*ತಡಸದಲ್ಲಿ ಜೋಶಿ ಪರ ಪತ್ನಿ ಜ್ಯೋತಿ ಮತಯಾಚನೆ*
ಹುಬ್ಬಳ್ಳಿ: ಬಿಜೆಪಿ ಅಭ್ಯರ್ಥಿ, ಸಚಿವ ಪ್ರಲ್ಹಾದ ಜೋಶಿ ಪರ ಪತ್ನಿ ಜ್ಯೋತಿ ಜೋಶಿ ಅವರು ಶುಕ್ರವಾರ, ತಡಸದ ಮುತ್ತಳ್ಳಿಯಲ್ಲಿ ಮತಯಾಚಿಸಿದರು.
ಈ ವೇಳೆ ಮಾತನಾಡಿದ ಜ್ಯೋತಿ ಜೋಶಿ ಅವರು, ಕಳೆದ ಹತ್ತು ವರ್ಷಗಳಲ್ಲಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಧಾರವಾಡವೂ ಸರ್ವತೋಮುಖ ಬೆಳವಣಿಗೆ ಕಾಣುತ್ತಿದ್ದು, ಮುಂದೆಯೂ ಅಭಿವೃದ್ಧಿ ಮುಂದುವರೆಯಲು ಮತ್ತೆ ಬಿಜೆಪಿಯನ್ನು ಮತ್ತೆ ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಪ್ರಮುಖರು ಮತ್ತು ಕಾರ್ಯಕರ್ತೆಯರು ಉಪಸ್ಥಿತರಿದ್ದರು.