ಜನತಾ ಪಾರ್ಟಿ ಕಾರ್ಯಕರ್ತರ ಸಮಾವೇಶ
ಕಲಘಟಗಿ (ಧಾರವಾಡ) ಕಲಘಟಗಿ ತಾಲೂಕಿನ ಹಿರೇ ಹೊನ್ನಳ್ಳಿ ಹಾಗೂ ದೇವಿ ಕೊಪ್ಪ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಕಾರ್ಯಕರ್ತರ ಸಮಾವೇಶ ನಡೆಯಿತು. ಪ್ರಥಮವಾಗಿ ಈ ಎರಡು ಕ್ಷೇತ್ರ ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲುವು ತಂದು ಕೊಟ್ಟಿದೆ. ಅದಕ್ಕೋಸ್ಕರ ಈ ಎರಡು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಚಾರ ಸಭೆ ಕೈಗೊಂಡು ಮಾನ್ಯ ಸಂಸದರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಮಾತನಾಡಿದರು. ಮತ್ತೊಮ್ಮೆ ಮೋದಿ ಸರ್ಕಾರ ಹತ್ತು ವರ್ಷ ಅವಧಿಯಲ್ಲಿ ಒಂದೇ ಒಂದು ನಯಾ ಪೈಸ ಬ್ರಷ್ಟಾಚಾರ ಇಲ್ಲದ ಸರ್ಕಾರ ಭ್ರಷ್ಟಾಚಾರದಿಂದ ಇಡಿ ದೇಶವನೆ ಮುಕ್ತವನ್ನಾಗಿ ಮಾಡುತ್ತೇವೆ. ಹಾಗೂ 10 ವರ್ಷ ಹಿಂದೆ ನಮ್ಮ ದೇಶ ಆರ್ಥಿಕ ವ್ಯವಸ್ಥೆಯಲ್ಲಿ ಅತ್ಯಂತ ಗಂಭೀರವಾಗಿತ್ತು. ಇಂದು ಭಾರತ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಹಾಗೂ ಮೊದಲಿನ 5 ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದಂತ ಅವ್ಯವಸ್ಥೆಯನ್ನು ಸರಿ ಮಾಡಲು ಹೋಯಿತು. ಆಯುಷ್ಮಾನ್ ಭಾರತ್ ಕಾರ್ಡ್ ಬಡವರಿಗೆ ಆರೋಗ್ಯ ಸೇವೆ ಒದಗಿಸಲು 5 ಲಕ್ಷ ಸಂಪೂರ್ಣ ವೆಚ್ಚ ವನ್ನು ಯೋಜನೆಯ ಮುಖಾಂತರ ಕೊಟ್ಟಿದೆ. ಅಂಗನವಾಡಿ ಕೇಂದ್ರಗಳನ್ನು ನಂದಾ ಘರ ಆಗಿ ಪರಿವರ್ತನೆಗೊಂಡಿದೆ. ಹರ್ ಗರ್ ನಲ್ ಯೋಜನೆಯಲ್ಲಿ ನೀರಿನ ಸಮಸ್ಯೆಯನ್ನು ನೀಗಿಸಲು ಮಲಪ್ರಭಾ ನದಿಯಿಂದ ನೀರು ಪೂರೈಸಲು ಹಿರೇಹೊನ್ನಳ್ಳಿ ಪಂಚಾಯಿತಿಗೆ 1 ಕೋಟಿ .74 ಲಕ್ಷ ವೆಚ್ಚದ ಕಾಮಗಾರಿ ನಡೆದಿದೆ. ಹರ್ ಗರ ನಲ್ ಯೋಜನೆಯನ್ನು ಮಲಪ್ರಭಾ ನದಿಯ ನೀರು ಪೂರೈಸಲು ನಮ್ಮ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮಗಳಲ್ಲಿ ವೀಕ್ಷಣೆ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರಿಗೆ ಟಾಂಗ್ ಕೊಟ್ಟರು. ಬಿಎಸ್ ಯಡಿಯೂರಪ್ಪ ಸರಕಾರದಲ್ಲಿದ್ದಾಗ ರೈತರ ಖಾತೆಗೆ 4 ಸಾವಿರ ಕೇಂದ್ರ ಸರ್ಕಾರದ 6 ಸಾವಿರ ರಾಜ್ಯದ ಪ್ರತಿ ರೈತರ ಖಾತೆಗೆ ನೀಡುತ್ತಿದ್ದರು. ಹಾಗೂ ನಾವು ರಷ್ಯಾದ ಜೊತೆ ಮಾತನಾಡಿ ಪೆಟ್ರೋಲ್. ಡೀಸೆಲ್. ಗ್ಯಾಸ್ .ಕೊರತೆ ಇಲ್ಲದೆ ರಷ್ಯಾ ಜೊತೆ ಸಂಪರ್ಕವನ್ನು ಇಟ್ಟುಕೊಂಡಿದೆ. ನಮ್ಮ ದೇಶದಲ್ಲಿ ಸ್ವದೇಶಿ ವ್ಯಾಕ್ಸಿನ್ ತಯಾರಿಸುವ ಕೀರ್ತಿ ನರೇಂದ್ರ ಮೋದಿಜಿ ಅವರಿಗೆ ಸಲ್ಲುತ್ತದೆ. ಲಾಕ್ಡೌನ್ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಗರಿಬಿ ಕಲ್ಯಾಣ ಯೋಜನೆಯಲ್ಲಿ ಅಕ್ಕಿಯನ್ನು ಕೊಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂದಿದ್ದರು. ಅಕ್ಕಿಯನ್ನು ಕೊಡಲಾಗದೆ ದುಡ್ಡುಕೊಟ್ಟು ಕೆಲವು ಕುಟುಂಬ ವರ್ಗದ ದುಡ್ಡು ಸಹ ಬಂದಿಲ್ಲ ಮತ್ತು ಲೋಕಸಭಾ ವ್ಯಾಪ್ತಿಯಲ್ಲಿ ಪ್ರತಿ ಶಾಲೆಗೆ ಬಣ್ಣ ದರ್ಪಣ ಕಾರ್ಯಕ್ರಮವನ್ನು ನೀಡಿದ್ದು.ಸುರಕ್ಷಿತ ಭಾರತ ಬೇಕಾದರೆ ನರೇಂದ್ರ ಮೋದಿಜಿಯವರನ್ನು ಮತ್ತೊಮ್ಮೆ ನಮ್ಮ ಪ್ರಧಾನ ಮಂತ್ರಿ ಮಾಡಲು ಭಾರತೀಯ ಜನತಾ ಪಕ್ಷಕ್ಕೆ ವೋಟ್ ಮಾಡಿ ರಾಮ ರಾಜ್ಯ ಕಟ್ಟುವುದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಚಬ್ಬಿ. ವಿಧಾನಪರಿಷತ್ ಸದಸ್ಯರಾದ ಎಸ್ ವಿ ಸಂಕನೂರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿನಾಯಕ್ ದನಿಗೊಂಡ. ಕಿರಣ್ ಗೌಡ್ರು ಪಾಟೀಲ್ ಕುಲಕರ್ಣಿ. ಶಶಿಧರ್ ನಿಂಬಣ್ಣವರ. ಈರಣ್ಣ ಜಡ್ಡಿ. ಶಂಕ್ರಣ್ಣ ಮನಗುಂಡಿ.ಬಸವರಾಜ್ ಮಾದಿ. ಗಂಗಮ್ಮ ಮಾದಿ. ಶಿವಲಿಂಗಪ್ಪ ಎಲಿವಾಳ. ಐಸಿ ಗೋಕುಲ್. ಅಣ್ಣಪ್ಪ ಓಲೆಕಾರ್. ಗೀತಾ ಮರ್ಲಿಂಗಣ್ಣರ. ಸಿ ಎಫ್ ಪಾಟೀಲ್. ವಿಜಯಲಕ್ಷ್ಮಿ ಆಡಿನವರ. ಅಶೋಕ್ ಮಾದಿ. ಮಂಜುನಾಥ್ ಕೆಲಗೇರಿ. ನಿಜಗುಣಿ ಕೆಲಗೇರಿ. ಗುರುಸಿದ್ಧಪ್ಪ ಟೋಗಳಿ. ಫಕ್ಕಿರೇಶ್ ನೆಸ್ರೆಕರ್. ವಿರುಪಾಕ್ಷಿ ನುಲ್ವಿ. ಕಲ್ಲಪ್ಪ ಪುಟ್ಟಪ್ಪನವರ್. ಪಕ್ಷದ ಎಲ್ಲಾ ಕಾರ್ಯಕರ್ತರು ಚುನಾಯಿತ ಪ್ರತಿನಿಧಿಗಳು ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.