ಏ. ೮ ರಿಂದ ರೋಬೊಟಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆ(ಎಐ) ಬೇಸಿಗೆ ಶಿಬಿರ

Spread the love

ಏ. ೮ ರಿಂದ ರೋಬೊಟಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆ(ಎಐ) ಬೇಸಿಗೆ ಶಿಬಿರ

ಏರ್ ಸ್ಟೆಮ್ ಲ್ಯಾಬ್ಸ್ ಸಹ ಸಂಸ್ಥಾಪಕ ಸುನೀಲ ಜೋಶಿ

ಹುಬ್ಬಳ್ಳಿ: ನಗರದ ಜೆ.ಕೆ. ಎಜುಕೇಶನ್ ಸೊಸೈಟಿ, ಫ್ಯೂಚರ್ ಮೈಂಡ್ಸ್ ಎಜುಕೇಶನ್ ಫೌಂಡೇಶನ್, ಏರ್ ಸ್ಟೆಮ್ ಲ್ಯಾಬ್ಸ್ ಸಹಯೋಗದಲ್ಲಿ ಏ. ೮ ರಿಂದ ರೋಬೊಟಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆ(ಎಐ) ಬೇಸಿಗೆ ಶಿಬಿರ ಆರಂಭಿಸುತ್ತಿದ್ದು, ಎಲ್ಲ ಶಾಲಾ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ ಎಂದು ಏರ್ ಸ್ಟೆಮ್ ಲ್ಯಾಬ್ಸ್ ಸಹ ಸಂಸ್ಥಾಪಕ ಸುನೀಲ ಜೋಶಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ರೋಬೊಟಿಕ್ಸ್ ಹಾಗೂ ಕೃತಕ ಬುದ್ಧಿ ಮತ್ತೆ ಬಾರಿ ಬೇಡಿಕೆ ಬಂದಿದ್ದು, ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿ ಕಲಿಸುವ ಅಗತ್ಯವಿದೆ. ಆದ್ದರಿಂದ ಮೂರು ಸಂಸ್ಥೆಗಳು ಸೇರಿ ಶಿಬಿರ ನಡೆಸುತ್ತಿವೆ ಎಂದರು.
ಶಿಬಿರದ ಅಂಗವಾಗಿ ಏ. ೩,೪,೫ ರಂದು ಇಲ್ಲಿಯ ಅಧ್ಯಪಕನಗರದ ಶಕ್ತಿ ಕಾಲೋನಿಯ ಜೆ.ಕೆ. ಇಂಗ್ಲಿಷ್ ಮೀಡಿಎಂ ಪ್ರೈಮರಿ ಹಾಗೂ ಸೆಕೆಂಡರಿ ಸ್ಕೂಲ್ ನಲ್ಲಿ ಉಚಿತವಾಗಿ ರೊಬೊಟಿಕ್ಸ್ ಪ್ರದರ್ಶನ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ, ಪಾಲಕರು, ಪೋಷಕರಿಗೆ, ಶಿಕ್ಷಕರಿಗೆ, ಪ್ರಾಂಶುಪಾಲರಾಗಿ ಆಹ್ವಾನಿಸಲಾಗಿದೆ ಎಂದರು.
ಏ. ೮ರಿಂದ ೨೩ ರ ವರೆಗೆ ಶಿಬಿರ ಆರಂಭವಾಗಲಿದ್ದು, ಬೆಳಿಗ್ಗೆ ೮ರಿಂದ ೧೦ ಮೊದಲ ಶಿಬಿರ, ೧೧-೧ ಗಂಟೆ ಹಾಗೂ ೩-೫ ಗಂಟೆ ವರಗೆ ಶಿಬಿರ ನಡೆಯಲಿದೆ. ಸೋಮವಾರ ಹಾಗೂ ಶುಕ್ರವಾರ ಮಾತ್ರ ನಡೆಯಲಿದೆ. ಪ್ರತಿ ವಿದ್ಯಾರ್ಥಿಗಳಿಗೆ ೨೫೦೦ ರೂ ಫೀ ನಿಗದಿ ಪಡಿಸಿದೆ. ಸುಮಾರು ೧ ಲಕ್ಷ ವಿದ್ಯಾರ್ಥಿಗಳಿಗೆ ಶಿಬಿರ ನಡೆಸುವ ಗುರಿ ಇದೆ ಎಂದು ತಿಳಿಸಿದರು.
ಜೆ.ಕೆ. ಎಜುಕೇಶನ್ ಸೊಸೈಟಿ ಅಧ್ಯಕ್ಷ ಜಗದೀಶ ಕಲ್ಯಾಣ್ ಶೆಟ್ಟರ, ಏರ್ ಸ್ಟೆಮ್ ಲ್ಯಾಬ್ಸ್ ಸಹ ಸಂಸ್ಥಾಪಕ ಶ್ರೀಕಾಂತ ಇದ್ದರು.


Spread the love

Leave a Reply

error: Content is protected !!