ಹುಬ್ಬಳ್ಳಿ; ಧಾರವಾಡ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಲಿಂಗಾಯತ ಸಮಾಜದ ವಿರೋಧಿ ಆಗಿದ್ದು ಆ ಕ್ಷೇತ್ರದಿಂದ ಬದಲಾವಣೆ ಮಾಡಬೇಕು ಎಂದು ಮಾರ್ಚ್ 31 ರಂದು ಗಡುವು ಕೊಡಲಾಗಿತ್ಥು. ಆದರೆ ನಮ್ಮ ಗಡುವು ಒಳಗೆ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಯಡಿಯೂರಪ್ಪ ಅವರು ಯಾವುದೇ ಕಾರಣಕ್ಕೂ ಪ್ರಲ್ಹಾದ್ ಜೋಶಿ ಅವರನ್ನ ಬದಲಾವಣೆ ಮಾಡಲ್ಲ ಅಂತಾ ಹೇಳಿದ್ದಾರೆ. ಆದ್ದರಿಂದ ತಮ್ಮ ನಿಲುವು ಸಹ ಅಚಲವಾಗಿದ್ದು ಪ್ರಲ್ಹಾದ್ ಜೋಶಿ ಅವರನ್ನ ಸೋಲಿಸಲು ಚಿಂತನ ಮಂಥನ ನಡೆಸಲಾಗುತ್ತದೆ: ಪಟ್ಟಣದಲ್ಲಿ ಫಕೀರ ದಿಂಗಾಲೇಶ್ವರ ಶ್ರೀ ಸ್ಪಷ್ಟಪಡಿಸಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ಈವರೆಗೂ ನಾವು ಕೊಟ್ಟಿರುವ ಗಡುವು ಮುಗಿಯುವ ಮೊದಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಯಾವುದೇ ಕಾರಣಕ್ಕೂ ಪ್ರಹ್ಲಾದ ಜೋಷಿಯವರನ್ನು ಧಾರವಾಡ ಲೋಕಸಭಾ ಕ್ಷೇತ್ರದಿಂದ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಅವರು ಬದಲಿ ಮಾಡದಿದ್ದರೆ ಮತದಾರ ಪ್ರಭುಗಳು ಬದಲಿ ಮಾಡಲಿದ್ದಾರೆ. ನಾವು ಕೂಡಾ ಅವರ ಜೊತೆ ಸೇರಿ ಪ್ರಹ್ಲಾದ ಜೋಶಿ ಅವರನ್ನು ಸೋಲಿಸುವುದೆ ನಮ್ಮ ಗುರಿಯಾಗಿದೆ.
ಪ್ರಹ್ಲಾದ ಜೋಶಿ ಅವರು ಈ ಹಿಂದೆಯೇ ಎರಡು ಬಾರಿ ನಮ್ಮ ಹತ್ತಿರ ಕ್ಷಮೆ ಕೇಳಿದ್ದಾರೆ ಆಗ ನಾವು ಕ್ಷಮಾದಾನ ಮಾಡಿದ್ದೇವೆ. ಅವರು ಚುನಾವಣೆಯ ಸಮಯದಲ್ಲಿ ಕ್ಷಮೆ ಕೇಳುತ್ತಾರೆ. ಗೆದ್ದು ಬಂದ ನಂತರ ಎಲ್ಲಾ ಸ್ವಾಮೀಜಿಗಳನ್ನು, ನಾಯಕರನ್ನು, ನೌಕರರನ್ನು, ವ್ಯಾಪಾರಿಗಳನ್ನು , ಜನ ಪ್ರತಿನಿಧಿಗಳನ್ನು ತುಳಿಯುವ ಕೆಲಸ ಮಾಡಿದ್ದಾರೆ, ಆದಕಾರಣ ಮತದಾರ ಪ್ರಭುಗಳು ಹಾಗೂ ನಮ್ಮ ಹಿತೈಷಿಗಳೆಲ್ಲ ಈ ಲೋಕಸಭಾ ಚುನಾವಣೆಗೆ ತಾವು ಸ್ಪರ್ಧಿಸಿ ಪ್ರಹ್ಲಾದ ಜೋಶಿಯವರನ್ನ ಸೋಲಿಸಿ ಎಂದು ಹೇಳಿದ್ದಕ್ಕೆ ಹಿತೈಷಿಗಳ ಹಾಗೂ ಮತದಾರ ಪ್ರಭುಗಳ ಮಾತನ್ನು ಕೇಳಬೇಕಾದ ಪರಿಸ್ಥಿತಿ ಬಂದು ಒದಗಿದೆ ಎಂದು ಪಕ್ಕಿರ ದಿಂಗಾಲೇಶ್ವರ ಸ್ವಾಮೀಜಿಗಳು ಹೇಳಿದರು.
ಮಹದಾಯಿ ಯೋಜನೆ ಹೋರಾಟಗಾರ ವಿರೇಶ ಸೊಬರದಮಠ, ವೀರಣ್ಣ ಎಳಲಿ ಇದ್ದರು.
