ಬಿಜೆಯಿಂದ ಜೋಶಿ ಅಖಾಡಕ್ಕೆ, ಪ್ರಲ್ಹಾದ್ ಗೆ ಇಲ್ಲ ಅಹ್ಲಾದಕರ ವಾತಾವರಣವಿಲ್ಲ

Spread the love

ಬಿಜೆಯಿಂದ ಜೋಶಿ ಅಖಾಡಕ್ಕೆ, ಪ್ರಲ್ಹಾದ್ ಗೆ ಇಲ್ಲ ಅಹ್ಲಾದಕರ ವಾತಾವರಣವಿಲ್ಲ

ಕಲ್ಮೇಶ ಮಂಡ್ಯಾಳ

ಹುಬ್ಬಳ್ಳಿ: ಎಂದಿಗಿಂತಲೂ ಈ ಸಲ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ಪಕ್ಷದ ಒಳೊಳಗೆ ಟಿಕೇಟ್ ಆಕಾಂಕ್ಷಿ ಪಟ್ಟಿ ಬೆಳದಿತ್ತು. ಅದರಲ್ಲೂ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಕೇಂದ್ರ ಪ್ರಲ್ಹಾದ್ ಜೋಶಿ ಅವರಿಗೆ ಟಿಕೇಟ್ ತಪ್ಪಿಸಬೇಕು ಹಾಗೂ ಅವರನ್ನು ಲಿಂಗಾಯತ ವಿರೋಧಿ ಅಂತಾ ಬಿಂಬಿಸುವ ಯತ್ನ ನಡೆಸಲಾಗಿತ್ತು. ಇದರಿಂದಾಗಿ ಸಹಜವಾಗಿಯೇ ಪ್ರಲ್ಹಾದ್ ಜೋಶಿ ಅವರಿಗೆ ಈ ಸಲ ಟಿಕೇಟ್ ಕೊಡಲ್ಲ ಕೊಟ್ಟರೇ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕೊಡತಾರೆ ಅಂತೆಲ್ಲಾ ಚರ್ಚೆ ನಡೆದಿತ್ತು. ಆದರೆ ಈಗ ಅದಕ್ಕೆಲ್ಲಾ ತಿಲಾಂಜಲಿ ಹೇಳಲಾಗಿದ್ದು ಧಲ ಅಭ್ಯರ್ಥಿಗಳ ಪಟ್ಟಿ ಬುಧವಾರ ಸಂಜೆ ಬಿಡುಗಡೆಯಾಗಿದ್ದು ಧಾರವಾಡ ಕ್ಷೇತ್ರಕ್ಕೆ ಹಾಲಿ ಸಂಸದ ಪ್ರಲ್ಲಾದ ಜೋಶಿ ಅವರಿಗೆ ಟಿಕೆಟ್ ಲಭಿಸಿದ್ದು, ಅವರು ಐದನೇ ಬಾರಿ ಚುನಾವಣಾ ಕಣಕ್ಕಿಳಿದಿದ್ದಾರೆ.
ಕಳೆದ ಸಲ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗದ ಕಾರಣ ಜಗದೀಶ ಶೆಟ್ಟ‌ರ್ ಬಿಜೆಪಿ ತೊರೆದು, ಕಾಂಗ್ರೆಸ್ ಸೇರಿದ್ದರು. ಇತ್ತೀಚೆಗೆ ಅವರು ಬಿಜೆಪಿಗೆ ಮರಳಿ, ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಸರತ್ತು ನಡೆಸಿದ್ದರು. ಇದಲ್ಲದೇ, ಈ ಸಲ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿತ್ತು. ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಧಾರವಾಡ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟವಾಗಿರಲಿಲ್ಲ. ಈಗ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು ಅದರಲ್ಲಿ ಹಾಲಿ ಸಂಸದ ಪ್ರಲ್ಹಾದ್ ಜೋಶಿ ಅವರ ಹೆಸರು ಪ್ರಕಟವಾದ ನಂತರ ಭಾರತೀಯ ಜನತಾ ಪಕ್ಷದ ಒಳಗೆ ಅಸಮಾಧಾನ ಹೊಗೆ ಆಡುತಿದೆ. ಈ ಸಲ ಜಗದೀಶ್ ಶೆಟ್ಟರ್ ಅವರಿಗೆ ಟಿಕೇಟ್ ಕೊಡಬೇಕು ಅಂತಾ ಮಾಜಿ ಮುಖ್ಯಮಂತ್ರಿ ಬಿ.‌ಎಸ್ ಯಡಿಯೂರಪ್ಪ ಆದಿಯಾಗಿ ಲಿಂಗಾಯತ ನಾಯಕರು ಪಟ್ಟು ಹಿಡಿದಿದ್ದು ಆದರೆ ಇನ್ನೇನು ಜಗದೀಶ್ ಶೆಟ್ಟರ್ ಗೆ ಟಿಕೇಟ್ ಪೈನಲ್ ಆಯಿತು ಎನ್ನಲಾಗಿತ್ತು. ಆದರೆ ಈ ಭಾರೀ ಸಹ ಬಿ.ಎಲ್ ಸಂತೋಷ ಬಣ ಮೇಲುಗೈ ಸಾಧಿಸಿದ್ದು ಜಗದೀಶ್ ಶೆಟ್ಟರ್ ಅವರ ಕಡು ವೈರಿ ಬಸವರಾಜ ಬೊಮ್ಮಾಯಿಗೆ ಹಾವೇರಿ ಲೋಕಸಭಾ ಟಿಕೇಟ್ ಸಿಕ್ಕರೆ ಪ್ರಲ್ಹಾದ್ ಜೋಶಿಗೆ ಮತ್ತೇ ಐದನೇ ಭಾರೀ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಅದೃಷ್ಟಕ್ಕೆ ಇಳಿಸಿದೆ. ಆದರೆ ಈ ಹಿಂದಿನ ನಾಲ್ಕು ಲೋಕಸಭಾ ಚುನಾವಣೆ ಅಂತೆ ಈ ಸಲ ಇಲ್ಲ ಪ್ರಲ್ಹಾದ್ ಜೋಶಿ ಗೆ ವಾತಾವರಣ ಇಲ್ಲ. ‌ಪ್ರಲ್ಹಾದ್ ಜೋಶಿ ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಟಿಕೇಟ್ ತಪ್ಪಿಸಿದ್ದು ಲಿಂಗಾಯತ ಯುವ ನಾಯಕ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಶಾಸಕ ಇವನ ಕಾಲದಲ್ಲಿ ಕುಲಕರ್ಣಿ ಜೊತೆಗೆ ಸಾಕಷ್ಟು ವೈಷ್ಯಮ್ಮ ಇದರ ಜೊತೆಗೆ ಸತತವಾಗಿ ಐದನೇ ಸಲ‌ ತಾವೇ ಟಿಕೇಟ್ ಪಡೆದು ಸ್ಪರ್ಧಾ ಕಸ ದಲ್ಲಿ ಇರುವ ಜೊತೆಗೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅಷ್ಟೊಂದು ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕೆಲಸ ಆಗದೇ ಇರುವುದು.
ಪುನ‌ರ್ ವಿಂಗಡಣೆಗೆ ಮೊದಲು 2004ರಲ್ಲಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಮೊದಲ ಸಲ ಪ್ರಲಾದ ಜೋಶಿ ಸ್ಪರ್ಧಿಸಿದ್ದರು. ಇದಕ್ಕೂ ಮುಂಚೆ ವಿಜಯ ಸಂಕೇಶ್ವರ 1996, 1998 ,1990 ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ನಂತರ 2004ರಲ್ಲಿ ಬಿಜೆಪಿಯು ಜೋಶಿ ಅವರಿಗೆ ಅವಕಾಶ ನೀಡಿತು.
ಅಲ್ಲಿಂದ ಸತತ ನಾಲ್ಕು ಚುನಾವಣೆಗಳಲ್ಲಿ ಪ್ರಲ್ಹಾದ್ ಜೋಶಿ ಅವರು ಜಯಗಳಿಸಿದ್ದಾರೆ. 2004, 2009, 2014 ಹಾಗೂ 2019ರಲ್ಲಿ ಜಯಗಳಿಸಿದ್ದಾರೆ. ಪ್ರತಿ ಚುನಾವಣೆಯಲ್ಲೂ ತಮ್ಮ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿದ್ದಾರೆ. ಕಳೆದ 2019ರ ಚುನಾವಣೆಯಲ್ಲಿ 6.84 ಲಕ್ಷ ಮತ ಪಡೆದಿದ್ದು, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಅವರಿಗಿಂತ 2.05 ಲಕ್ಷಕ್ಕಿಂತ ಹೆಚ್ಚು ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಗಳಾದ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಐದು ವರ್ಷ ಪೂರ್ಣಾವಧಿಯವರೆಗೆ ಸಮರ್ಥವಾಗಿ ನಿರ್ವಹಿಸಿದ್ದಾರೆ.‌
ಪ್ರಲ್ಹಾದ್ ಜೋಶಿ ಅವರು
ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದಿದ್ದು ಹುಬ್ಬಳ್ಳಿಯ ಈದ್ದಾ ಮೈದಾನದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. 2012ರಿಂದ ನಾಲ್ಕು ವರ್ಷ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈಗ ಅವರ ಮುಂದೆ ದೊಡ್ಡ ಸವಾಲು ಅಂತೋ ಇದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಯಶಾಲಿಯಾಗಬೇಕು.


Spread the love

Leave a Reply

error: Content is protected !!