುವುದಿಲ್ಲ. ಮಹಿಳೆಯರನ್ನು ಅವಮಾನ ಮಾಡುವುದೇ ಅವರ ಕೆಲಸವಾಗಿದೆ. ಇದೆಲ್ಲಕ್ಕೂ ಮಹಿಳೆಯರು ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.
ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿರ್ ಪ್ರಲ್ಲಾದ ಜೋಶಿ ಅವರು ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರು ಲಿಂಗಾಯತ ಮುಖಂಡರನ್ನು ತುಳಿದಿಲ್ಲ ಎಂದ ಚೈತ್ರಾ ಶಿರೂರ ಅವರು, ಶ್ರೀಫಕೀರ ದಿಂಗಾಲೇಶ್ವರ ಸ್ವಾಮೀಜಿಗಳ ಹೇಳಿಕೆಗೆ ಪ್ರತಿಕ್ರಿಯಿಸುವಷ್ಟು ದೊಡ್ಡವರು ನಾವಲ್ಲ. ಆದರೆ, ಜೋಶಿ ಅವರಿಗೆ ಎಂದಿನಂತೆ ಶ್ರೀಗಳು ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡುವೆ ಎಂದು ಉತ್ತರಿಸಿದರು.
ಮಹಾನಗರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಮಾಜಿ ಉಪಮೇಯರ್ ಮೇನಕಾ ಹುರಳಿ, ಸೀಮಾ ಲದ್ವಾ ಗೋಷ್ಠಿಯಲ್ಲಿದ್ದರು.


Spread the love

About Karnataka Junction

[ajax_load_more]

Check Also

ಕೃಷಿ ಜಮೀನಿನಲ್ಲಿಮಿತ್ರ ಬೆಳೆ ಅಳವಡಿಸಿಕೊಳ್ಳಿ

Spread the loveಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕುಂದಗೋಳ ಕೃಷಿ ಜಮೀನಿನಲ್ಲಿಮಿತ್ರ ಬೆಳೆ ಅಳವಡಿಸಿಕೊಳ್ಳಿ ಎಂದು ಕುಂದಗೋಳ ಸಹಾಯಕ ಕೃಷಿ ನಿರ್ದೇಶಕ …

Leave a Reply

error: Content is protected !!