ಜೋಶಿಯವರಿಂದ ಎಸ್ ಎಸ್ ಕೆ ಸಮಾಕ್ಕೋ ಅನ್ಯಾಯ ಆಗಿದೆ: ನಾಯಕವಾಡಿ
ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಹಾಗೂ ಲಿಂಗಾಯತ ಸಮಾಜಕ್ಕೆ ಏನು ಕೊಡುಗೆ ಕೊಟ್ಟಲ್ಲ ಅವರಿಂದ ಸಮಾಜಕ್ಕೆ ಅನ್ಯಾಯ ಆಗಿದೆ ಎಂಬ
ಗದಗ ಜಿಲ್ಲೆಯ ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ
ಸ್ವಾಗತಾರ್ಹ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಾಜು ಅನಂತಸಾ ನಾಯಕವಾಡಿ ಹೇಳಿದರು.
ಈ ಕುರಿತು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ಶ್ರೀ ದಿಂಗಾಲೇಶ್ವರ ಸ್ವಾಮೀಜಿ
ಹೇಳಿದ್ದನ್ನು ನಾನು ಸ್ವಾಗತಾ ಮಾಡುವೆ ಅದೇ ರೀತಿ ಎಸ್ ಎಸ್ ಕೆ ಸಮಾಜಕ್ಕೂ ಅನ್ಯಾಯವಾಗಿದೆ.
ನಮ್ಮ ಸಮಾಜವನ್ನು ಉಪಯೋಗ ಮಾಡಿಕೊಂಡು ಒಬ್ಬ ಮಾಜಿ ಮುಖ್ಯಮಂತ್ರಿ ಆಗಿದ್ದಾರೆ ಹಾಗೂ ಕೇಂದ್ರ ಸಚಿವರು ಆಗಿದ್ದಾರೆ. ನಮ್ಮ ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುವುಳಿದಿದೆ . ನಮ್ಮ ಸಮಾಜಕ್ಕೆ ಜೋಶಿ ಅವರಿಂದ ಯಾವುದೇ ಕೊಡುಗೆ ಇಲ್ಲ ಹಾಗಾಗಿ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಚುನಾವಣೆಯನ್ನು ಮಾಡುತ್ತೇನೆ .
ಕಳೆದ 20 ವರ್ಷದಿಂದ ಅಧಿಕಾರ ಇದ್ದರೂ ಸಹ ಇವತ್ತು ಯಾವುದೇ ರೀತಿ ಹುಬ್ಬಳ್ಳಿ ಧಾರವಾಡ ಅಭಿವೃದ್ಧಿ ಕಂಡಿಲ್ಲ ಮತ್ತು ರೈತರಿಗಾಗಿ ಕಳಸ ಬಂಡೂರಿ ಮಹದಾಯಿ ಇದರ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತುತ್ತಿಲ್ಲ ಹಾಗಾಗಿ ಈ ಬಾರಿ ರೈತರು ಸಹ ಬದಲಾವಣೆ ಬಯಸಿದ್ದಾರೆ .
ನನ್ನ ಪ್ರಾಮಾಣಿಕ ಸೇವೆಯನ್ನು ಮೆಚ್ಚಿ ಇವತ್ತು ಹಲವಾರು ಮಠಾಧೀಶರು, ರೈತರು, ಮುಖಂಡರುಗಳು ಎಲ್ಲ ಸಮಾಜದ ಮುಖಂಡರು ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದರು.