Breaking News

ಮುಸ್ಲಿಮ್ ತುಷ್ಟೀಕರಣವೇ ಕಾಂಗ್ರಸ್ ನೀತಿ: ಮೇಘವಾಲ್

Spread the love

ಮುಸ್ಲಿಮ್ ತುಷ್ಟೀಕರಣವೇ ಕಾಂಗ್ರಸ್ ನೀತಿ: ಮೇಘವಾಲ್

ಹುಬ್ಬಳ್ಳಿ: ಬಹು ಮೊದಲಿನಿಂದಲೂ ಮುಸ್ಲಿಮ್ ತುಷ್ಟೀಕರಣವೇ ಕಾಂಗ್ರೆಸ್ ನೀತಿಯಾಗಿದೆ. ಆದರೆ ದೇಶದ ಅಭಿವೃದ್ಧಿಯಾ ಬಿಜೆಪಿ ಕಾರ್ಯಕ್ರಮವಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ ರಾಮ ಮೇಘವಾಲ್ ಇಂದಿಲ್ಲಿ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಮುಸ್ಲಿಮರು ಕಾಂಗ್ರೆಸ್ ತ್ಯಜಿಸಿ ಸಮಾಜವಾದಿ ಪಕ್ಷಕ್ಕೂ, ಬಹುಜನ ಸಮಾಜ ಪಕ್ಷಕ್ಕೂ ನಂತರ ತೃಣಮೂಲ ಕಾಂಗ್ರೆಸ್ಗೂ ಬೆಂಬಲ ನೀಡುತ್ತ ಬಂದರು. ಕಾಂಗ್ರೆಸ್ನ ಥಿಂಕ್ ಟ್ಯಾಂಕ್ ಆಗಿದ್ದ ಜೈರಾಮ ರಮೇಶ ಹಾಗೂ ಸ್ಯಾಮ ಪಿತ್ರೋಡಾ ಮೊದಲಾದವರು ಇದಕ್ಕೆ ಕಾರಣ ಏನು ಎಂದು ಚರ್ಚೆ ನಡೆಸಿದರು. ಆಗ ಮುಸ್ಲಿಮರನ್ನು ಮತ್ತೆ ಪಕ್ಷದತ್ತ ವಾಲಿಸಿಕೊಳ್ಳಲು ಕಾಂಗ್ರೆಸ್ ಮುಸ್ಲಿಮ್ ತುಷ್ಟೀಕರಣ ನೀತಿಯನ್ನೇ ತನ್ನ ಅಜೆಂಡಾ ಮಾಡಿಕೊಂಡಿತು ಎಂದು ದೂರಿದರು.
ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಆಗಿನ ಪ್ರಧಾನ ಮಂತ್ರಿ ಡಾ.ಮನಮೋಹನ ಸಿಂಗ್ ಈ ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಹೇಳಿದ್ದರು. ೨೦೦೯ ರಲ್ಲಿ ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲೂ ಅದನ್ನು ಪುನರುಚ್ಛರಿಸಿದ್ದರು. ಇದರ ಮುಂದುವರೆದ ಭಾಗವಾಗಿ ಪ್ರಸ್ತುತ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಮುಸ್ಲಿಮರಿಗೇ ವಿಶೇಷವಾಗಿ ಯೋಜನೆಗಳನ್ನು ಪ್ರಕಟಿಸಿದೆ ಎಂದರು.


Spread the love

About Karnataka Junction

    Check Also

    ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ

    Spread the loveಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಡಿ. ಡಿ.ಮಾಳಗಿ ನೇತೃತ್ವದಲ್ಲಿ ಸನ್ಮಾನ ಹುಬ್ಬಳ್ಳಿ: ಕೇಂದ್ರ ಆಹಾರ ಹಾಗೂ ಗ್ರಾಹಕ …

    Leave a Reply

    error: Content is protected !!