Breaking News

*ಮನಗುಂಡಿ ಮಹಾಮನೆ, ದೇವರ ಹುಬ್ಬಳ್ಳಿ ಸಿದ್ದಾಶ್ರಮ ಮಠಕ್ಕೆ ಜೋಶಿ ಭೇಟಿ*

Spread the love

*ಮನಗುಂಡಿ ಮಹಾಮನೆ, ದೇವರ ಹುಬ್ಬಳ್ಳಿ ಸಿದ್ದಾಶ್ರಮ ಮಠಕ್ಕೆ ಜೋಶಿ ಭೇಟಿ*

*- ಶ್ರೀಗಳ ಆಶೀರ್ವಾದ ಪಡೆದು ಮತಯಾಚನೆ*

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಗುರುವಾರ, ಧಾರವಾಡದ ಮನಗುಂಡಿ ಮಹಾಮನೆ ಮಠ ಮತ್ತು ದೇವರ ಹುಬ್ಬಳ್ಳಿ ಸಿದ್ದಾಶ್ರಮ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಮಹಾಮನೆ ಮಠದಲ್ಲಿ ಶ್ರೀ ಬಸವಾನಂದ ಸ್ವಾಮಿಗಳ ಹಾಗೂ ದೇವರ ಹುಬ್ಬಳ್ಳಿಯ ಸಿದ್ದಾಶ್ರಮ ಮಠದಲ್ಲಿ ಶ್ರೀ ಸಿದ್ಧಯೋಗಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಧಾರವಾಡ ಲೋಕಸಭಾ ಚುನಾವಣೆಗೆ ಸತತ 5ನೇ ಬಾರಿ ಬಿಜೆಪಿಯಿಂದ ಸ್ಪರ್ಧಿಸಿರುವ ಪ್ರಲ್ಹಾದ ಜೋಶಿ ಅವರು ಗುರುವಾರ ಬೆಳಗಿನಿಂದಲೇ ಚುನಾವಣಾ ಪ್ರಚಾರ ಚುರುಕುಗೊಳಿಸಿದರು.

ದೇವರ ಹುಬ್ಬಳ್ಳಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಅವರು ಕಳೆದ ಹತ್ತು ವರ್ಷಗಳಿಂದ ದೇಶದ ಪ್ರಗತಿಯನ್ನೇ ಗುರಿಯಾಗಿಟ್ಟುಕೊಂಡು ಶ್ರಮಿಸಿದ್ದಾರೆ ಎಂದು ಹೇಳಿದರು.

ಹಲವು ಯೋಜನೆಗಳ ಮ‌ೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುತ್ತಿರುವ ಮೋದಿ ಅವರ ಕೈ ಬಲಪಡಿಸಲು ಎಲ್ಲರೂ ಒಂದಾಗಿ ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಆರತಿ ಹಿರೇಮಠ, ಕಲ್ಮೇಶ್ ಬೇಲೂರು, ರುದ್ರಗೌಡ ಪಾಟೀಲ್, ಮಾಲ್ತೇಶ ತೌಲಿ, ಬಸವರಾಜ್ ಮನಗುಂದ, ಮಲ್ಲನಗೌಡ ಪಾಟೀಲ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.


Spread the love

About Karnataka Junction

    Check Also

    ಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು

    Spread the loveಲೈಂಗಿಕ ದೌರ್ಜನ್ಯ, ಕೊಲೆಗೆ ಯತ್ನ, ಸಿಆರ್‌ಪಿಎಫ್‌ ನೌಕರನ ಮೇಲೆ ಮಹಿಳೆಯಿಂದ ದೂರು ಹುಬ್ಬಳ್ಳಿ: ಸಿಆರ್‌ಪಿಎಫ್‌ನಲ್ಲಿ ಕೆಲಸ ಮಾಡುತ್ತಿರುವ …

    Leave a Reply

    error: Content is protected !!