ಚನ್ನಪಟ್ಟಣ ಗೊಂಬೆ, ಕೌದಿ ವಿನ್ಯಾಸ, ನೂಯಾರ್ಕ್‌ನಲ್ಲಿ ನ್ಯಾಯಾರ್ಕ್ ಫ್ಯಾಶನ್ ವೀಕ್‌ನಲ್ಲಿ ಆಯ್ಕೆ

Spread the love

ಚನ್ನಪಟ್ಟಣ ಗೊಂಬೆ, ಕೌದಿ ವಿನ್ಯಾಸ, ನೂಯಾರ್ಕ್‌ನಲ್ಲಿ ನ್ಯಾಯಾರ್ಕ್ ಫ್ಯಾಶನ್ ವೀಕ್‌ನಲ್ಲಿ ಆಯ್ಕೆ

ರಾಜ್ಯದ ಸಂಸ್ಕೃತಿ ಸಾರುವ ಅಂಶಗಳಿಟ್ಟುಕೊಂಡು ಉಡುಪುಗಳ ತಯಾರಿಸುವ ಸ್ಪರ್ಧೆ

ಹುಬ್ಬಳ್ಳಿ: ಹುಬ್ಬಳ್ಳಿ ಇಂಟರ್ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನ್ ಮತ್ತು ಲಂಡನ್ ಸ್ಕೂಲ್ ಆಫ್ ಟ್ರೆಂಡ್ಸ್‌ನ ಹತ್ತು ವಿದ್ಯಾರ್ಥಿಗಳು ರಚಿಸಿದ ಚನ್ನಪಟ್ಟಣ ಗೊಂಬೆಗಳನ್ನೊಳಗೊಂಡ ಕೌದಿ ವಿನ್ಯಾಸವು ಇತ್ತೀಚೆಗೆ ನೂಯಾರ್ಕ್‌ನಲ್ಲಿ ಜರುಗಿದ ನ್ಯಾಯಾರ್ಕ್ ಫ್ಯಾಶನ್ ವೀಕ್‌ನಲ್ಲಿ ಆಯ್ಕೆಯಾಗಿದೆ ಎಂದು ಇನ್‌ಸ್ಟಿಟ್ಯೂಟ್ ನಿರ್ದೇಶಕಿ ಜ್ಯೋತಿ ಬಿಡಸಾರಿಯಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾರ್ಕ್ ಫ್ಯಾಶನ್ ವೀಕ್ ೯ನೇ ಆವೃತ್ತಿ ಇದಾಗಿದ್ದು, ರಾಜ್ಯದ ಸಂಸ್ಕೃತಿ ಸಾರುವ ಅಂಶಗಳಿಟ್ಟುಕೊಂಡು ಉಡುಪುಗಳ ತಯಾರಿಸುವ ಸ್ಪರ್ಧೆ ಇದ್ದಾಗಿತ್ತು. ಶ್ರೀದೇವಿ ಹಾಗೂ ಪೂಜಾ ನೇತೃತ್ವದ ೧೦ ಜನ ವಿದ್ಯಾರ್ಥಿಗಳು ಚನ್ನಪಟ್ಟಣ ಗೊಂಬೆಗಳನ್ನೊಳಗೊಂಡ ಕೌದಿ ವಿನ್ಯಾಸವನ್ನು ರಚಿಸಿದ್ದರು ಎಂದರು.
ಈ ವಿನ್ಯಾಸವನ್ನು ಸಂಸ್ಥೆಯ ವಿದ್ಯಾರ್ಥಿಗಳು ಮೂರು ತಿಂಗಳಲ್ಲಿ ರಚಿಸಿದ್ದಾರೆ. ಬಟ್ಟೆಗಳಿಂದಲೇ ಚನ್ನಪಟ್ಟಣ ಮಾದರಿಯುಳ್ಳ ಗೊಂಬೆಗಳನ್ನು ರಚಿಸಿ, ಹಳೇ ಬಟ್ಟೆಯಿಂದ ಕೌದಿ ಮಾಡಿ, ಕೌದಿಗೆ ಬಟ್ಟೆಯಿಂದ ರಚಿತವಾದ ಗೊಂಬೆಗಳನ್ನು ಅಳವಡಿಸಿದ್ದಾರೆ. ನಮ್ಮ ಕರ್ನಾಟಕ ಸಂಪ್ರದಾಯದ ಕೌದಿಯು ನ್ಯಾಯಾರ್ಕ್ ಫ್ಯಾಶನ್ ವೀಕ್‌ಗೆ ಆಯ್ಕೆಯಾಗಿದ್ದು ಸಂತಸ ಹಾಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಸೆಂಟರ್ ಮುಖ್ಯಸ್ಥೆ ವೆನಿಲಾ, ಮಾರುಕಟ್ಟೆ ಮುಖ್ಯಸ್ಥೆ ಭಾವನಾ ಜೈನ್ ಇದ್ದರು.


Spread the love

Leave a Reply

error: Content is protected !!