*ಶೆಟ್ಟರ್ ಮನವೊಲಿಸಲು ಜೋಶಿ ತಂತ್ರ; ಸೀಮಾ ಮಸೂತಿ ಮನೆಗೆ ಕೇಂದ್ರ ಸಚಿವರ ಭೇಟಿ*
ಧಾರವಾಡ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಧಾರವಾಡ ಗ್ರಾಮೀಣ ಮಾಜಿ ಶಾಸಕಿ ಸೀಮಾ ಮಸೂತಿ ಮನೆಗೆ ಭೇಟಿ ನೀಡಿ, ಉಪಹಾರ ಸವಿದು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು.
ಲಿಂಗಾಯತ ಸಮುದಾಯದ ಪ್ರಮುಖ ಮುಖಂಡರಾದ ಜಗದೀಶ ಶೆಟ್ಟರ್ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದು, ಅಸಮಾಧಾನಗೊಂಡ ನಾಯಕರನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂತೈಸುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಶಾಸಕಿ ಸೀಮಾ ಮಸೂತಿಯವರು ಜಗದೀಶ ಶೆಟ್ಟರ್ ಅವರ ಸಮುದಾಯದವರೇ ಆಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಹಿನ್ನಡೆಯಾಗದಂತೆ ಜಗದೀಶ ಶೆಟ್ಟರ್ ಮನವೊಲಿಸಲು ತಂತ್ರ ರೂಪಿಸಿದ್ದಾರೆ.
ಮಾಜಿ ಶಾಸಕ ಅಮೃತ ದೇಸಾಯಿ, ಮಾಜಿ ಮಹಾಪೌರ ಹಾಗೂ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಅವರೊಂದಿಗೆ ಮಾಜಿ ಶಾಸಕಿ ಸೀಮಾ ಮಸೂತಿ ಮನೆಗೆ ಭೇಟಿ ನೀಡಿ, ಉಪಹಾರ ಸವಿದು ಮಾತುಕತೆ ನಡೆಸಿದ್ದಾರೆ.