ಟೈ- ಹುಬ್ಬಳ್ಳಿ ಅಧ್ಯಕ್ಷರಾಗಿ ಡಾ. ವಿವೇಕ ಪಾಟೀಲ
ಉಪಾಧ್ಯಕ್ಷ ಗಿರೀಶ ಮಾನೆ, ಕಾರ್ಯದರ್ಶಿ ನಾಗರಾಜ ಕೊಟಗಿ, ಖಜಾಂಚಿಯಾಗಿ ಆರ್ಕಿಟೆಕ್ಟ್
ಜಿತೇಂದ್ರ ನಾಯಕ ಆಯ್ಕೆ
ಹುಬ್ಬಳ್ಳಿ; ನಗರದ ಪ್ರಸಿದ್ಧ ಆರ್ಥೊಪಿಡಿಶಿಯನ್ ಡಾ. ವಿವೇಕ
ಪಾಟೀಲ ಇವರು ಟೈ-ಹುಬ್ಬಳ್ಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿವೇಕ ಅವರು60 ದೇಶಗಳಲ್ಲಿ ಕಾರ್ಯ ಪ್ರವರ್ತಿತರಾಗಿರುವ ಟೈ ಸಂಸ್ಥೆಯ ಜಾಗತಿಕ
ಔದ್ಯೋಗಿಕ ಹಾಗೂ ವಾಣಿಜ್ಯ ಅಭಿವೃದ್ಧಿಗಾಗಿ ಮೀಸಲಾಗಿದ್ದು, ಇದರ ಅಂಗ ಸಂಸ್ಥೆಯಾಗಿ ಟೈ-
ಹುಬ್ಬಳ್ಳಿಯ ಸಹಿತ ಅನೇಕ ವರ್ಷಗಳಿಂದ ಈ ಭಾಗದ
ಔದ್ಯೋಗಿಕ ಹಾಗೂ ವಾಣಿಜ್ಯ ಅಭಿವೃದ್ಧಿಗಾಗಿ ಅನೇಕ
ಉಪಕ್ರಮ ಕೈಗೊಂಡಿದೆ. ಹೊಸ ದೃಷ್ಠಿಕೋನ ಹಾಗೂ
ಕ್ರಿಯಾತ್ಮಕ ಧ್ಯೇಯದೊಂದಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ವಿವೇಕ ಪಾಟೀಲ ಇವರು ಹುಬ್ಬಳ್ಳಿ ಧಾರವಾಡಅವಳಿ ನಗರಗಳ ಕೈಗಾರಿಕಾ ಬೆಳವಣಿಗೆ ಹಾಗೂ
ಸ್ಮಾರ್ಟಅಪ್ ಉದ್ಯೋಗಕ್ಕೆ ಇನ್ನಷ್ಟು ಉತ್ತೇಜನ ನೀಡುವ
ಪ್ರಾಶಸ್ತದ ಗುರಿ ಇಟ್ಟುಕೊಂಡಿದ್ದಾರೆ. ಟೈ-ಹುಬ್ಬಳ್ಳಿ ಸಂಸ್ಥೆಯು ಹುಬ್ಬಳ್ಳಿಯಲ್ಲಿ ಶಹರದ ಆರ್ಥಿಕ ಏಳಿಗೆಗಾಗಿ ಔದ್ಯೋಗಿಕ ಹಾಗೂ ವಾಣಿಜ್ಯ ಚಟುವಟಿಕೆಗಳ ಹೆಚ್ಚಿನ
ವಿಸ್ತರಣೆಯ ದೃಷ್ಠಿಯಿಂದ ಬೃಹತ್ ವಿಚಾರ ಸಂಕಿರಣ ಹಾಗೂ
ಗೋಷ್ಠಿ ವ್ಯವಸ್ಥೆ ಮೂಲಕ ದೇಶದ ಹೆಸರಾಂತ ವಾಣಿಜ್ಯೋದ್ಯಮಿಗಳನ್ನು ಆಹ್ವಾನಿಸುವ ಪರಂಪರೆಯನ್ನು ಹಾಕಿಕೊಂಡಿದ್ದು ಅದು ಫಲವನ್ನು
ಸಹ ನೀಡಿರುತ್ತದೆ. ಡಾ. ವಿವೇಕ ಪಾಟೀಲ ಅವರು ತಮ್ಮ
ಅಧಿಕಾರ ಅವಧಿಯಲ್ಲಿ ಟೈ-ಹುಬ್ಬಳ್ಳಿ ಸಂಸ್ಥೆ ಮೂಲಕ ಅವಳಿ ನಗರಗಳ ಔದ್ಯೋಗಿಕ ಅಭಿವೃದ್ಧಿಯ
ಪುನಶ್ಚೇತನ ಹಾಗೂ ಉಪಕ್ರಮ ಕೈಗೊಳ್ಳುವ ಉದ್ದೇಶ ಹೊಂದಿದ್ದಾರೆ.
ಟೈ-ಹುಬ್ಬಳ್ಳಿ ಸಂಸ್ಥೆಯ ಇತರ ಪದಾಧಿಕಾರಿಗಳು:
ಉಪಾಧ್ಯಕ್ಷ ಗಿರೀಶ ಮಾನೆ, ಕಾರ್ಯದರ್ಶಿ ನಾಗರಾಜ ಕೊಟಗಿ ಹಾಗೂ ಖಜಾಂಚಿಯಾಗಿ ಆರ್ಕಿಟೆಕ್ಟ್
ಜಿತೇಂದ್ರ ನಾಯಕ ಆಯ್ಕೆಯಾಗಿದ್ದಾರೆ.