ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಮಹಿಳಾ ದಿನಾಚರಣೆ

Spread the love

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಮಹಿಳಾ ದಿನಾಚರಣೆ

‘ಅವಳ ಸಬಲೀಕರಣ’ ಶಿರ್ಷಿಕೆ ಅಡಿಯಲ್ಲಿ ಆಯೋಜನೆ

ಹುಬ್ಬಳ್ಳಿ: ನಗರದ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಪ್ರಾದೇಶಿಕ ಕಚೇರಿ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಅವಳ ಸಬಲೀಕರಣ ಶಿರ್ಷಿಕೆ ಅಡಿಯಲ್ಲಿ ಆಯೋಜಿಸಲಾಗಿತ್ತು. ಅದರ ಅಂಗವಾಗಿ ಪಿಂಕಾಥೋನ್, ಉಚಿತ ಮೆಡಿಕಲ್ ಆರೋಗ್ಯ ತಪಾಸಣೆ ಮತ್ತು ಮಹಿಳಾ ಸಹದ್ಯೋಗಿಗಳಿಗೆ, ಸರ್ವೋದಯ ಮಲ್ಟಿ ಸ್ಪೇಷಾಲಿಟಿ ಕ್ಲಿನಿಕ್ ಅವರ ಸಹಯೋಗದಲ್ಲಿ ಆಯೋಜಿಸಿದ್ದರು.
. ಈ ಸಂದರ್ಭದಲ್ಲಿ ಮಹಿಳಾ ಗ್ರಾಹಕರಿಗೆ ಹಾಗೂ ಮಹಿಳಾ ಸಹದ್ಯೋಗಿಗಳಿಗೆ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ ಹರಿ ರಾಮ್ ಎಸ್.ವಿ.ಎಸ್. ಪ್ರಾದೇಶಿಕ ಮುಖ್ಯಸ್ಥರು, ಶ್ರೀಮತಿ ತೇಜಸ್ವಿನಿ ಉಪ ಪ್ರಾದೇಶಿಕ ಮುಖ್ಯಸ್ಥರು, ಶ್ರೀ ರಿತೇಶ ಕುಮಾರ, ಉಪ ಪ್ರಾದೇಶಿಕ ಮುಖ್ಯಸ್ಥರು ಮತ್ತಿತರು ಉಪಸ್ಥಿತರಿದ್ದರು. ಕುಮಾರಿ ನಾಗರತ್ನ ಎಮ್. ಎನ್. ಹಿರಿಯ ಪ್ರಬಂಧಕರು ಕಾರ್ಯಕ್ರಮ ಆಯೋಜಿಸಿದ್ದರು. ಲೀಲಾವತಿ ಹಾಗೂ ಇತರ ಮಹಿಳಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


Spread the love

Leave a Reply

error: Content is protected !!