ಹುಬ್ಬಳ್ಳಿ; ವಿಶೇಷ ಚೇತನರಲ್ಲಿ ಸಹ ಅಧ್ಯಮ್ಯವಾದ ಶಕ್ತಿ ಇರುತ್ತದೆ ಅದನ್ನ ಸೂಕ್ಷ್ಮವಾಗಿ ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಎಲ್ಲರೂ ಶ್ರಮಿಸಬೇಕು ಎಂದು ಗುಜರಾತಿ ಮಹಿಳಾ ಮಂಡಳ ಅಧ್ಯಕ್ಷೆ ಭಕ್ತಿ ಠಕ್ಕರ್ ಸಲಹೆ ನೀಡಿದರು.
ನಗರದ ಗುಜರಾತಿ ಮಹಿಳಾ ಮಂಡಳ ವತಿಯಿಂದ ಗುಜರಾತ್ ಭವನದ ಆವರಣದಲ್ಲಿ ವಿಶೇಷಚೇತನ ಮಕ್ಕಳ ಜೊತೆಗೆ ವಿನೂತನ ಹಾಗೂ ವಿಭಿನ್ನವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಿ ಅವರು ಮಾತನಾಡಿದರು, ಗುಜರಾತಿ ಮಹಿಳಾ ಮಂಡಳ ಯಾವುದೇ ಆಡಂಬರದ ಮಹಿಳಾ ದಿನಾಚರಣೆ ಆಚರಸಲ್ಲ ಈ ಸಮಾಜಕ್ಕೆ ಮಾನವೀಯ ಮೌಲ್ಯಗಳ ಮೇಲೆ ಮಹಿಳೆಯರ ಹಕ್ಕು ಭಾಧ್ಯತೆಗಳನ್ನ ಕೇಳುತ್ತದೆ. ಇಂದು ಮಕ್ಕಳು ದೇಶದ ಆಸ್ತಿ ಆಸ್ತಿ ವಿಶೇಷಚೇತನರಲ್ಲಿಯೂ ಇದೆ ಅಂತಹ ಮಕ್ಕಳಲ್ಲಿನ ವಿಶೇಷ ಪ್ರತಿಭೆಯನ್ನು ಗುರುತಿಸುವ ಕಾರ್ಯ ನಮ್ಮ ಮಹಿಳಾ ಮಂಡಳ ಮಾಡಿದೆ ಎಂದರು.
ಮಾನಸಿಕ ಅಸ್ವಸ್ಥ ಮಕ್ಕಳು, ಅಂಗವೈಕಲ್ಯ ಮಕ್ಕಳು ಅವರು ಉತ್ಪಾದನೆ ಮಾಡಿದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಅದ್ಭುತವಾಗಿತ್ತು.ಇದಕ್ಕೆ ಎಲ್ಲರೂ
ಬೆಂಬಲ ನೀಡಿ ಪ್ರೋತ್ಸಾಹಿಸಲು ಮನವಿ ಮಾಡಿದರು
ಶ್ರೀಮತಿ ಸುಧಾ ಆರ್‌ಎನ್ ಶೆಟ್ಟಿ ರೋಟರಿ ಶಾಲೆ ಮತ್ತು ಅಸಾಧಾರಣ ಮಕ್ಕಳಿಗಾಗಿ ಉಷಾಸ್ ಕೇಂದ್ರ ಸಹ ಸಹಯೋಗದಿಂದಿಗೆ ನಡೆಸಲಾಯಿತು. ಸಾರ್ವಜನಿಕರು ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸುವ ಮೂಲಕ ವಿಶೇಷ ಮಕ್ಕಳನ್ನು ಬೆಂಬಲಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ಶ್ರೀ ಗುಜರಾತಿ ಮಹಿಳಾ ಮಂಡಲ ಪದಾಧಿಕಾರಿಗಳು ಗುಜರಾತಿ ಸಮಾಜದ ಪ್ರಮುಖರು ಮನವಿ ಮಾಡಿದರು. ಗುಜರಾತಿ ಮಹಿಳಾ ಮಂಡಳದ ಉಪಾಧ್ಯಕ್ಷರಾದ ಮನಿಷಾ ಪಾಟೀಲ್ ಮತ್ತು ಕಾರ್ಯದರ್ಶಿಗಳಾದ ಹ್ಯಾಝೆಲ್ ಗೊರಾಡಿಯಾ, ಜಂಟಿ ಕಾರ್ಯಾದರ್ಶಿ ಸೋನಾಲ್ ಪಾಂಚಾಲ್, ಕೋಶಾಧಿಕಾರಿ ದೀಪ್ತಿ ಠಕ್ಕರ್ ಸಮಾಜದ ಮುಖಂಡರು ಮುಂತಾದವರುಇದ್ದರು.
Check Also
*ಬಂದ್ ಎನ್ನುವ ಕಾನ್ಸೆಪ್ಟ್ ಇಲ್ಲ ಬಲವಂತವಾಗಿ ಬಂದ್ ಮಾಡಿಸುವ ಹಾಗಿಲ್ಲ- ಪೊಲೀಸ್ ಕಮೀಷನರ್ ಖಡಕ್ ಎಚ್ಚರಿಕೆ
Spread the loveಹುಬ್ಬಳ್ಳಿ: ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕರೆ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಬಲವಂತವಾಗಿ ಬಂದ್ ಮಾಡಿಸುವ …