ಶೀಘ್ರವೇ ತಾಲೂಕು ಜಿಲ್ಲಾ ಪಂಚಾಯತ ಚುನಾವಣೆ ನಡೆಸಲು ಒತ್ತಾಯ – ವಿಪ ಸದಸ್ಯ ನವೀನ
ಹುಬ್ಬಳ್ಳಿ: ಶೀಘ್ರವೇ ತಾಲೂಕು ಜಿಲ್ಲಾ ಪಂಚಾಯತ ಚುನಾವಣೆ ನಡೆಸಲು ಒತ್ತಾಯ ಮಾಡುತ್ತೇವೆ ಎಂದು
ವಿಧಾನ ಪರಿಷತ್ ಸದಸ್ಯ ಹಾಗೂ
ಧಾರವಾಡ ಲೋಕಸಭಾ ಕ್ಷೇತ್ರದ ಕ್ಲಸ್ಟರ್ ಪ್ರಮುಖ ನವೀನ್ ಒತ್ತಾಯ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು
ಜಿಲ್ಲಾ ತಾಲೂಕು ಪಂಚಾಯತಿ ಚುನಾವಣಗೆ ಮೀಸಲಾತಿ ವಿಚಾರದಲ್ಲಿ ಗೊಂದಲ ಉಂಟಾಗಿದ್ದುಕೇಲವರು ಕೋರ್ಟ್ ಮುಟ್ಟಲು ಏರಿದ್ದಾರೆ.
ಓಬಿಸಿ ಮೀಸಲಾತಿ ಸರಿಯಾಗಿಲ್ಲ ಅಂತಾ ಕೋರ್ಟ್ ಗೆ ಹೋಗಿದ್ದಾರೆ
ನಮಗೂ ಬೇಗಾ ಚುನಾವಣಾ ನಡೆಸಬೇಕು ಎಂಬ ಒತ್ತಾಯ ಇದೆ ಎಂದರು. ಇನ್ನು
ಕೇಂದ್ರ ಸರ್ಕಾರದಿಂದ ಸ್ಥಳೀಯ ಸಂಸ್ಥೆಗಳಿಗೆ ಬರಬೇಕಾದ ಅನುದಾನ ಕೊಡಲಿಸಲು ಪ್ರಯತ್ನ ಮಾಡಲಾಗುವುದುನರೇಗಾ ಸೇರಿದಂತೆ ಇತರ ಯೋಜನೆ ಹಣ ನೀಡಲು ಸಿದ್ಧಕಳೆದ ನಮ್ಮ ಸರ್ಕಾರ ಇದ್ದಾಗ ಎಲ್ಲ ಅನುದಾನ ಕೊಡಲಾಗಿದೆ ಮಾಜಿ ಸಚಿವ ಈಶ್ವರಪ್ಪ ನವರು ಆರ್ ಡಿಪಿ ಆರ್ ಸಚಿವರು ಇದ್ದಾಗ ಎರಡು ಜಿಲ್ಲೆ ಬಿಟ್ಟು ಎಲ್ಲ ಜಿಲ್ಲೆಗಳಿಗೆ ತಕ್ಷಣ ಹಣ ನೀಡಲಾಯಿತುಚಾಮರಾಜನಗರ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ವಿಳಂಬ ಆಯಿತು
ಅದು ಕೇಲ ಅಂಕಿ ಅಂಶಗಳು ಸರಿಯಾಗಿ ಇರಲಿಲ್ಲ ಎಂದರು.
ಕೇಂದ್ರ ಸರ್ಕಾರಮಾಡಿದ ಜನಪರ ಕಾರ್ಯ ತಿಳಿಸುವುದು ಹಾಗೂ ರಾಜ್ಯದ ಸಮಸ್ಯೆಗಳ ಮಾಹಿತಿ ಪಡೆಯಲು ಭಾರತೀಯ ಜನತಾ ಪಕ್ಷ ಮುಂದಾಗಿದೆ.ರಾಜ್ಯಾದ್ಯಂತ 9 ತಂಡಗಳನ್ನ ಮಾಡಲಾಗಿದೆ
ಪ್ರತಿಯೊಂದು ತಂಡಕ್ಕೆ ಮೂರು ನಾಲ್ಕು ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ ಎಂದರು
ರಾಜ್ಯಾಧ್ಯಕ್ಷ ಅಧ್ಯಕ್ಷರಾದ ವಿಜೇಯಂದ್ರ ಜವಾಬ್ದಾರಿ ನೀಡಿದ್ದಾರೆಒಂದೊಂದು ಜಿಲ್ಲೆಯಲ್ಲಿ ಒಂದೊಂದು ಕಾರ್ಯಕ್ರಮ ಮಾಡಲು ಸೂಚನೆ ಧಾರವಾಡ ಜಿಲ್ಲೆಯ ವಿವಿಧ ಕ್ಷೇತ್ರಗಳ ಪ್ರಮುಖರ ಜೊತೆಗೆ ಸಭೆ ಹಾಗೂ
ಸಂವಾದ ನಂತರ ಸಲಹೆ ಸೂಚನೆಗಳನ್ನು ಪಡೆಯಲಾಯಿತು
ಸಣ್ಣ ಸಣ್ಣ ಸಮುದಾಯಗಳ ಪ್ರಮುಖರ ಜೊತೆಗೆ ಸಹ ಸಂವಾದ ಮಾಡಲಾಗುತ್ತದೆ
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆಗೆ ಮುಖ್ಯಮಂತ್ರಿಗಳು ಅವಕಾಶ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಬರಗಾಲದ,ಕುಡಿಯುವ ನೀರು, ರೈತರ ಆತ್ಮಹತ್ಯೆ ಕುರಿತು ಚರ್ಚೆಗೆ ಸಹ ಅವಕಾಶ ಕೊಡಲಿಲ್ಲ
ಯಾವುದೇ ರೀತಿಯ ಚರ್ಚೆ ಮಾಡಲಿಲ್ಲ ಸರ್ವಾಧಿಕಾರಿ ಧೋರಣೆ ತೋರಿಸಿದರುಸರ್ಕಾರದ ಕಡೆಯಿಂದ ಯಾವುದೇ ಬರ ಪರಿಹಾರ ವಿತರಣೆ ಆಗಿಲ್ಲ ಎಂದರು. ಈಗ
15 ನೇ ಹಣಕಾಸು ಯೋಜನೆ ಕುರಿತು ಮಾತಡತಾ ಇಲ್ಲ
ಸುಮ್ಮನೆ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡತಾ ಇದ್ದಾರೆ
ರಾಜ್ಯ ಸರ್ಕಾರ 14 ನೇ ಹಣಕಾಸು ಯೋಜನೆ ಕುರಿತು ಮಾತಾಡ್ತಾರೆ
ಇದು ಈಗ ಸಮಂಜಸವಾದ ವಿಷಯವಲ್ಲ ಎಂದರು, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಸಂಜಯ ಕಪಟಕರ್, ವಕ್ತಾರ ರವಿ ನಾಯಕ, ದತ್ತ ಮೂರ್ತ ಕುಲಕರ್ಣಿ ಇದ್ದರು