ರಾಜ್ಯ ಕೇಂದ್ರ ಸರ್ಕಾರಗಳಿಂದ ರೈತರಿಗೆ ಅನ್ಯಾಯ- ವಾಸುದೇವ ಮೇಟಿ
ಹುಬ್ಬಳ್ಳಿ : ಯಾವುದೇ ವಿಷಯಗಳಲ್ಲಿ ಯಾವುದೇ ರೈತರ ಶ್ರೇಯೋಭಿವೃದ್ಧಿಯದಲ್ಲಿ ರೈತ ಪರ ಆಡಳಿತವನ್ನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಾಡತಾ ಇಲ್ಲ ಆದ್ದರಿಂದ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಹಸಿರು ಸೇನೆ ಬೆಂಬಲಿತ ಅಭ್ಯರ್ಥಿಯನ್ನ ಇಳಿಸುವುದಾಗಿ ಹಸಿರು ಸೇನೆ ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಧಾರವಾಡವಜಿಲ್ಲೆ ಸೇರಿದಂತೆ ರಾಜ್ಯಬರದಿಂದ ಮುಕ್ತವಾಗಿಲ್ಲ. ಇಲ್ಲೂ ಕೂಡ ನರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಕಾರಣ ರೈತಾಪಿ ವರ್ಗ ಕಂಗಾಲಾಗಿದೆ. ಹೀಗಾಗಿ ರೈತರು ಬರಗಾಲ ಕಾಮಗಾರಿ ಹಾಗೂ ಬರ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.ಯಾವುದೇ ಸಹಕಾರ ಸಹಾಯ ಆಗಿಲ್ಲ.
ಪ್ರತಿ ಬಜೆಟ್ ನಲ್ಲಿಯೂ ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಗೆ ಅನುದಾನ ಮೀಸಲಿಡಲಾಗುತ್ತದೆ. ಆದ್ರೆ ಇಲ್ಲಿಯವರೆಗೂ ಕಾಮಗಾರಿ ಆರಂಭವಾಗಿಲ್ಲ ಎಂಬ ಅಸಮಾಧಾನ ಇಲ್ಲಿನ ಜನರಲ್ಲಿದೆ. ಆದ್ರೆ ಈ ಬಾರಿ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಘೋಷಣೆ ಮಾಡುವದರ ಮೂಲಕ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ. ಅದರ ಜೊತೆಗೆ ಬೆಣ್ಣೆ ಹಳ್ಳ ಯೋಜನೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಪ್ರತಿ ವರ್ಷ ಹಳ್ಳದಿಂದ ರೈತ ಬೆಳೆ ಹಾನಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಇದು ಈಡೇರಿಲ್ಲ
*ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ನಿರೀಕ್ಷೆ ಹುಸಿ*
ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ, ಮಹದಾಯಿ ಕಾಮಗಾರಿಗೆ ಹಣ ಮೀಸಲು, ಬೆಣ್ಣೆಹಳ್ಳದ 1246 ಕೋಟಿ ರೂಪಾಯಿ ಡಿಪಿ ಆರ್ ಆಗಿದ್ದು ಅದನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ. ಇದಲ್ಲದೆ ನವಲಿ ಏತನೀರಾವರಿ ಯೋಜನೆಗರ 10 ಸಾವಿರ ಕೋಟಿ ಘೋಷಣೆ ಮಾಡಬೇಕು. ಬಸವಣ್ಣ ಏತನೂರಾವರಿ, ಭದ್ರಾಮೇಲ್ದಂಡೆ ಯೋಜನೆಗಳಿಗೆ ಹೆಚ್ಚಿನ ಅನುದಾನ ಮೀಸಲಿಡುವ ಆಗಿಲ್ಲ.
ರೈತರ ಮಾರಕವಾದ ಕಾನೂನು ಕೇಂದ್ರ ಸರ್ಕಾರ ಜಾರಿ ಮಾಡಿತು. ಇನ್ನು ಸರಿಯಾಗಿ ಬೆಂಬಲ ಬೆಲ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು