ವಿನೋದ್ ಅಸೂಟಿ ಮರಿ ಟಗರು ಆಗಿ ಗುಮ್ನತ್ತೇ- ಸಚಿವ ಲಾಡ್*

Spread the love

ವಿನೋದ್ ಅಸೂಟಿ ಮರಿ ಟಗರು ಆಗಿ ಗುಮ್ನತ್ತೇ- ಸಚಿವ ಲಾಡ್*

ಹುಬ್ಬಳ್ಳಿ : ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ಬೆನ್ನು ತೋರಿಸಿ ಹೋಗುವುದಿಲ್ಲ. ಆ ಕೆಲಸ ಮಾಡುವುದು ಬಿಜೆಪಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್ ಹೇಳಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ದೇಶದ ಬಗ್ಗೆ ಬಿಜೆಪಿ ಪ್ರಮುಖ ವಿಚಾರ ಮಾತನಾಡದೇ ಸುಮ್ಮನೆ ಮಾಧ್ಯಮಗಳನ್ನು ಬಳಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಒಂದೇ ಒಂದು ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳ ಮುಂದೆ ಬಂದಿಲ್ಲ ಎಂದರು.
ಪಕ್ಷದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ಇಂದಿಗೂ ಪ್ರತಿಯೊಬ್ಬರ ಮನೆಗೂ ತಿಂಗಳಿಗೆ 8 ರಿಂದ 10 ಸಾವಿರ ತಲುಪುತ್ತಿದೆ. ಆದರೆ ಹತ್ತು ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರದಿಂದ ಕನಿಷ್ಠ 100 ರೂ ನೇರವಾಗಿ ಪ್ರತಿಯೊಬ್ಬರಿಗೂ ತಲುಪಿಲ್ಲ ಎಂದು ಆರೋಪಿಸಿದರು.
ಪಕ್ಷದ ಯುವ ಅಭ್ಯರ್ಥಿ ವಿನೋದ ಅಸೋಟಿ ಮರಿ ಟಗರು ಪ್ರಹ್ಲಾದ್ ಜೋಶಿ ಅವರಿಗೆ ಈ ಚುನಾವಣೆಯಲ್ಲಿ ಹೇಗೆ ಸೋಲಿಸುತ್ತಾರೆ ನೋಡಿ ಎಂದು ಭವಿಷ್ಯ ನುಡಿದರು.
ಈ ವೇಳೆ ಮಾಜಿ ಶಾಸಕ ಎಂ.ಎಸ್. ಅಕ್ಕಿ, ಶಿವಾನಂದ ಬೆಂತೂರ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ರಮೇಶ ಕೊಪ್ಪದ, ದೃತಿ ಸಾಲ್ಮನಿ, ಅರವಿಂದ ಕಟಗಿ, ಸುರೇಶ ಸವಣೂರ ಸೇರಿದಂತೆ ಹಲವು ಮುಖಂಡರು ಇದ್ದರು.


Spread the love

Leave a Reply

error: Content is protected !!